More

    ಇಶಾ ಡಿಯೋಲ್ ಸಾಂಸಾರಿಕ ಜೀವನದಲ್ಲಿ ಬಿರುಕಿಗೆ ಕಾರಣವಾದ ಆ ಯುವತಿ; ಧರ್ಮೇಂದ್ರರ ಅಳಿಯನ ವಿವಾಹೇತರ ಸಂಬಂಧವೇ ಇಷ್ಟಕ್ಕೆಲ್ಲ ಕಾರಣ!

    ಮುಂಬೈ: ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರ ಪುತ್ರಿ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಅವರ 12 ವರ್ಷದ ದಾಂಪತ್ಯ ಮುರಿದುಬಿದ್ದಿರುವ ಸುದ್ದಿ ಬಹಳ ದಿನಗಳಿಂದ ಹೆಡ್​​​ಲೈನ್ಸ್​​​ನಲ್ಲಿದೆ. ಆದರೆ ಯಾವ ಕಾರಣಕ್ಕೆ ಈ ಜೋಡಿಗಳ ಸಂಬಂಧ ಕೊನೆಗೊಂಡಿದೆ ಎಂದು ನಿಮಗೆ ತಿಳಿದಿದೆಯೇ?.

    ಹೌದು ಧರ್ಮೇಂದ್ರ ಅವರ ಮಗಳು ಇಶಾ ಡಿಯೋಲ್ ಮದುವೆಯಾದ 12 ವರ್ಷಗಳ ನಂತರ ಭರತ್ ತಖ್ತಾನಿಯಿಂದ ವಿಚ್ಛೇದನ ಪಡೆಯುತ್ತಿದ್ದು, ಈ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

    ಇಶಾ ಮತ್ತು ಭರತ್ 2012 ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಈಗ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರ್ಪಡುತ್ತಿದ್ದಾರೆ. ಹೀಗಿರುವಾಗ ಈ ಮುದ್ದು ಜೋಡಿ ಯಾಕೆ ಬೇರೆಯಾಗುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತಿದೆ. ಈ ಜೋಡಿಯ ಬೇರ್ಪಡಿಕೆಗೆ ಭರತ್ ಅವರ ವಿವಾಹೇತರ ಸಂಬಂಧವೇ ಕಾರಣ ಎಂದು ಹೇಳಲಾಗುತ್ತಿದೆ.

    ರೆಡ್ಡಿಟ್ ಬಳಕೆದಾರರು ಇಶಾ ಮತ್ತು ಭರತ್ ಅವರ ಪ್ರತ್ಯೇಕತೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮೊದಲು ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿತ್ತು. ರೆಡ್ಡಿಟ್ ಬಳಕೆದಾರರು ಪೋಸ್ಟ್‌ನಲ್ಲಿ ಇಶಾ ಡಿಯೋಲ್ ಹಾಗೂ ಭರತ್ ತಮ್ಮ ಫೋಟೋಗಳನ್ನು ದೀರ್ಘಕಾಲದವರೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದನ್ನು ನಿಲ್ಲಿಸಿದ್ದು, ಇಶಾ ಆಗಾಗ್ಗೆ ತನ್ನ ತಾಯಿ ಹೇಮಾ ಮಾಲಿನಿಯೊಂದಿಗೆ ಮಾತ್ರ ಕಾಣಿಸಿಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದರು. ಆದರೆ ಇಶಾ ಮದುವೆ ಮುರಿದು ಬೀಳಲು ಭರತ್‌ರ ವಿವಾಹೇತರ ಸಂಬಂಧವೇ ಕಾರಣ ಎಂದು ರೆಡ್ಡಿಟ್ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಬೆಂಗಳೂರಿನ ಪಾರ್ಟಿಯೊಂದರಲ್ಲಿ ಭರತ್ ತನ್ನ ಗೆಳತಿಯೊಂದಿಗೆ ಕಾಣಿಸಿಕೊಂಡಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದ್ದು, ಭರತ್ ಅವರ ಗೆಳತಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ.

    ಆದರೆ ರೆಡ್ಡಿಟ್ ಬಳಕೆದಾರರ ಈ ಪೋಸ್ಟ್ ಈಗ ಸರಿಯಾಗಿದೆ ಎಂದು ಸಾಬೀತಾಗಿದೆ. ಇದೀಗ ಇಶಾ ಮತ್ತು ಭರತ್ ಅವರೇ ಹೇಳಿಕೆಯೊಂದರಲ್ಲಿ ಪರಸ್ಪರ ಬೇರ್ಪಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ದಂಪತಿಗೆ ರಾಧ್ಯಾ ಮತ್ತು ಮಿರಾಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ಮೊದಲು ಕ್ಯಾಸ್ಕೇಡ್ ಇಂಟರ್ ಸ್ಕೂಲ್ ಸ್ಪರ್ಧೆಯಲ್ಲಿ ಭೇಟಿಯಾದರು. ಇಲ್ಲಿಯೇ ಇಬ್ಬರೂ ಸ್ನೇಹಿತರಾದರು. ಆ ನಂತರ ಪರಸ್ಪರ ಪ್ರೀತಿಸುತ್ತಿದ್ದರು. 2012 ರಲ್ಲಿ ವಿವಾಹವಾದರು.  

    ‘ಈಕೆ ದರಿದ್ರ…’ ಹೀಗೆ ಹೇಳುತ್ತಾ 12 ಚಿತ್ರಗಳಿಂದ ಕಿಕ್ ಔಟ್ ಆಗಿದ್ದ ಈ ಸುರಸುಂದರಿ ಈಗ ಸ್ಟಾರ್ ನಟಿ

    ಅನಿಲ್​ ಕುಂಬ್ಳೆ ಸಾಧನೆಗೆ 25 ವರ್ಷ; ಜಂಬೋ ಬಿರುಗಾಳಿಗೆ ಧೂಳಿಪಟವಾಗಿತ್ತು ಪಾಕಿಸ್ತಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts