

ಚಾಮರಾಜನಗರ: ಕರೊನಾಗೆ ಬಲಿಯಾದ ತಾಯಿಯನ್ನು ಕೊನೆಯ ಬಾರಿಗೆ ನೋಡಲು ಬಂದ ಮಗನೂ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಚಾಮರಾಜನಗರ ತಾಲೂಕಿನ ಹುರುಳಿನಂಜನಪುರ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಸರೋಜಮ್ಮ (76) ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದರು. ಸರೋಜಮ್ಮ ಅವರ ಅಂತಿಮ ಸಂಸ್ಕಾರದ ಸ್ಥಳಕ್ಕೆ ಬಂದ ಅವರ ಮಗ ಸುರೇಶ್ ಕುಮಾರ್ (53) ಅವರು ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸರೋಜಮ್ಮ ಅವರು ಕೊಳ್ಳೇಗಾಲ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಅವರ ಅತ್ತೆ. ಸದ್ಯ ಮಾಜಿ ಶಾಸಕರ ಮನೆಯಲ್ಲಿ ಶೋಕ ಮನೆ ಮಾಡಿದ್ದು ತಾಯಿ-ಮಗ ಇಬ್ಬರೂ ಒಂದೇ ದಿನ ಮೃತಪಟ್ಟಿರುವುದರಿಂದ ನೀರವ ಮೌನ ಆವರಿಸಿದೆ.