CSK: ನಿನ್ನೆ (ಏ.30) ಚೆಪಾಕ್ನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಸೋಲುಂಡಿದ ಧೋನಿ ಪಡೆ, ಗೆಲುವಿನ ಲಯಕ್ಕೆ ಮರಳಲು ತೀರ ಹೆಣಗಾಡುತ್ತಿದೆ. ಪಂಜಾಬ್ ಎದುರಿಗೆ ಹೀನಾಯ ಸೋಲು ಅನುಭವಿಸುವ ಮೂಲಕ ಇದೀಗ 18ನೇ ಆವೃತ್ತಿಯಿಂದ ಚೆನ್ನೈ ಅಧಿಕೃತವಾಗಿ ಹೊರಬಿದ್ದಿದೆ. ಈ ಸುದ್ದಿ ಫ್ರಾಂಚೈಸಿ ಅಭಿಮಾನಿಗಳು ಮಾತ್ರವಲ್ಲದೇ ಅಪಾರ ಸಂಖ್ಯೆಯ ಕ್ರಿಕೆಟ್ ಬಳಗವನ್ನು ಅಚ್ಚರಿಗೆ ದೂಡಿದೆ.
ಇದನ್ನೂ ಓದಿ: ಯಾವ ದೇಶದ ಮಹಿಳೆಯರು ತಮ್ಮ ಗಂಡಂದಿರಿಗೆ ಹೆಚ್ಚು ಮೋಸ ಮಾಡುತ್ತಾರೆ? ಇಲ್ಲಿದೆ ನೋಡಿ ಅಚ್ಚರಿಯ ಉತ್ತರ… Infidelity
ಸ್ಯಾಮ್ ಕರನ್ ಹೊರತುಪಡಿಸಿದರೆ ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಮುಗ್ಗರಿಸಿದರು. ಇದು ತಂಡವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿತು. 200 ರನ್ ಗಡಿದಾಟಿಸುವ ಅವಕಾಶ ಹೊಂದಿದ್ದ ಸಿಎಸ್ಕೆ, ಕರನ್ ಔಟ್ ಆಗಿದ್ದೇ ತಡ ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಎನ್ನುವಂತೆ ಚಹಲ್ ಸ್ಪಿನ್ ದಾಳಿಗೆ ತತ್ತರಿಸಿ, ಪೆವಿಲಿಯನ್ ಹಾದಿ ಹಿಡಿದರು. ಇಷ್ಟಕ್ಕೆ ನಿಲ್ಲದ ಕಳಪೆ ಫಾರ್ಮ್, ಬೌಲಿಂಗ್ನಲ್ಲಿಯೂ ಇದೇ ತಪ್ಪನ್ನು ಮಾಡಿದರು. ಪಂಜಾಬ್ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿಯೂ ಎಡವಿದರು.
4 ವಿಕೆಟ್ಗಳ ಅಂತರದಲ್ಲಿ ಮತ್ತೊಂದು ಸತತ ಹೀನಾಯ ಸೋಲಿಗೆ ಗುರಿಯಾದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೀಗ ಅಧಿಕೃತವಾಗಿ ಐಪಿಎಲ್ 18ನೇ ಆವೃತ್ತಿಯಿಂದ ಹೊರಬಿದ್ದ ಸಂಗತಿ ತಿಳಿದು ಟೀಮ್ ಇಂಡಿಯಾದ ಮಾಜಿ ವೇಗಿ ಆರ್.ಪಿ ಸಿಂಗ್ ಬೇಸರ ಹೊರಹಾಕಿದರು. “ಹಲವಾರು ವರ್ಷಗಳಿಂದ ಒಂದೇ ಫ್ರಾಂಚೈಸಿಗೆ ಆಡುತ್ತಿರುವ ರವೀಂದ್ರ ಜಡೇಜಾ ಕೈಯಿಂದಲೂ ಆಗಲಿಲ್ಲ. ಸೋಲಿನ ಸುಳಿಯಲ್ಲಿ ಸಿಲುಕಿದ್ದ ತಂಡವನ್ನು ಧೋನಿ ಮುನ್ನಡೆಸಿದ್ದೇ ಆದರೂ ಗೆಲುವಿನ ಲಯಕ್ಕೆ ಮರಳಲಿಲ್ಲ. ಈ ಸೀಸನ್ನಲ್ಲಿ ಅತಿ ಹೆಚ್ಚು ವೈಡ್ ಬಾಲ್ ಹಾಕಿರುವುದು ಪತಿರಾನ ಮತ್ತು ವಿಕೆಟ್ ಕಬಳಿಸದೆ ಇದ್ದದ್ದು ಅವರೇ” ಎಂದು ಸಿಂಗ್ ದೂಷಿಸಿದರು.
ಇದನ್ನೂ ಓದಿ: ಮದುವೆ ಸೀಸನ್ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ! ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ | Gold Rates
“ಈ ಸಾಲಿನಲ್ಲಿ ಶಿವಂ ದುಬೆ ಕೂಡ ಸೇರುತ್ತಾರೆ. ಅವರಿಂದಲೂ ಉತ್ತಮ ಪ್ರದರ್ಶನ ಬಂದಿಲ್ಲ. ಸ್ಪಿನ್ ಬೌಲರ್ಗಳಿಂದ ದಾಳಿ ಇಲ್ಲ. ಬ್ಯಾಟರ್ಗಳಿಂದ ಹೆಚ್ಚುವರಿ ರನ್ಗಳ ಕೊಡುಗೆ ಸಹ ಇಲ್ಲ. ಪ್ಲೇಆಫ್ ರೇಸ್ನಿಂದ ಸಿಎಸ್ಕೆ ಹೊರಬೀಳಲು ಜಡೇಜಾ, ಧೋನಿ ಮತ್ತು ಪತಿರಾನ ನೇರ ಹೊಣೆ” ಎಂದು ಆರ್.ಪಿ. ಸಿಂಗ್ ಹೇಳಿದ್ದಾರೆ,(ಏಜೆನ್ಸೀಸ್).
ಮದುವೆ ಸೀಸನ್ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ! ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ | Gold Rates