ಪಹಲ್ಗಾಮ್ ಭಯೋತ್ಪಾದಕ ದಾಳಿ 'ಅನಾಗರಿಕ'; ಮೋದಿ ಶಾಂತಿಯನ್ನು ಪುನಃಸ್ಥಾಪಿಸುವ ಹೋರಾಟಗಾರ; ರಜನಿಕಾಂತ್ |Rajinikanth

rajanikanth
Published on

Rajinikanth| ಮುಂಬೈನಲ್ಲಿ ನಡೆದ ವಿಶ್ವ ಆಡಿಯೋ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆ (WAVES) 2025 ರಲ್ಲಿ ರಜನಿಕಾಂತ್ ಭಾಗವಹಿಸಿದ್ದರು. ಅಲ್ಲಿ ಅವರು ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡಿದರು.

ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡಿದ ಸೂಪರ್‌ಸ್ಟಾರ್, ಇದು "ಅನಾಗರಿಕ ಮತ್ತು ದಯೆಯಿಲ್ಲದ" ಕ್ರೂರ ಕೆಲಸವಾಗಿದೆ ಎಂದು ಕರೆದಿದ್ದಾರೆ. ಮತ್ತು ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ಶಾಂತಿ ತರುವ ಹೋರಾಟಗಾರ ಎಂದು ರಜನಿಕಾಂತ್,​ ಮೋದಿಯನ್ನು ಹಾಡಿ ಹೊಗಳಿದ್ದಾರೆ.

ಪ್ರಧಾನಿ ಮೋದಿ ಒಬ್ಬ ಹೋರಾಟಗಾರ, ಅವರು ಎಂತಹ ಸವಾಲನ್ನೂ ಎದುರಿಸಬಲ್ಲರು. ಅದನ್ನು ಅವರು ನಿರೂಪಿಸಿದ್ದಾರೆ ಮತ್ತು ನಾವು ಕಳೆದ ಒಂದು ದಶಕಗಳಿಂದ ನೋಡುತ್ತಾ ಬಂದಿದ್ದೇವೆ. ಕಾಶ್ಮೀರದ ಪರಿಸ್ಥಿತಿಯನ್ನು ಅವರು ಧೈರ್ಯದಿಂದ ಮತ್ತು ಅದ್ಭುತವಾಗಿ ನಿಭಾಯಿಸಲಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿ, ನಮ್ಮ ದೇಶಕ್ಕೆ ಕಳೆ ತರಲಿದ್ದಾರೆ ಎಂದು ಹೊಗಳಿದರು.

(ಏಜೆನ್ಸೀಸ್)

WAVES 2025 ಮನರಂಜನಾ ಕಾರ್ಯಕ್ರಮದಲ್ಲಿ ಪ್ರಮುಖ ತಾರೆಯರು ಜಗತ್ತಿನ ಜಾಗತಿಕ ನಾಯಕರು ಭಾಗಿಯಾಗಲಿದ್ದಾರೆ. ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ, ಮನರಂಜನಾ ಉದ್ಯಮದ ಇತರ ಅನೇಕ ಪ್ರಭಾವಿ ವ್ಯಕ್ತಿಗಳೊಂದಿಗೆ, ಚಲನಚಿತ್ರ ಮತ್ತು ಡಿಜಿಟಲ್ ವಿಷಯದ ಭವಿಷ್ಯದ ಕುರಿತು ಪ್ರಮುಖ ಚರ್ಚೆಗಳನ್ನು ನಡೆಸಲಾಗುತ್ತದೆ. 2029 ರ ವೇಳೆಗೆ 50 ಶತಕೋಟಿ ಡಾಲರ್ ಮೌಲ್ಯದ ಮಾರುಕಟ್ಟೆಯನ್ನು ತೆರೆಯುವ ಗುರಿಯನ್ನು ಹೊಂದಿರುವ ಈ ಶೃಂಗಸಭೆಯು, ಜಾಗತಿಕ ಮನರಂಜನಾ ಆರ್ಥಿಕತೆಯಲ್ಲಿ ಭಾರತದ ಹೆಜ್ಜೆಗುರುತನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net