Perfume : ಸುಗಂಧ ದ್ರವ್ಯವನ್ನು ( ಪರ್ಫ್ಯೂಮ್ ) ಸಾಮಾನ್ಯವಾಗಿ ಬಹುತೇಕರು ಬಳಸುತ್ತಾರೆ. ದೇಹವು ಸುವಾಸನೆ ಬೀರಲು, ಫ್ರೆಶ್ ಆಗಿ ಇಡಲು ಮತ್ತು ಸಕಾರಾತ್ಮಕ ಶಕ್ತಿಯನ್ನು ಹರಡಲು ಪರ್ಫ್ಯೂಮ್ ಸಹಾಯ ಮಾಡುತ್ತದೆ ಎಂದು ಅನೇಕರು ನಂಬಿದ್ದಾರೆ.
ಪರ್ಫ್ಯೂಮ್ ಸುವಾಸನೆ ವಿಚಾರಕ್ಕೆ ಬಂದರೆ, ಪ್ರತಿಯೊಬ್ಬರು ತಮಗೆ ಇಷ್ಟವಾದ ಪರಿಮಳವನ್ನು ಆಯ್ಕೆ ಮಾಡುತ್ತಾರೆ. ಆದರೆ, ಸುಗಂಧ ದ್ರವ್ಯದ ಅತಿಯಾದ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ಮರೆತೇಬಿರುತ್ತಾರೆ. ಪರ್ಫ್ಯೂಮ್ ಚರ್ಮಕ್ಕೆ ಖಂಡತ ಒಳ್ಳೆಯದಲ್ಲ ಎಂಬುದು ಹಲವರಿಗೆ ತಿಳಿದಿಲ್ಲ. ಹೀಗಾಗಿ ಕೆಲವರು ತಮ್ಮ ದೇಹದಾದ್ಯಂತ ಪರ್ಫ್ಯೂಮ್ ಅನ್ನು ಹಚ್ಚುತ್ತಾರೆ.
ಕೆಲವರು ತಮ್ಮ ಬಟ್ಟೆಗಳಿಗೆ ಸುಗಂಧ ದ್ರವ್ಯ ಹಚ್ಚಿಕೊಳ್ಳುತ್ತಾರೆ. ಆದರೆ, ಹೆಚ್ಚಿನ ಜನರಿಗೆ ನಿಜವಾಗಿಯೂ ಪರ್ಫ್ಯೂಮ್ ಅನ್ನು ಎಲ್ಲಿ ಹಚ್ಚಬೇಕೆಂದು ತಿಳಿದಿರುವುದಿಲ್ಲ. ಮಣಿಕಟ್ಟುಗಳು, ಕುತ್ತಿಗೆ ಮತ್ತು ಎದೆಗೆ ಮಾತ್ರ ಸುಗಂಧ ದ್ರವ್ಯವನ್ನು ಹಚ್ಚಿಕೊಳ್ಳಬೇಕು. ಆದರೆ, ಪರ್ಫ್ಯೂಮ್ ಅನ್ನು ಎಲ್ಲಿ ಬಳಸಬಾರದು ಎಂಬುದನ್ನು ನಾವೀಗ ನೋಡೋಣ.
ಮುಖಕ್ಕೆ ಅಥವಾ ಕಣ್ಣುಗಳ ಸುತ್ತಲೂ ಎಂದಿಗೂ ಸುಗಂಧ ದ್ರವ್ಯವನ್ನು ಹಚ್ಚಬೇಡಿ. ಇದು ಚರ್ಮಕ್ಕೆ ತುಂಬಾ ಹಾನಿಕಾರಕ. ಕಣ್ಣುಗಳ ಸುತ್ತಲಿನ ಚರ್ಮವು ವಿಶೇಷವಾಗಿ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಅಲ್ಲಿಗೆ ಪರ್ಫ್ಯೂಮ್ ಹಾಕಬೇಡಿ. ಇನ್ನು ತಪ್ಪಾಗಿಯೂ ಕಂಕುಳ ಭಾಗಕ್ಕೆ ಪರ್ಫ್ಯೂಮ್ ಅನ್ನು ಹಚ್ಚಬೇಡಿ. ಇಲ್ಲಿನ ಚರ್ಮವು ತುಂಬಾ ಸೂಕ್ಷ್ಮವಾಗಿದ್ದು ಚರ್ಮ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಕಂಕುಳಲ್ಲಿ ಸುಗಂಧ ದ್ರವ್ಯ ಹಚ್ಚದಂತೆ ಎಚ್ಚರವಹಿಸಿ.
ಅನೇಕ ಜನರು ಕಿವಿಯ ಹಿಂದೆ ಸುಗಂಧ ದ್ರವ್ಯ ಹಚ್ಚುತ್ತಾರೆ. ಆದರೆ ಅದು ತುಂಬಾ ತಪ್ಪು. ಕಿವಿಯ ಲೋಬ್‌ಗಳಿಗೆ ಎಂದಿಗೂ ಹಚ್ಚಬೇಡಿ. ಸುಗಂಧ ದ್ರವ್ಯವು ಅನೇಕ ರಾಸಾಯನಿಕಗಳಿಂದ ಕೂಡಿದೆ. ಇದು ಚರ್ಮಕ್ಕೆ ಹಾನಿಕಾರಕ. ಮಣಿಕಟ್ಟಿನ ಮೇಲೆ ಸುಗಂಧ ದ್ರವ್ಯ ಸಿಂಪಡಿಸಿದ ನಂತರ, ಅದನ್ನು ಉಜ್ಜುವುದನ್ನು ನಿಲ್ಲಿಸಿ. ಆ ರೀತಿ ಮಾಡುವುದರಿಂದ ಸುಗಂಧ ದ್ರವ್ಯದ ವಾಸನೆ ಸ್ವಲ್ಪ ಬದಲಾಗುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ಶನಿಯ ಅನುಗ್ರಹದಿಂದಾಗಿ ಈ 3 ರಾಶಿಯವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ! Zodiac Sign
ಇರುವೆ ಅಥವಾ ಯಾವುದಾದರೂ ಕೀಟ ಕಿವಿಯೊಳಗೆ ಹೋದರೆ ತಕ್ಷಣ ಈ ರೀತಿ ಮಾಡಿ ಹೊರಗೆ ಬರುತ್ತೆ! Insects