ಹಣಕಾಸು ಯೋಜನೆಯಲ್ಲಿ ಆಸ್ತಿ ಹಂಚಿಕೆಯು ಒಂದು ಸ್ಮಾರ್ಟ್ ಹೂಡಿಕೆಯ ತಳಹದಿ ಏಕೆ? Asset Allocation

Asset Allocation
Published on

Asset Allocation : ಹಣಕಾಸು ಯೋಜನೆಯಲ್ಲಿ ಆಸ್ತಿ ಹಂಚಿಕೆಯು ಒಂದು ಸ್ಮಾರ್ಟ್​ ಹೂಡಿಕೆಯ ತಂತ್ರವಾಗಿದೆ. ಮಾರುಕಟ್ಟೆಯ ಸೈಕಲ್​ ಮತ್ತು ಬೃಹತ್​ ಆರ್ಥಿಕ ಸನ್ನಿವೇಶಗಳಲ್ಲಿ ಆಸ್ತಿ ಹಂಚಿಕೆಯ ಪ್ರಾಮುಖ್ಯತೆ ಸಾಬೀತಾಗಿದ್ರು ಕೂಡ ಅದನ್ನು ನಿರ್ಲಕ್ಷಿಸಲಾಗುತ್ತಿದೆ. ಇದರ ಪರಿಣಾಮವಾಗಿ ಅನೇಕ ಹೂಡಿಕೆದಾರರು ಒಂದು ಆಸ್ತಿ ವರ್ಗದ ಕಡೆಗೆ ಪಕ್ಷಪಾತಿ ಧೋರಣೆಯನ್ನು ಅನುಸರಿಸುತ್ತಿದ್ದು, ತಮ್ಮ ಹೂಡಿಕೆಯನ್ನು ಅಪಾಯಕ್ಕೆ ಒಡ್ಡುತ್ತಿದ್ದಾರೆ.

| ಪೃಥ್ವಿ ದೀಪ್, ಮ್ಯಾನೇಜಿಂಗ್​ ಪಾರ್ಟ್ನರ್​, ಮಂಗಲ್ ದೀಪ್ ಫೈನಾನ್ಸಿಯಲ್​ ಸರ್ವೀಸಸ್

ಇಲ್ಲಿ ಹೂಡಿಕೆದಾರರು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈಕ್ವಿಟಿ, ಸಾಲ, ಚಿನ್ನ ಮತ್ತು ರಿಯಲ್ ಎಸ್ಟೇಟ್‌ನಂತಹ ಎಲ್ಲ ಆಸ್ತಿ ವರ್ಗಗಳು ವಿಭಿನ್ನ ಮಾರುಕಟ್ಟೆ ಸೈಕಲ್​, ಬೆಲೆಯಲ್ಲಿನ ಏರಿಳಿತದಂತಹ ಅಪಾಯಕಾರಿ ಅಂಶಗಳಿಗಿಂತಲೂ ಭಿನ್ನವಾಗಿವೆ. ಆದಾಗ್ಯೂ ಆಸ್ತಿ ವರ್ಗಗಳ ಸೈಕಲ್​ ಅನ್ನು ಊಹಿಸುವುದು ಸುಲಭದ ಕೆಲಸವಲ್ಲ. ಏಕೆಂದರೆ, ಮಾರುಕಟ್ಟೆಯ ಚಂಚಲತೆ, ತಿದ್ದುಪಡಿಗಳು ಮಾರುಕಟ್ಟೆಯ ಭಾಗವಾಗಿದ್ದು ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಸ್ಮಾರ್ಟ್​ ಹೂಡಿಕೆ ತುಂಬಾನೇ ಮುಖ್ಯವಾಗಿದೆ.

ಆಸ್ತಿ ಹಂಚಿಕೆಯು ಸ್ಮಾರ್ಟ್​ ಹೂಡಿಕೆ ತಂತ್ರವಾಗಿದೆ. ಹೇಗೆಂದರೆ, ಇಲ್ಲಿ ಆಸ್ತಿಯನ್ನು ವಿವಿಧ ವರ್ಗಗಳಲ್ಲಿ ಹಂಚುವ ಮೂಲಕ ಮಾರುಕಟ್ಟೆ ಅಪಾಯಗಳನ್ನು ಕಡಿಮೆ ಮಾಡಬಹುದು. ಕೇವಲ ಒಂದು ವರ್ಗದ ಕಡೆ ಆಸ್ತಿ ಹಂಚಿಕೆ ಮಾಡುವುದರಿಂದಾಗುವ ನಷ್ಟದಿಂದ ಹೂಡಿಕೆದಾರರನ್ನು ಉಳಿಸುವ ಮೂಲಕ ಅವರ ಪೋರ್ಟ್‌ಫೋಲಿಯೊಗಳಲ್ಲಿ ರಕ್ಷಣಾತ್ಮಕ ಪದರವನ್ನು ಹೊಂದಲು ಆಸ್ತಿ ಹಂಚಿಕೆಯು ಅನುಮತಿಸುತ್ತದೆ.

