Infidelity : ಕೆಲವು ಮಹಿಳೆಯರು ಮದುವೆಯಾದ ನಂತರವೂ ತಮ್ಮ ಗಂಡಂದಿರಿಗೆ ದ್ರೋಹ ಮಾಡುತ್ತಾರೆ. ಮದುವೆಯ ನಂತರದ ದಾಂಪತ್ಯ ದ್ರೋಹವು ನಂಬಿಕೆಯ ಕೊರತೆಗೆ ಕಾರಣವಾಗಬಹುದು ಮತ್ತು ಇಡೀ ವೈವಾಹಿಕ ಜೀವನವನ್ನು ಹದಗೆಡಿಸಬಹುದು. ಬದಲಾಗುತ್ತಿರುವ ಜೀವನಶೈಲಿ ಮತ್ತು ತಾಂತ್ರಿಕ ಪ್ರಗತಿಗಳು ಕೂಡ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಗಂಡ ಮತ್ತು ಹೆಂಡತಿಯ ನಡುವಿನ ದಾಂಪತ್ಯ ದ್ರೋಹ ಎಂದಿಗೂ ಲಿಂಗ-ನಿರ್ದಿಷ್ಟವಲ್ಲ, ಏಕೆಂದರೆ ಪುರುಷರು ಮತ್ತು ಮಹಿಳೆಯರು ಇಬ್ಬರೂ ಅಂತಹ ತಪ್ಪುಗಳನ್ನು ಮಾಡುತ್ತಾರೆ. ದಾಂಪತ್ಯ ದ್ರೋಹಕ್ಕೆ ಲಿಂಗ ತಡೆಗೋಡೆ ಇಲ್ಲದಿರುವಂತೆಯೇ, ದೇಶದ ತಡೆಗೋಡೆಯೂ ಇಲ್ಲ. ಏಕೆಂದರೆ ಇದು ಕೆಲವು ನಿರ್ದಿಷ್ಟ ದೇಶಗಳಲ್ಲಿ ಮಾತ್ರ ಸಂಭವಿಸುವುದಿಲ್ಲ, ಇದು ಎಲ್ಲ ದೇಶಗಳಲ್ಲಿಯೂ ಸಂಭವಿಸುತ್ತದೆ.
ಆ ನಿಟ್ಟಿನಲ್ಲಿ, ಕಂಪನಿಯೊಂದು ನಡೆಸಿದ ಅಧ್ಯಯನದ ಪ್ರಕಾರ, ಯಾವ ದೇಶದಲ್ಲಿ ತಮ್ಮ ಗಂಡಂದಿರಿಗೆ ಮೋಸ ಮಾಡುವ ಮಹಿಳೆಯರು ಹೆಚ್ಚಿರುತ್ತಾರೆ ಎಂಬುದನ್ನು ನಾವೀಗ ತಿಳಿಯೋಣ.
ನೈಜೀರಿಯಾ: ನೈಜೀರಿಯಾದಲ್ಲಿ ಗಂಡಂದಿರಿಗೆ ಮೋಸ ಮಾಡುವ ಮಹಿಳೆಯರು ಹೆಚ್ಚಾಗಿ ಕಂಡುಬರುತ್ತಾರೆ. ನೈಜೀರಿಯಾದಲ್ಲಿ ಶೇ. 62 ರಷ್ಟು ಮಹಿಳೆಯರು ಮದುವೆಯ ನಂತರ ಈ ತಪ್ಪನ್ನು ಮಾಡುತ್ತಾರೆ. ಇದು ವಿಚ್ಛೇದನ ಪಡೆಯುವ ದಂಪತಿಗಳ ಹೆಚ್ಚಳಕ್ಕೂ ಕಾರಣವಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಥಾಯ್ಲೆಂಡ್: ಥಾಯ್ಲೆಂಡ್ನಲ್ಲಿ ಶೇ.59 ರಷ್ಟು ಮಹಿಳೆಯರು ತಪ್ಪು ದಾರಿಯಲ್ಲಿ ಹೋಗುತ್ತಾರೆಂದು ತಿಳಿದುಬಂದಿದೆ. ಪಾಶ್ಚಿಮಾತ್ಯ ದೇಶಗಳಿಗಿಂತ ಥಾಯ್ಲೆಂಡ್ನಲ್ಲಿ ಸಾಮಾಜಿಕ ನಿಯಮಗಳು ಹೆಚ್ಚು ಸಡಿಲವಾಗಿರುವುದರಿಂದ ಇಂತಹ ತಪ್ಪುಗಳು ಸಂಭವಿಸುತ್ತವೆ.
ಇದನ್ನೂ ಓದಿ: ಈ 3 ರಾಶಿಯವರು ತುಂಬಾ ನಾಚಿಕೆ ಸ್ವಭಾವ ಹೊಂದಿರುತ್ತಾರಂತೆ! ನೀವು ಕೂಡ ಇದೇ ರಾಶಿನಾ? Zodiac Signs
ಬ್ರಿಟನ್: ಈ ದೇಶದಲ್ಲಿ ಸರಿಸುಮಾರು ಶೇ. 42 ರಷ್ಟು ಮಹಿಳೆಯರು ವಿಶ್ವಾಸದ್ರೋಹಿ ಮತ್ತು ವಿವಾಹೇತರ ಸಂಬಂಧದಲ್ಲಿದ್ದಾರೆ.
ಮಲೇಶಿಯಾ: ಮಲೇಶಿಯಾದಲ್ಲಿ ವಾಸಿಸುವ ಶೇ.33 ರಷ್ಟು ಮಹಿಳೆಯರು ಮದುವೆಯನ್ನು ಗೌರವಿಸುವುದಿಲ್ಲ ಮತ್ತು ತಪ್ಪು ದಾರಿಯಲ್ಲಿ ಹೋಗುತ್ತಾರೆ ಎಂದು ಹೇಳಲಾಗುತ್ತದೆ. ಇದು ಪುರುಷರಿಗೆ ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ.
ಯುನೈಟೆಡ್ ಸ್ಟೇಟ್ಸ್ : ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅತಿ ಹೆಚ್ಚು ವ್ಯಭಿಚಾರದ ಪ್ರಮಾಣವನ್ನು ಹೊಂದಿರುವ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, 14% ವಿವಾಹಿತ ಮಹಿಳೆಯರು ದಾಂಪತ್ಯ ದ್ರೋಹ ಎಸಗುತ್ತಾರೆ. ಅಲ್ಲದೆ, 54% ವಿವಾಹಿತ ಪುರುಷರು ವಿವಾಹೇತರ ಚಟುವಟಿಕೆಗಳಲ್ಲಿ ತೊಡಗುತ್ತಾರಂತೆ. (ಏಜೆನ್ಸೀಸ್)
ನೀವು ಇದುವರೆಗೂ ನೋಡಿರದ ಅದ್ಭುತ ಕ್ಯಾಚ್ ಇದು: ವಿಡಿಯೋ ನೋಡಿದ್ರೆ ವಾವ್ ಅನ್ನದೇ ಇರಲ್ಲ! IPL 2025