More

    ಅಪ್ಪನ ಹೆಣ ಬೇಡ, ಅವರ ಹಣ ಬೇಕು; ಅನಾಥ ಶವ ಎಂದರೂ ಸರಿ ಎಂದ, 6 ಲಕ್ಷ ಇದೆ ಎಂದಾಗ 5 ನಿಮಿಷ ಎಂದು ಹೇಳಿದ ಮಗ!

    ಮೈಸೂರು: ಕರೊನಾದಿಂದ ಮೃತರಾದ ತಂದೆಯ ಶವವನ್ನು ಪಡೆಯಲು ಹಿಂಜರಿದ ಪುತ್ರ, ತಂದೆಯ ಕೋಣೆಯಲ್ಲಿ ಲಕ್ಷಾಂತರ ರೂಪಾಯಿ ಇದೆ ಎಂದಾಗ ಐದು ನಿಮಿಷ ಇರಿ ಹೇಳುತ್ತೇನೆ ಎಂದು ಹಣಕ್ಕೆ ಬಾಯ್ಬಿಟ್ಟ ಪ್ರಸಂಗವೊಂದು ನಡೆದಿದೆ. ಹೀಗೆ ಬಂಧು-ಬಳಗವಿದ್ದರೂ ವ್ಯಕ್ತಿಯೊಬ್ಬರ ಶವ ಅನಾಥ ಎನಿಸಿಕೊಂಡ ದುರಂತ ಸನ್ನಿವೇಶ ಸೃಷ್ಟಿಯಾಗಿತ್ತು.

    ಮೈಸೂರಿನ ಹೆಬ್ಬಾಳದ ಸೂರ್ಯ ಬೇಕರಿ ಬಳಿ ಇರುವ ಮನೆಯೊಂದರ ನಿವಾಸಿಯೊಬ್ಬರು ಕರೊನಾದಿಂದಾಗಿ ಮೃತಪಟ್ಟಿದ್ದರು. ಆದರೆ ಪಾರ್ಥಿವ ಶರೀರದ ಕುರಿತು ಮಾಹಿತಿ ನೀಡಿದಾಗ ಅದನ್ನು ಪಡೆಯಲು ಪುತ್ರ ನಿರಾಕರಿಸಿದ್ದಾನೆ. ತಂದೆಯ ಶವವನ್ನು ಯಾರೂ ಪಡೆಯದಿದ್ದರೆ ಅದನ್ನು ಅನಾಥ ಶವ ಎಂದು ಪರಿಗಣಿಸಿ ಕೊಂಡೊಯ್ಯಲಾಗುವುದು ಎಂದು ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಅವರು ಮೃತ ವ್ಯಕ್ತಿಯ ಪುತ್ರನಿಗೆ ವಿಡಿಯೋ ಕಾಲ್​ ಮಾಡಿ ತಿಳಿಸಿದ್ದರು.

    ಇದನ್ನೂ ಓದಿ: ಸೋಂಕಿತ ಹಿಂದು ವೃದ್ಧೆಯ ಶವಸಂಸ್ಕಾರಕ್ಕೆ ಹಿಂಜರಿದ ಸಂಬಂಧಿಕರು; ಕೊನೆಗೆ ಮುಸ್ಲಿಂ ಯುವಕರಿಂದ ಅಂತಿಮಸಂಸ್ಕಾರ

    ಅನಾಥ ಶವ ಎಂದು ಕೊಂಡೊಯ್ಯಲಾಗುವುದು ಎಂದರೂ ಸರಿ ಎಂದ ಮಗ, ತಂದೆಯ ಕೋಣೆಯಲ್ಲಿ 6 ಲಕ್ಷ ರೂಪಾಯಿ ಇದೆ, ಎಟಿಎಂ ಕಾರ್ಡ್​ಗಳು, ಮೊಬೈಲ್​ ಫೋನ್​ಗಳು ಇವೆ ಎಂದಾಗ, ಐದು ನಿಮಿಷ ಇರಿ ಹೇಳುತ್ತೇನೆ ಎಂದಿರುವ ವಿಡಿಯೋವೊಂದು ಇದೀಗ ವೈರಲ್​ ಆಗಲಾರಂಭಿಸಿದೆ. ತಂದೆಯ ಬಳಿ ಇರುವ 6 ಲಕ್ಷ ರೂ. ಹಣ ದಾಖಲೆಗಳನ್ನು ತಂದು ಕೊಡಿ ಎಂದು ಮಗ ಹೇಳಿದ್ದು, ಎಲ್ಲ ಇದ್ದೂ ವ್ಯಕ್ತಿಯೊಬ್ಬರ ಶವ ಅನಾಥ ಎನಿಸಿಕೊಂಡಿದೆ.

    ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

    ಕರೊನಾಗೆ ಬಲಿಯಾದ ತಾಯಿಯ ಅಂತ್ಯಸಂಸ್ಕಾರದ ಬಳಿಕ ಮಗನಿಗೂ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts