ಕೋವಿಡ್​ ರೋಗಿಗಳಿಗೆ ಬೆಂಗಳೂರಿನ ಬಯೋಕಾನ್​ನಿಂದಲೂ ಜೀವರಕ್ಷಕ ಲಸಿಕೆ

KIRAN JPG
Published on

ಬೆಂಗಳೂರು: ರಾಜಧಾನಿಯ ಬಯೋಕಾನ್​ ಸಂಸ್ಥೆ ಕೋವಿಡ್​ ರೋಗಿಳಿಗಾಗಿ ಹೊಸ ಲಸಿಕೆಯೊಂದನ್ನು ಕಂಡು ಹಿಡಿದಿದೆ. ಇದಕ್ಕೆ ಭಾರತೀಯ ಔಷಧ ಮಹಾನಿಯಂತ್ರಕರಿಂದ ಅನುಮತಿಯನ್ನು ಪಡೆದುಕೊಂಡಿದೆ.

ಇಟೋಲಿಜ್ಯುಮ್ಯಾಬ್​ (ಅಲ್ಜುಮ್ಯಾಬ್​) ಎಂದು ಕರೆಯಲಾಗುವ ಈ ಲಸಿಕೆಯನ್ನು ಬಯೋಕಾನ್​ನ ಬೆಂಗಳೂರು ಘಟಕದಲ್ಲಿಯೇ ಉತ್ಪಾದಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಕರೊನಾಗೆ ಲಸಿಕೆ ಕಂಡು ಹಿಡಿಯುವ ತನಕ ಇತರೆ ಜೀವರಕ್ಷಕ ಔಷಧಗಳ ಅಗತ್ಯವಿದೆ. ಅದರಂತೆ ಇಟೋಲಿಜ್ಯುಮ್ಯಾಬ್​ ಸೋಂಕಿನ ಲಕ್ಷಣ ಹೆಚ್ಚಾಗಿರುವ ಹಾಗೂ ಗಂಭೀರ ಪ್ರಕರಣಗಳಲ್ಲಿ ಅಂದರೆ ಶ್ವಾಸಕೋಶದ ಸೋಂಕು ಹೆಚ್ಚಾಗಿರುವವರಿಗೆ ಬಳಸಬಹುದಾಗಿದೆ ಎಂದು ಕಂಪನಿ ಮುಖ್ಯಸ್ಥೆ ಕಿರಣ್​ ಮಜುಮ್ದಾರ್​ ಷಾ ಹೇಳಿದ್ದಾರೆ.

ಇದರ ಒಂದು ವಾಯಲ್​ ಬೆಲೆ ಅಂದಾಜು 8 ಸಾವಿರ ರೂ.ಗಳಾಗಿದ್ದು, ಒಬ್ಬ ರೋಗಿಗೆ ಗರಿಷ್ಠ ನಾಲ್ಕು ವಾಯಲ್​ಗಳು ಬೇಕಾಗಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಕರೊನಾ ಲಸಿಕೆ ಸಜ್ಜಾದರೂ ಸೋಂಕು ನಿಯಂತ್ರಣಕ್ಕೆ ಬಾರದೇ ಇರಬಹುದು. ಲಸಿಕೆ ಸಂಪೂರ್ಣ ಯಶಸ್ವಿಯಾಗದೇ ಇರಬಹುದು. ಹೀಗಾಗಿ ಎಲ್ಲ ಸಂಭಾವ್ಯತೆಗಳಿಗಳನ್ನು ಎದುರಿಸಲು ನಾವು ಸಿದ್ಧರಾಗಿರಬೇಕಾಗಿದೆ ಎಂದು ಮಜುಮ್ದಾರ್​ ಷಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net