ಹೆಚ್ಚಿನ ಹೂಡಿಕೆದಾರರು ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಸ್ತಿ ವರ್ಗಗಳತ್ತ ಮಾತ್ರ ಒಲವು ತೋರುತ್ತಿದ್ದಾರೆ. ಆದರೆ, ಅವುಗಳ ಮೇಲಿನ ಬಂಡವಾಳ ಹೂಡಿಕೆ ಮೌಲ್ಯದಲ್ಲಿನ ಹಠಾತ್ ಕುಸಿತವನ್ನು ನಿಭಾಯಿಸಲು ಹೂಡಿಕೆದಾರರು ಆಗಾಗ ಹೆಣಗಾಡುತ್ತಾರೆ. ಇದು ಅಂತಿಮವಾಗಿ ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಅಡ್ಡಿಯಾಗುತ್ತದೆ. ಆದ್ದರಿಂದ, ಅಪಾಯ ತಗ್ಗಿಸುವಿಕೆ ಮತ್ತು ವೈವಿಧ್ಯತೆ ಹೊಂದಿರುವ ಹೂಡಿಕೆ ವಿಧಾನ ಆರಿಸಿಕೊಳ್ಳುವುದು ಬುದ್ಧಿವಂತ ಹೂಡಿಕೆದಾರರ ಲಕ್ಷಣವಾಗಿದೆ. ಈ ವಿಚಾರದಲ್ಲಿ ಆಸ್ತಿ ಹಂಚಿಕೆಯ ಒಂದು ಸ್ಮಾರ್ಟ್​ ಹೂಡಿಕೆ ವಿಧಾನವಾಗಿದೆ. ಒಂದು ಆಸ್ತಿ ವರ್ಗವು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೂ ಇತರೆ ಆಸ್ತಿಗಳಿಂದ ಆದಾಯವನ್ನು ಸಮತೋಲನಗೊಳಿಸಬಹುದು ಮತ್ತು ನಿಮ್ಮ ಹೂಡಿಕೆಯ ಸುಸ್ಥಿರ ಬೆಳವಣಿಗೆಯ ಪಥದಲ್ಲಿ ಉಳಿಯುತ್ತದೆ.

ವಾಸ್ತವವಾಗಿ, ಆಸ್ತಿ ಹಂಚಿಕೆಯ ತಂತ್ರವು ಒಂದು ರೀತಿಯಲ್ಲಿ ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬಾರದು ಎಂಬ ಹಳೆಯ ಮಾತಿಗೆ ನಿದರ್ಶನವಾಗಿದೆ. ಏಕೆಂದರೆ, ಬುಟ್ಟಿ ಕೆಳಗೆ ಬಿದ್ದರೆ ಎಲ್ಲ ಮೊಟ್ಟೆಗಳು ಒಡೆದು ಹೋಗುತ್ತವೆ. ಹೀಗಾಗಿ ಮೊಟ್ಟೆಗಳ ಸುರಕ್ಷತೆಗಾಗಿ ಬೇರೆ ಬೇರೆ ಸ್ಥಳಗಳಲ್ಲಿ ಇಡಬೇಕೆಂಬ ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಒಂದು ಮೊಟ್ಟೆ ಹೊಡೆದು ಹೋದರೂ ಉಳಿದ ಮೊಟ್ಟೆಗಳು ಸುರಕ್ಷಿತವಾಗಿ ಇರುತ್ತದೆ. ಆಸ್ತಿ ಹಂಚಿಕೆ ವಿಧಾನ ಕೂಡ ಇದೇ ರೀತಿ ಕಾರ್ಯನಿರ್ವಹಿಸುತ್ತದೆ.

ಅಂದಹಾಗೆ ಹೂಡಿಕೆದಾರರಿಗೆ ಸ್ವತಂತ್ರವಾಗಿ ಆಸ್ತಿ ಹಂಚಿಕೆಯನ್ನು ನಿರ್ವಹಿಸುವುದು ಒಂದು ಸವಾಲಾಗಿರಬಹುದು. ಆದರೆ, ಮ್ಯೂಚುವಲ್ ಫಂಡ್‌ ಒಂದು ಉತ್ತಮ ಪರ್ಯಾಯವಾಗಿದೆ. ಆಸ್ತಿ ಹಂಚಿಕೆ ಹೂಡಿಕೆಯನ್ನು ಬಯಸುವವರು ICICI ಪ್ರುಡೆನ್ಶಿಯಲ್ ಆಸ್ತಿ ಹಂಚಿಕೆ ನಿಧಿ (FOF) ಅನ್ನು ಪರಿಗಣಿಸಬಹುದು. ಇದು ಆಂತರಿಕ ಮೌಲ್ಯಮಾಪನ ಮಾದರಿಯನ್ನು ಬಳಸಿಕೊಂಡು ಈಕ್ವಿಟಿ, ಸಾಲ ಮತ್ತು ಚಿನ್ನದ ಮ್ಯೂಚುಯಲ್ ಫಂಡ್ ಯೋಜನೆಗಳು/ಇಟಿಎಫ್‌ಗಳಲ್ಲಿ ಹಂಚಿಕೆಗಳನ್ನು ಕ್ರಿಯಾತ್ಮಕವಾಗಿ ಸರಿಹೊಂದಿಸುತ್ತದೆ. 2025ರ ಜನವರಿ 31ರವರೆಗೆ ಈ ನಿಧಿಯು ಒಂದು ವರ್ಷದಲ್ಲಿ 11.90% ರಷ್ಟು ಲಾಭವನ್ನು ನೀಡಿದೆ, ಮೂರು ಮತ್ತು ಐದು ವರ್ಷಗಳಲ್ಲಿ ಕ್ರಮವಾಗಿ 12.92% ಮತ್ತು 13.87% CAGR ಆದಾಯವನ್ನು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net