ಮದುವೆ ಸೀಸನ್ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ! ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ | Gold Rates

ವಿಜಯವಾಣಿ - 2025-05-01T113539.060
Published on

Gold Rates: ವಿಶ್ವದ ದೊಡ್ಡಣ್ಣ ಸುಂಕ ಸಮರ ಸಾರಿದ್ದು ಆಯಿತು, ಅದರಿಂದ 90 ದಿನಗಳ ವಿರಾಮ ಘೋಷಿಸಿದ್ದು ಆಯಿತು. ಈ ಎಲ್ಲಾ ಬೆಳವಣಿಗೆಗಳಿಂದ ಚಿನ್ನದ ಬೆಲೆ ಭಾರೀ ಏರಿಕೆ-ಕುಸಿತ ಕಾಣುತ್ತಲೇ ಇದೆ. ಕಳೆದ ವಾರಗಳಲ್ಲಿ ಒಂದು ಲಕ್ಷ ರೂ.ಗೆ ಸನಿಹವಾಗಿದ್ದ ಚಿನ್ನದ ಬೆಲೆ ಇದೀಗ ದಿಢೀರ್ ಹಾಗೂ ಭಾರೀ ಇಳಿಕೆ ಕಂಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರದಿಂದಾಗಿ ಇತ್ತೀಚೆಗೆ ತೀವ್ರವಾಗಿ ಏರಿಕೆಯಾಗಿದ್ದ ಚಿನ್ನದ ಬೆಲೆ ಕ್ರಮೇಣ ಕುಸಿಯುತ್ತಿದೆ. ಇನ್ನೇನು ಮದುವೆ ಸೀಸನ್​ಗಳು ಶುರುವಾಗಲಿದ್ದು, ಚಿನ್ನದ ಬೆಲೆ ಮಾತ್ರ ಗಗನಕ್ಕೇರುತ್ತಲೇ ಇದೆ. ಇದರಿಂದ ಕಂಗಾಲಾಗಿರುವ ಚಿನ್ನದ ಗ್ರಾಹಕರು, ಖರೀದಿಯಿಂದ ಕೊಂಚ ದೂರ ಸರಿದಿದ್ದಾರೆ. ಪ್ರಸ್ತುತ ಬೆಲೆಯಲ್ಲಿ 2 ಸಾವಿರ ರೂ. ಇಳಿಕೆ ಕಂಡಿರುವುದು ಗ್ರಾಹಕರಲ್ಲಿ ಕಿರು ನಗೆ ಮೂಡಿಸಿದೆ.

2,180 ರೂ. ಇಳಿಕೆ

ಗುರುವಾರ (ಮೇ.01) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 2,180 ರೂ. ಇಳಿಕೆಯಾಗಿದೆ. 22 ಕ್ಯಾರೆಟ್‌ 10 ಗ್ರಾಂ 2 ಸಾವಿರ ರೂ.ಗೆ ಇಳಿದಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆಯೂ ಗಣನೀಯವಾಗಿ ಕುಸಿದಿದ್ದು, ಒಂದು ಕೆಜಿ ಬೆಳ್ಳಿ 2 ಸಾವಿರ ರೂ.ಗೆ ಕುಸಿತ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನ (31.10 ಗ್ರಾಂ) 80 ಡಾಲರ್​ನಷ್ಟು ಕುಸಿದು 3,227 ಡಾಲರ್​ ವಹಿವಾಟು ನಡೆಸುತ್ತಿದೆ. ಒಂದು ಔನ್ಸ್ ಬೆಳ್ಳಿ 32.01 ಡಾಲರ್ ವಹಿವಾಟು ನಡೆಸುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ

  • ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 87,900 ರೂ. ಆಗಿದ್ದರೆ, 24 ಕ್ಯಾರೆಟ್‌ನ ಬೆಲೆ 95,880 ರೂ.ಗೆ ಬಂದಿಳಿದಿದೆ.
  • ಮುಂಬೈ, ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 87,750 ಆಗಿದ್ದರೆ, 24 ಕ್ಯಾರೆಟ್ ಬೆಲೆ 95,730 ರೂ. ತಲುಪಿದೆ.
  • ಇನ್ನು ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 87,750 ರೂ.ಗೆ ತಲುಪಿದ್ದರೆ, 24 ಕ್ಯಾರೆಟ್‌ನ ಬೆಲೆ 95,730 ರೂ. ಆಗಿದೆ.

ಬೆಳ್ಳಿ ಬೆಲೆ

  • ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 98,000 ರೂ.ಗೆ ಇಳಿಕೆಯಾಗಿದೆ.
  • ಚೆನ್ನೈನಲ್ಲಿ ಕೆಜಿ ಬೆಳ್ಳಿಯ ಬೆಲೆ 1,07,000 ರೂ. ಇದೆ.
  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,07,000 ರೂ. ಆಗಿದೆ.

ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ದರ ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ಮಾಹಿತಿ. ಚಿನ್ನ-ಬೆಳ್ಳಿ ಬೆಲೆಗಳು ದಿನಕ್ಕೆ ಹಲವು ಬಾರಿ ಏರುಪೇರು ಆಗುತ್ತಿರುತ್ತವೆ. ನಿಖರವಾದ ಬೆಲೆಗಳಿಗಾಗಿ, ನಿಮ್ಮ ಹತ್ತಿರದ ಆಭರಣ ಮಳಿಗೆ ಅಥವಾ ಅಧಿಕೃತ ವೆಬ್​ಸೈಟ್​ ದರ ಪರಿಶೀಲಿಸಿ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net