More

    ವಧು ನೋಡಲು ಮದುವೆಗೆ ಬಂದ ಹದ್ದು.. ಕಡೆಗೆ ಅದು ಮಾಡಿದ್ದಾದರೂ ಏನು?

    ಭೋಪಾಲ್​: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ರಂಜ್ರಾ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹದ್ದು ಮದುವೆಯ ಎಲ್ಲ ಆಚರಣೆಗಳಲ್ಲಿ ಭಾಗವಹಿಸಿದ್ದು, ಸ್ಥಳೀಯರು ಅದನ್ನು ವಧುವಿನ ತಂದೆ ಎಂದು ಹೇಳಿದರು.

    ಇದನ್ನೂ ಓದಿ: Success Story: ಅಬ್ಬಬ್ಬಾ..ಕೈಗಳಿಲ್ಲ, ಕಾಲಲ್ಲೇ ಕಾರು ಡ್ರೈವ್​ ಮಾಡ್ತಾಳೆ! ಡಿಎಲ್​ ಪಡೆದ ಏಷ್ಯಾದ ಮೊದಲಿಗಳು ಈಕೆ..!

    ಮಾಲಾಧಾರಣೆ ನಂತರ ಅದು ವಧುವಿನ ತಲೆಯ ಮೇಲೆ ಕುಳಿತು ಆಶೀರ್ವದಿಸಿತು. ವಧುವಿನ ಕುಟುಂಬವು ಹದ್ದಿನ ಉಪಸ್ಥಿತಿಗೆ ಆಹಾರ ಮತ್ತು ನೀರನ್ನು ನೀಡುವ ಮೂಲಕ ಗೌರವಿಸಿತು. ಮೃತ ವಧುವಿನ ತಂದೆ ಹದ್ದಿನ ರೂಪದಲ್ಲಿ ಬಂದು ದಂಪತಿಯನ್ನು ಆಶೀರ್ವದಿಸುತ್ತಾನೆ ಎಂದು ಗ್ರಾಮಸ್ಥರು ನಂಬುತ್ತಾರೆ.

    ಮದುವೆ ಸಮಾರಂಭದಲ್ಲಿ ಈ ಗಿಡುಗ ಶಾಂತ ರೀತಿಯಿಂದ ವರ್ತಿಸಿದ್ದಲ್ಲದೆ, ಮದುವೆಯ ಎಲ್ಲ ವಿಧಿವಿಧಾನಗಳಲ್ಲಿ ಪಾಲ್ಗೊಂಡಿತ್ತು. ಇದನ್ನು ನೋಡಿ ಅತಿಥಿಗಳು ಆಶ್ಚರ್ಯಚಕಿತರಾದರು.

    ವಿವಾಹಕ್ಕೆ ಕೆಲವೇ ದಿನಗಳ ಮುಂಚೆ ಅಪಘಾತದಲ್ಲಿ, ವಧುವಿನ ತಂದೆ ಜಲಮ್ ಸಿಂಗ್ ಲೋಧಿ ಅವರು ದಾಮೋಹ್ ಜಿಲ್ಲೆಯ ಅಭಾನಾ ಗ್ರಾಮದ ತಲೈಯಾ ಬಳಿ ಅಪಘಾತದಲ್ಲಿ ಮೃತಪಟ್ಟಿದ್ದರು. ಏಪ್ರಿಲ್ 21 ರಂದು ಪುತ್ರಿ ಇಮಾರ್ತಿಯ ಮದುವೆಯನ್ನು ಆತ ಬದುಕಿದ್ದಾಗಲೇ ನಿಗದಿಪಡಿಸಿದ್ದರಿಂದ, ವಧು-ವರರ ಕುಟುಂಬಗಳು ದೇವಸ್ಥಾನದಲ್ಲಿ ಸರಳವಾಗಿ ಮದುವೆ ಕಾರ್ಕ್ರಮ ನಡೆಸಲು ನಿರ್ಧರಿಸಿದರು. ಅದರಂತೆ ಗ್ರಾಮದ ಚಂಡಿ ಮಾತೆಯ ದೇವಸ್ಥಾನದಲ್ಲಿ ವಿವಾಹ ನೆರವೇರಿತು.

