More

    ನಾಗಚೈತನ್ಯ ಹೆತ್ತ ತಾಯಿಯಿಂದ ದೂರ ಉಳಿದಿರುವುದೇಕೆ? ನೆಚ್ಚಿನ ನಟನಿಗೆ ಹೀಗಾಗಬಾರದಿತ್ತು ಅಂದ್ರು ಫ್ಯಾನ್ಸ್​!

    ಹೈದರಾಬಾದ್​: ಟಾಲಿವುಡ್​ ಸೂಪರ್​ ಸ್ಟಾರ್​ ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ ಮೊದಲ ಪತ್ನಿ ಲಕ್ಷ್ಮೀ ಅವರಿಗೆ ಡಿವೋರ್ಸ್​ ನೀಡಿರುವುದು ಹಳೆಯ ವಿಚಾರ. ನಟ ನಾಗಚೈತನ್ಯ ಇವರಿಬ್ಬರ ಪುತ್ರನೆಂಬುದು ಸಹ ತಿಳಿದಿರುವ ಸಂಗತಿ. ಸದ್ಯ ಲಕ್ಷ್ಮೀ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಕೆಲವು ವರ್ಷಗಳವರೆಗೆ ತಾಯಿಯ ಜತೆಗಿದ್ದ ನಾಗಚೈತನ್ಯ ಇದೀಗ ಹೈದರಾಬಾದ್​ನಲ್ಲೇ ಉಳಿದುಕೊಂಡು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

    ಇನ್ನು ನಾಗಾಚೈತನ್ಯ ತನ್ನ ತಾಯಿಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಷ್ಟಕ್ಕೂ ನಾಗಚೈತನ್ಯ ತಾಯಿಯೊಂದಿಗೆ ಏಕೆ ಇರುತ್ತಿಲ್ಲ? ಈ ವಿಚಾರವನ್ನು ಮುಂದಿಟ್ಟುಕೊಂಡು ನಾಗಚೈತನ್ಯ ಅವರನ್ನು ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ನಾಗಚೈತನ್ಯ ತಾಯಿ ಜೊತೆಗಿದ್ದರೆ ಇಲ್ಲಿ ಸಿನಿಮಾ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಮೆರಿಕಕ್ಕೆ ಹೋಗುವ ಬದಲು ಇಲ್ಲೇ ಇದ್ದು ಸಿನಿಮಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

    ಆದರೆ ಲಕ್ಷ್ಮಿ ಅವರು ನಾಗಾರ್ಜುನ ಜೊತೆ ಬ್ರೇಕ್ ಅಪ್ ಆದ ನಂತರ ಮತ್ತೊಂದು ಮದುವೆಯಾಗಿ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಅಂದಿನಿಂದ ಲಕ್ಷ್ಮೀ ಅವರು ತೆಲಂಗಾಣಕ್ಕೆ ಬಂದಿಲ್ಲ. ಹೀಗಾಘಿ ನಾಗಚೈತನ್ಯ ಕೂಡ ತಮ್ಮ ತಾಯಿಯನ್ನು ಇಲ್ಲಿಗೆ ಕರೆತರುವ ಪ್ರಯತ್ನವನ್ನು ಮಾಡಿಲ್ಲ. ಹೀಗಾಗಿ ತಾಯಿ ಮತ್ತು ಮಗನ ನಡುವಿನ ಬಾಂದವ್ಯ ಅಷ್ಟಕಷ್ಟೆ ಎಂದು ಹೇಳಲಾಗಿದೆ. ನಾಗಚೈತನ್ಯ ಅವರು ತಮ್ಮ ತಾಯಿ ಪ್ರೀತಿಯನ್ನು ಕಳೆದುಕೊಂಡಿದ್ದಾರೆ ಎಂದು ಅವರ ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ.

    ನಾಗಚೈತನ್ಯ ಅವರು ಒಂದೆಡೆ ತಾಯಿಯಿಂದ ದೂರ ಉಳಿದಿದ್ದಾರೆ. ಅಲ್ಲದೇ ತಾನು ತುಂಬಾ ಪ್ರೀತಿಸಿ ಮದುವೆಯಾಗಿದ್ದ ಸಮಂತಾರಿಂದಲೂ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಹೀಗಾಗಿ ನಾಗಚೈತನ್ಯ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಕಾಳಜಿ ಇದೆ. ಆದರೆ, ಯಾವುದೇ ನೋವನ್ನು ಲೆಕ್ಕಿಸದೇ ನಾಗಚೈತನ್ಯ ಅವರು ಸಿನಿಮಾ ಮಾಡುತ್ತಾ ಮುಂದೆ ಸಾಗುತ್ತಿದ್ದಾರೆ.

    ಸದ್ಯ ನಾಗಚೈತನ್ಯ ಅವರು ತಂದೇಲ್​ ಸಿನಿಮಾದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರವನ್ನು ಚಂದೂ ಮೊಂಡೇಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮೀನುಗಾರನ ಪಾತ್ರದಲ್ಲಿ ನಾಗಚೈತನ್ಯ ಮಿಂಚಿದ್ದಾರೆ. (ಏಜೆನ್ಸೀಸ್​)

    ಬೇಡ ಅಂದ್ರು ಓಡಿ ಹೋಗಿ ಪ್ರಿಯಕರನನ್ನು ವರಿಸಿದ ಮಗಳು! ಶ್ರದ್ಧಾಂಜಲಿ ಫ್ಲೆಕ್ಸ್​ ಅಳವಡಿಸಿ ಗೋಳಿಟ್ಟ ತಂದೆ

    ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ಧನುಷ್​ ಮತ್ತು ಐಶ್ವರ್ಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts