10 ಕೋಟಿ ರೂ. ಕೊಟ್ಟು ಖರೀದಿಸಿದ್ದೇಕೆ? ಯಾರ ಜೊತೆಗೆ ಜಗಳ ಆಡಿದ್ದಾರೆ ಹೇಳಿ; CSK ವಿರುದ್ಧ ಆಕ್ರೋಶ

ವಿಜಯವಾಣಿ - 2025-05-01T172809.588
Published on

CSK: ನಿನ್ನೆ (ಏ.30) ಚೆಪಾಕ್​​ನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಸೋಲುಂಡಿದ ಧೋನಿ ಪಡೆ, ಗೆಲುವಿನ ಲಯಕ್ಕೆ ಮರಳಲು ತೀರ ಹೆಣಗಾಡುತ್ತಿದೆ. ಪಂಜಾಬ್ ಎದುರಿಗೆ ಹೀನಾಯ ಸೋಲು ಅನುಭವಿಸುವ ಮೂಲಕ ಇದೀಗ 18ನೇ ಆವೃತ್ತಿಯಿಂದ ಚೆನ್ನೈ ಅಧಿಕೃತವಾಗಿ ಹೊರಬಿದ್ದಿದೆ. ಸಿಎಸ್​ಕೆ ನಿರ್ಧಾರಗಳು, ನಡೆಯಿಂದ ಸಿಟ್ಟಾಗಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್​, ಫ್ರಾಂಚೈಸಿಯನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ತಂಡ ಇದೀಗ ಒಂದೊಂದು ಪಂದ್ಯ ಗೆಲ್ಲುವುದಕ್ಕೂ ತೀರ ಪರದಾಡುತ್ತಿದೆ. ಸಿಎಸ್​ಕೆ ವಿರುದ್ಧ ತೀವ್ರ ಕಿಡಿಕಾರಿರುವ ಬಜ್ಜಿ, "10 ಕೋಟಿ ರೂ. ಕೊಟ್ಟು ರವಿಚಂದ್ರನ್ ಅಶ್ವಿನ್​ರನ್ನು ಹರಾಜಿನಲ್ಲಿ ಖರೀದಿ ಮಾಡಿದ ಫ್ರಾಂಚೈಸಿ, ಅವರನ್ನು ಉಪಯೋಗಿಸಿಕೊಳ್ಳದೆ ಸುಮ್ಮನೆ ಮೂಲೆಯಲ್ಲಿ ಕೂರಿಸಿದ್ದಾರೆ. ಇದು ಅವರು ಮಾಡಿರುವ ದೊಡ್ಡ ತಪ್ಪು" ಎಂದು ಹೇಳಿದ್ದಾರೆ.

"ತಮ್ಮ ತಂಡವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಸಿಎಸ್​ಕೆ ಸಫಲವಾಯಿತು ಎಂದು ನಾನೆಲ್ಲೂ ಹೇಳುವುದಿಲ್ಲ. ಬದಲಿಗೆ ಮುಗ್ಗರಿಸಿದೆ. ನೂರ್ ಅಹ್ಮದ್​, ಆರ್​. ಅಶ್ವಿನ್​ ಮತ್ತು ರವೀಂದ್ರ ಜಡೇಜಾ ಈ ಮೂವರನ್ನು ಒಟ್ಟಿಗೆ ಆಡಿಸಿದ್ದರೆ, ಖಂಡಿತ ಸಿಎಸ್​ಕೆ ಗೆಲುವಿನ ದಿಕ್ಕಲ್ಲಿ ಸಾಗುತ್ತಿತ್ತು. ಆದರೆ, ಈ ಮಾರ್ಗದಲ್ಲಿ ನೋಡದ ಸಿಎಸ್​ಕೆ, 10 ಕೋಟಿ ರೂ.ಗೆ ಖರೀದಿಸಿದ ಅಶ್ವಿನ್​ರನ್ನು ಬೆಂಚ್ ಮೇಲೆ ಕೂರಿಸಿದೆ. ಈ ಸುಖಕ್ಕೆ ಏಕೆ ಖರೀದಿಸಬೇಕಿತ್ತು? ಅಥವಾ ಅಶ್ವಿನ್​ ಅಲ್ಲಿ ಯಾರ ಜೊತೆಯಾದರೂ ಜಗಳ ಆಡಿದ್ರಾ ಹೇಳಿ? "ಎಂದು ಪ್ರಶ್ನಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net