ಗುಣಲಕ್ಷಣಗಳಿಲ್ಲದವರಿಂದ ಕರೊನಾ ಹರಡುವುದಿಲ್ಲ; ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಯಿಂದಲೇ ಹೇಳಿಕೆ; ಇಲ್ಲಿದೆ ಫ್ಯಾಕ್ಟ್​ಚೆಕ್​

Who maria
Published on

ನವದೆಹಲಿ: ಗುಣಲಕ್ಷಣಗಳಿಲ್ಲದ ಕೋವಿಡ್​ ರೋಗಿಗಳಿಂದ ಅಥವಾ ಸೋಂಕಿತರಿಂದ ಇನ್ನೊಬ್ಬರಿಗೆ ವೈರಸ್​ ಹರಡುವುದಿಲ್ಲ. ಇಂಥದ್ದೊಂದು ಸುದ್ದಿ ಕಳೆದ ಕೆಲ ದಿನಗಳಿಂದ ಭಾರಿ ವೈರಲ್​ ಆಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ ತಾಂತ್ರಿಕ ಮುಖ್ಯಸ್ಥೆ ಮರಿಯಾ ವಾನ್​ ಕರ್ಕೊವೆ ಹೇಳಿದ ಪ್ರಕಾರ ಗುಣಲಕ್ಷಣಗಳಿಲ್ಲದ ರೋಗಿಗಳಿಂದ ವೈರಸ್​ ಹರಡುವ ಪ್ರಮಾಣ ಎಷ್ಟೆಂಬುದು ಇನ್ನೂ ಗೊತ್ತಾಗಿಲ್ಲ. ಬಹುತೇಕ ರೋಗ ಹರಡುತ್ತಿರುವುದು ಗುಣಲಕ್ಷಣಗಳಿರುವ ರೋಗಿಗಳಿಂದಲೇ. ಸೋಂಕಿತರು ಕೆಮ್ಮಿದಾಗ, ಸೀನಿದಾಗ ಗಾಳಿಯ ಕಣಗಳಿಂದ ಇತರರಿಗೆ ಹಬ್ಬುತ್ತಿದೆ ಎಂದಿದ್ದರು. ಒಟ್ಟರ್ಥದಲ್ಲಿ ಗುಣಲಕ್ಷಣಗಳಿಲ್ಲದ ರೋಗಿಗಳಿಂದ ವೈರಸ್​ ಹರಡುವ ಸಂಭಾವ್ಯತೆ ವಿರಳ ಎಂದೇ ಇದನ್ನು ವ್ಯಾಖ್ಯಾನಿಸಲಾಗಿತ್ತು.

ಮಾರಿಯಾ ಹೇಳಿಕೆ ಬಳಿಕ, ಇತರ ಆರೋಗ್ಯ ಕ್ಷೇತ್ರದ ತಜ್ಞರು ಭಾರಿ ಅಚ್ಚರಿ ವ್ಯಕ್ತಪಡಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಗೆ ಯಾರೋ ತಪ್ಪು ಮಾಹಿತಿ ನೀಡಿರಬೇಕು ಇಲ್ಲವೇ, ಅವರ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಇತರ ವೈದ್ಯರು ಹೇಳಿಕೆ ನೀಡಿದ್ದರು. ಸಹಜವಾಗಿಯೇ ಇದು ಗೊಂದಲಗಳನ್ನು ಉಂಟು ಮಾಡಿದೆ.

ಆದರೆ, ಗುಣಲಕ್ಷಣಗಳಿಲ್ಲದ, ಗುಣಲಕ್ಷಣಗಳಿಗಿಂತಲೂ ಮುಂಚಿನ ಹಂತ, ಗುಣಲಕ್ಷಣಗಳನ್ನು ಹೊಂದಿದ ಹಂತಗಳ ಬಗ್ಗೆಯೇ ಹಲವು ಗೊಂದಲಗಳಿವೆ. ಕೆಲವರಲ್ಲಿ ಯಾವುದೇ ಗುಣಲಕ್ಷಣಗಳಿರುವುದಿಲ್ಲ. ಅಂಥವರಲ್ಲಿ ಲಕ್ಷಣ ಹೊಂದುವ ಮುಂಚಿನ ಹಂತ ಕಾಣಿಸಿಕೊಂಡಾಗ ಅಥವಾ ಅನಾರೋಗ್ಯ ಉಂಟಾದಾಗ ಸೋಂಕು ಇನ್ನೊಬ್ಬರಿಗೆ ಕಾಣಿಸಿಕೊಳ್ಳುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಕೊನೆಗೆ ನೀಡಿದ ಸ್ಪಷ್ಟನೆ ನೀಡಿದ್ದೇನೆಂದರೆ, ಬಹುತೇಕ ಸೋಂಕಿತರಲ್ಲಿ ಲಘು ಲಕ್ಷಣಗಳಿವೆ. ಕೆಲವರಲ್ಲಂತೂ ಯಾವುದೇ ಲಕ್ಷಣಗಳೇ ಇಲ್ಲ. ಹೆಚ್ಚಿನ ದೇಶಗಳಲ್ಲಿ ಎರಡನೇ ಸಂಪರ್ಕದ ನಂತರದವರನ್ನು ಗುರುತಿಸುವ ಪ್ರಕ್ರಿಯೆ ನಡೆಸುತ್ತಲೇ ಇಲ್ಲ ಮತ್ತು ಅಂಥವರಿಂದ ಹರಡುತ್ತಿರುವ ಪ್ರಮಾಣ ಭಾರಿ ವಿರಳವಾಗಿದ ಎಂದು ಮರಿಯಾ ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net