    ಮದುವೆಯ ದಿನ ಬೆಳಗ್ಗೆ ಪತಿ ಜಲಮ್ ಸಿಂಗ್ ಲೋಧಿ ಅವರ ಚಿತಾಭಸ್ಮವನ್ನು ನೀರಿಗೆ ಬಿಟ್ಟು ಮನೆಗೆ ಹಿಂದಿರುಗಿದ ನಂತರ, ಹದ್ದು ಅನಿರೀಕ್ಷಿತವಾಗಿ ಮನೆಯ ಛಾವಣಿಯ ಮೇಲೆ ಬಂದು ಕುಳಿತುಕೊಂಡಿತು. ಬಳಿಕ ಅದು ನೋನಿಬಾಯಿ (ವಧುವಿನ ತಾಯಿ) ಯ ಮಡಿಲಲ್ಲಿ ಕುಳಿತುಕೊಂಡಿತು. ಹದ್ದಿಗೆ ಹಸಿವು ಮತ್ತು ಬಾಯಾರಿಕೆಯಾಗಿದೆ ಎಂದು ಭಾವಿಸಿ ಆಹಾರ, ಹಾಲು ಮತ್ತು ನೀರನ್ನು ಕೊಟ್ಟರು. ಈ ವೇಳೆ ಹದ್ದು ತನ್ನ ಬಳಿ ಇರುವವರಿಗೆ ಯಾವುದೇ ತೊಂದರೆ ಮಾಡಇಲ್ಲ. ಗ್ರಾಮಸ್ಥರು ಸಹ ಪಕ್ಷಿಯನ್ನು ಪ್ರೀತಿ, ಕಾಳಜಿಯಿಂದ ನಡೆಸಿಕೊಂಡರು ಎಂದು ವಧುವಿನ ಕುಟುಂಬ ಸದಸ್ಯ ಗಣೇಶ್ ಲೋಧಿ ಹೇಳಿದ್ದಾರೆ.

    ಇನ್ನೇನು ಕುಟುಂಬಸ್ಥರು ಮದುವೆಗೆ ಹೊರಡಲು ಪ್ರಾರಂಭಿಸಿದಾಗ, ಹದ್ದು ಯುವಕನ ಭುಜದ ಮೇಲೆ ಕುಳಿತು ಮದುವೆಯ ಸ್ಥಳಕ್ಕೆ ತಲುಪಿತು. ಬಳಿಕ ಅದು ವೇದಿಕೆಯ ಬಳಿ ಕುರ್ಚಿಯ ಮೇಲೆ ಕುಳಿತು ಇಡೀ ಮದುವೆಯನ್ನು ವೀಕ್ಷಿಸಿತು.

    ಮದುವೆ ನಂತರ, ಹದ್ದು ಹಾರಿ ವಧುವಿನ ತಲೆಯ ಮೇಲೆ ಕುಳಿತು ರೆಕ್ಕೆಗಳನ್ನು ಬಡಿಯಲು ಪ್ರಾರಂಭಿಸಿತು. ಆಕೆಯ ತಂದೆ ವಧುವನ್ನು ಆಶೀರ್ವದಿಸುತ್ತಿರುವಂತೆ ತೋರುತ್ತಿತ್ತು. ಮದುವೆಯ ಎಲ್ಲಾ ವಿಧಿವಿಧಾನಗಳು ಮುಗಿದ ನಂತರ ಹದ್ದು ಅಲ್ಲಿಂದ ಹಾರಿ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು ಎಂದು ಗಣೇಶ್ ಲೋಧಿ ಹೇಳಿದ್ದಾರೆ.

    ವಧುವಿನ ತಂದೆ ಜಲಮ್ ಸಿಂಗ್ ತನ್ನ ಮಗಳನ್ನು ಆಶೀರ್ವದಿಸಲು ಪಕ್ಷಿಯ ರೂಪದಲ್ಲಿ ಬಂದಿದ್ದಾನೆ ಎಂದು ಗ್ರಾಮಸ್ಥರು ನಂಬುತ್ತಾರೆ. ಹದ್ದುಗಳು ಏಕಾಏಕಿ ಕಾಣಿಸಿಕೊಂಡು ನಾಪತ್ತೆಯಾಗಲು ಕಾರಣ ಎಂಬುದು ಗ್ರಾಮಸ್ಥರಲ್ಲಿ ಇಂದಿಗೂ ಚರ್ಚೆಯ ವಿಷಯವಾಗಿದೆ.

    ಮೇನಲ್ಲಿ ಬ್ಯಾಂಕ್​ಗಳಿಗೆ ಇಷ್ಟೊಂದು ರಜಾದಿನಗಳಾ?! ಎಚ್ಚರ ಗ್ರಾಹಕರೇ ಈ ದಿನಾಂಕಗಳಲ್ಲಿ ಮುಚ್ಚಲ್ಪಡುತ್ತವೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts