More

  ಎಷ್ಟೇ ಬ್ಯುಸಿ ಇದ್ದರೂ ನಾನು 1 ಗಂಟೆಯಾದ್ರೂ..ಹೀಗೆ ಮಾಡ್ಲೆಬೇಕು ಎಂದ್ರು ಮಿಲ್ಕಿ ಬ್ಯೂಟಿ ತಮನ್ನಾ

  ಮುಂಬೈ: ಟಾಲಿವುಡ್ ಇಂಡಸ್ಟ್ರಿಯ ಸ್ಟಾರ್ ಹೀರೋಯಿನ್ ಗಳಲ್ಲಿ ತಮನ್ನಾ ಕೂಡ ಒಬ್ಬರು. ಅವರ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಎದುರು ನಟಿಸಿದ್ದಾರೆ.

  ಇಂಡಸ್ಟ್ರಿಗೆ ಎಂಟ್ರಿಯಾಗಿ 17 ವರ್ಷಗಳೇ ಕಳೆದರೂ ಟಾಪ್ ಹೀರೋಯಿನ್ ಆಗಿ ಸಾಲು ಸಾಲು ಆಫರ್ ಗಳು ಬರುತ್ತಿವೆ.  ತಮನ್ನಾ ಬಾಲಿವುಡ್ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. 35ರ ಹರೆಯದಲ್ಲೂ ಈಗಲೂ ಅಷ್ಟೇ ಸುಂದರವಾಗಿ, ಆರೋಗ್ಯವಾಗಿರಲು ದಿನಚರಿಯೇ ಕಾರಣ ಎಂದಿದ್ದಾರೆ ತಮನ್ನಾ. ಇತ್ತೀಚೆಗಷ್ಟೇ ಅವರು ಸಂದರ್ಶನವೊಂದರಲ್ಲಿ ತಮ್ಮ ದೈನಂದಿನ ಆಹಾರ ಮತ್ತು ಫಿಟ್‌ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

  ತಮನ್ನಾ ಸಂದರ್ಶನವೊಂದರಲ್ಲಿ ತಮ್ಮ ದಿನಚರಿ ಬಗ್ಗೆ ಮಾತನಾಡಿದ ತಮನ್ನಾ, ಎಷ್ಟೇ ಬ್ಯುಸಿ ಇದ್ದರೂ ಬೆಳಗ್ಗೆ ಒಂದು ಗಂಟೆಯಾದರೂ ಯೋಗ, ಸ್ವಿಮ್ಮಿಂಗ್, ವೇಟ್ ಲಿಫ್ಟಿಂಗ್, ಕಾರ್ಡಿಯೋ ಇತ್ಯಾದಿ ಮಾಡುತ್ತೇನೆ ಇದರಿಂದ ನಾನು ಫಿಟ್​ ಆಗಿರುತ್ತೇನೆ ಎಂದಿದ್ದಾರೆ.

  ನನ್ನ ಆಹಾರಕ್ರಮವು ಬೆಳಿಗ್ಗೆ ನೆನೆಸಿದ ಬಾದಾಮಿಯಿಂದ ಪ್ರಾರಂಭವಾಗುತ್ತದೆ. ನಾನು ಬೆಳಗಿನ ಉಪಾಹಾರಕ್ಕಾಗಿ ಪ್ರೋಟೀನ್ ಭರಿತ ಆಹಾರವನ್ನು ತೆಗೆದುಕೊಳ್ಳುತ್ತೇನೆ. ಮಧ್ಯಾಹ್ನದ ಊಟಕ್ಕೆ ಬೇಳೆ, ಕಂದು ಅಕ್ಕಿ, ಬೇಯಿಸಿದ ತರಕಾರಿಗಳು ಮತ್ತು ಕರಿಗಳನ್ನು ತಿನ್ನುತ್ತೇನೆ. ನಾನು ಸಂಜೆ ಜ್ಯೂಸ್ ಕುಡಿಯುತ್ತೇನೆ. ರಾತ್ರಿ ರಾಗಿಯಿಂದ ಮಾಡಿದ ತಿಂಡಿ ತಿನ್ನುತ್ತೇನೆ. ನಾನು ದಿನದಲ್ಲಿ ಸಾಕಷ್ಟು ನೀರು ಮತ್ತು ಜ್ಯೂಸ್ ಕುಡಿಯುತ್ತೇನೆ. ದಿನಕ್ಕೆ ಅರ್ಧ ಗಂಟೆಯಾದರೂ ನಡೆಯುವಂತೆ ನೋಡಿಕೊಳ್ಳುತ್ತೇನೆ ಎಂದೂ ಹೇಳಿದ್ದಾಳೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts