IPL ಅಂಕಪಟ್ಟಿಯಲ್ಲಿ ಯಾವ ತಂಡಗಳು ಟಾಪ್​ 4? ಯಾರ ಪಾಲಾಗಿವೆ ಆರೆಂಜ್​ ಮತ್ತು ಪರ್ಪಲ್​ ಕ್ಯಾಪ್​?

ವಿಜಯವಾಣಿ - 2025-04-05T092043.731
Published on

IPL 2025: ಮಾ.22ರಿಂದ ಶುರುವಾದ ಐಪಿಎಲ್​ 18ನೇ ಆವೃತ್ತಿಯ ಪಂದ್ಯಗಳು ಕ್ರಿಕೆಟ್​ ಅಭಿಮಾನಿಗಳ ಉತ್ಸಾಹ, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಒಂದಕ್ಕಿಂತ ಒಂದು ಪಂದ್ಯ ರೋಚಕತೆಯತ್ತ ಸಾಗುತ್ತಿದ್ದು, ನೋಡುಗರಲ್ಲಿ ಕುತೂಹಲ ಹುಟ್ಟುಹಾಕುತ್ತಿದೆ. ಪ್ರಸ್ತುತ 10 ಬಲಿಷ್ಠ ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್​, ಪಂಜಾಬ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್​ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಉತ್ತಮ ಆಲ್​ರೌಂಡ್ ಪ್ರದರ್ಶನ ನೀಡುವುದರ ಜತೆಗೆ ಅಂಕಪಟ್ಟಿಯ ಟಾಪ್​ ನಾಲ್ಕು ಸ್ಥಾನಗಳಿಗೆ ಭಾರೀ ಪೈಪೋಟಿ ನೀಡುತ್ತಿವೆ.

ನಿನ್ನೆ (ಏ.04) ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 12 ರನ್​ಗಳ ಗೆಲುವು ಸಾಧಿಸಿದ ಲಖನೌ ಸೂಪರ್ ಜೈಂಟ್ಸ್​, ಐಪಿಎಲ್ ಅಂಕಪಟ್ಟಿಯಲ್ಲಿ 6ನೇ ಸ್ಥಾನವನ್ನು ಅಲಂಕರಿಸಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 7ನೇ ಸ್ಥಾನಕ್ಕೆ ತಲುಪಿದೆ. ಪ್ರಸ್ತುತ ಲೆಕ್ಕಾಚಾರಗಳಲ್ಲಿ ಗಮನಿಸಿ ನೋಡುವುದಾದರೆ, ಅಂಕಪಟ್ಟಿಯ ಟಾಪ್​ ನಾಲ್ಕು ಸ್ಥಾನಗಳಲ್ಲಿ ಆರ್​ಸಿಬಿ, ಡೆಲ್ಲಿ ಕ್ಯಾಪಿಟಲ್ಸ್​, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳಿವೆ.

ಇಂದಿನ ಅಪ್ಡೇಟ್​ ಅನುಸಾರ

1. ಪಂಜಾಬ್ ಕಿಂಗ್ಸ್- 2 ಗೆಲುವು 4 ಅಂಕ

2. ಡೆಲ್ಲಿ ಕ್ಯಾಪಿಟಲ್ಸ್​- 2 ಗೆಲುವು 4 ಅಂಕ

3. ಆರ್​ಸಿಬಿ- 2 ಗೆಲುವು, 1 ಸೋಲು 4 ಅಂಕ

4. ಗುಜರಾತ್ ಟೈಟನ್ಸ್​- 2 ಗೆಲುವು, 1 ಸೋಲು 4 ಅಂಕ

ಆರೆಂಜ್ ಕ್ಯಾಪ್​

ನಿಕೋಲಸ್​ ಪೂರನ್​ (ಎಲ್​ಎಸ್​ಜಿ)- 4 ಪಂದ್ಯ, 201 ರನ್​

ಪರ್ಪಲ್​ ಕ್ಯಾಪ್​

ನೂರ್ ಅಹ್ಮದ್​ (ಸಿಎಸ್​ಕೆ)- 3 ಪಂದ್ಯ, 9 ವಿಕೆಟ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net