ರಶ್ಮಿಕಾನಾ... ಆಲಿಯಾನಾ?; ಯಾರಾಗ್ತಾರೆ ರಾಮ್​ಚರಣ್​ ಚಿತ್ರದ ನಾಯಕಿ..!

Rashmika
Published on

ರಾಮ್​ಚರಣ್​ ತೇಜ ಅಭಿನಯದ ತೆಲುಗು ಚಿತ್ರವೊಂದನ್ನು, ತಮಿಳು ನಿರ್ದೇಶಕ ಶಂಕರ್ ನಿರ್ದೇಶನ ಮಾಡುತ್ತಿರುವುದು ಗೊತ್ತಿರುವ ವಿಷಯವೇ. ದಿಲ್ ರಾಜು ನಿರ್ವಿುಸುತ್ತಿರುವ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗುತ್ತಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಬಂದಿತ್ತು. ಅದು ನಿಜವೋ, ಸುಳ್ಳೋ ಎಂದು ಗೊತ್ತಾಗುವುದಕ್ಕಿಂತ ಮುಂಚೆಯೇ, ಚಿತ್ರದಲ್ಲಿ ಆಲಿಯಾ ಭಟ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಓಡಾಡುತ್ತಿದೆ. ಹೌದು, ‘ಆರ್​ಆರ್​ಆರ್’ ನಂತರ ರಾಮ್ರಣ್ ಮತ್ತು ಆಲಿಯಾ ಮತ್ತೊಮ್ಮೆ ಹೊಸ ಚಿತ್ರದಲ್ಲಿ ಒಂದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸದ್ಯದಲ್ಲೇ ಚಿತ್ರತಂಡದವರು ಆಲಿಯಾ ಜತೆಗೆ ಮಾತುಕತೆಗೆ ಮುಂದಾಗಲಿದ್ದಾರೆ ಎಂಬ ಮಾತೂ ಇದೆ. ಒಂದು ಪಕ್ಷ ಎಲ್ಲವೂ ಅಂದುಕೊಂಡಂತೆ ಆದರೆ, ರಾಮ್ರಣ್ ಮತ್ತು ಆಲಿಯಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದಂತಾಗುತ್ತದೆ. ಆದರೆ, ಇದೆಲ್ಲಕ್ಕೂ ಒಂದಿಷ್ಟು ಸಮಯವಿದೆ. ಮೊದಲಿಗೆ ರಾಮ್ರಣ್ ಮತ್ತು ಆಲಿಯಾ, ‘ಆರ್​ಆರ್​ಆರ್’ ಚಿತ್ರವನ್ನು ಮುಗಿಸಬೇಕಾಗಿದೆ. ಇನ್ನೊಂದು ಕಡೆ, ಶಂಕರ್ ಅವರು ‘ಇಂಡಿಯನ್ 2’ ಚಿತ್ರ ಮುಗಿಸಬೇಕಿದೆ. ಆ ನಂತರವಷ್ಟೇ, ಈ ಚಿತ್ರಕ್ಕೆ ಚಾಲನೆ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net