ಬೇಡ ಅಂದ್ರು ಓಡಿ ಹೋಗಿ ಪ್ರಿಯಕರನನ್ನು ವರಿಸಿದ ಮಗಳು! ಶ್ರದ್ಧಾಂಜಲಿ ಫ್ಲೆಕ್ಸ್​ ಅಳವಡಿಸಿ ಗೋಳಿಟ್ಟ ತಂದೆ

Daughter

ಹೈದರಾಬಾದ್​: ತುಂಬಾ ಪ್ರೀತಿಯಿಂದ ಸಾಕು ಸಲುಹಿದ ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ತಂದೆ ಆಕ್ರೊಶ ವ್ಯಕ್ತಪಡಿಸಿದ ರೀತಿ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಮಗಳು ಬದುಕಿರುವಾಗಲೇ ಆಕೆಯ ಶ್ರದ್ಧಾಂಜಲಿ ಫ್ಲೆಕ್ಸ್​ ಅಳವಡಿಸಿ, ಕುಟುಂಬವೇ ಕಣ್ಣೀರಿಟ್ಟಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗಿದೆ.

ಈ ಘಟನೆ ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ. ಇಷ್ಟವಿಲ್ಲದಿದ್ದರೂ ಮಗಳು ಚಿಲುವೆರಿ ಅನುಷಾ ಪ್ರೇಮ ವಿವಾಹವಾಗಿರುವುದು ತಂದೆ ಮತ್ತು ತಾಯಿಯ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಮಗಳು ಜೀವಂತವಾಗಿರುವಾಗಲೇ ಮನೆಯ ಮುಂದೆ ಶ್ರದ್ಧಾಂಜಲಿ ಫ್ಲೆಕ್ಸ್​ ಅಳವಡಿಸಿ, ಜನನ ಮತ್ತು ಮರಣದ ದಿನಾಂಕವನ್ನು ಬರೆಸಿ, ಫ್ಲೆಕ್ಸ್​ ಮುಂದೆ ಇಡೀ ಕುಟುಂಬ ಗೊಳೋ ಎಂದು ಅಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಇದಿಷ್ಟೇ ಅಲ್ಲದೆ, ಮಗಳಿಗೆ ಪಿಂಡ ಪ್ರದಾನ ಮಾಡಿರುವುದಾಗಿಯೂ ಸಂಬಂಧಿಕರಿಗೆ ತಿಳಿಸಿದ್ದಾರೆ. ಸದ್ಯ ಪಾಲಕರು ಕಣ್ಣೀರಿಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಮಗಳನ್ನು ಪ್ರೀತಿಯಿಂದ ಸಾಕಿದ ತಂದೆಗೆ ಇಂತಹ ಅನ್ಯಾಯ ಆಗಬಾರದಿತ್ತು. ಅವರ ಮನವೊಲಿಸಿ ಮದುವೆ ಮಾಡಿಕೊಳ್ಳಬೇಕಿತ್ತು. ಓಡಿ ಹೋಗುವ ಮೂಲಕ ತಂದೆ-ತಾಯಿಯ ತಲೆ ತಗ್ಗಿಸುವಂತೆ ಮಾಡಿದ ಮಗಳ ವಿರುದ್ಧ ಪಾಲಕರು ಪ್ರತಿಭಟಿಸಿದ ರೀತಿ ಸರಿಯಿದೆ ಎಂದು ನೆಟ್ಟಿಗರು ಕಾಮೆಂಟ್​ ಮೂಲಕ ಯುವತಿಯ ನಡೆಯನ್ನು ಟೀಕಿಸುತ್ತಿದ್ದಾರೆ.

ಅಂದಹಾಗೆ ಅನುಷಾ ತುಂಬಾ ದಿನಗಳಿಂದ ಪ್ರೀತಿ ಮಾಡುತ್ತಿದ್ದ ಯುವಕನ ಜತೆ ಇತ್ತೀಚೆಗಷ್ಟೇ ಓಡಿ ಹೋಗಿ ಮದುವೆಯಾಗಿದ್ದಾಳೆ. ಎಷ್ಟೇ ಹೇಳಿದರೂ ಕೇಳದೇ ಪ್ರಿಯಕರನ ಹಿಂದೆ ಹೋಗಿದ್ದು, ಈ ನೋವನ್ನು ಸಹಿಸಲಾರದೇ ತಂದೆ-ತಾಯಿ ಈ ರೀತಿಯಾಗಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಪಾಲಿಗೆ ಮಗಳು ಸತ್ತು ಹೋಗಿದ್ದಾಳೆ ಎಂದು ಭಾವಿಸಿ, ವಿಧಿವಿಧಾನ ಸಹ ನೆರವೇರಿಸಿದ್ದಾರೆ. (ಏಜೆನ್ಸೀಸ್​)

ಎಷ್ಟೇ ಬ್ಯುಸಿ ಇದ್ದರೂ ನಾನು 1 ಗಂಟೆಯಾದ್ರೂ..ಹೀಗೆ ಮಾಡ್ಲೆಬೇಕು ಎಂದ್ರು ಮಿಲ್ಕಿ ಬ್ಯೂಟಿ ತಮನ್ನಾ

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…