More

    ಯಾವುದೇ ಕ್ಷಣದಲ್ಲಿ ಹೊರಬೀಳಬಹುದು ಆಕ್ಸ್​ಫರ್ಡ್​ ಕರೊನಾ ಲಸಿಕೆಯ ಶುಭಸುದ್ದಿ…!

    ಲಂಡನ್​: ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಸ್ಟ್ರಾಜೆನೆಕಾ ಕಂಪನಿಯೊಂದಿಗೆ ಸೇರಿ ಅಭಿವೃದ್ಧಿ ಪಡಿಸುತ್ತಿರುವ ಕರೊನಾ ನಿಗ್ರಹ ಲಸಿಕೆ ಕುರಿತಾದ ಶುಭಸುದ್ದಿ ಯಾವುದೇ ಕ್ಷಣದಲ್ಲಿ ಹೊರಬೀಳಬಹುದು.

    ಈ ಲಸಿಕೆ ಈಗಾಗಲೇ ಮಾನವರ ಮೇಲಿನ ಪ್ರಯೋಗದ (ಕ್ಲಿನಿಕಲ್​ ಟ್ರಯಲ್​) ಅಂತಿಮ ಹಂತದಲ್ಲಿದೆ. ಈ ಸಂಶೋದನೆಯ ಆರಂಭಿಕ ಹಂತದ ಫಲಿತಾಂಶ ಗುರುವಾರ (ಜು.16) ಯಾವುದೇ ಕ್ಷಣದಲ್ಲಿ ಘೋಷಣೆಯಾಗಬಹುದು ಎಂದು ಹೇಳಲಾಗಿದೆ.

    ಇದನ್ನೂ ಓದಿ; ಆರಂಭವಾಗಿದೆ ಲಸಿಕೆ ಸಂಶೋಧನಾ ಕಾರ್ಯದ ಅಂತ್ಯ; ಭಾರತದಲ್ಲಿ ನಾಲ್ಕರ ಉತ್ಪಾದನೆ ಖಚಿತ…!

    ಬ್ರೆಜಿಲ್​ನಲ್ಲಿ ಸಾವಿರಾರು ಜನರ ಮೇಲೆ ಲಸಿಕೆಯ ಮೂರನೇ ಹಂತದ ಪರೀಕ್ಷೆ ಕಳೆದ ತಿಂಗಳಿನಿಂದ ನಡೆಸಲಾಗುತ್ತಿದೆ. ಈ ಬಗ್ಗೆ ಶುಭಸುದ್ದಿ ಪ್ರಕಟವಾಗಲಿದೆ ಎಂದು ಐಟಿವಿ ಸುದ್ದಿ ಸಂಸ್ಥೆಯ ರಾಜಕೀಯ ವಿಶ್ಲೇಷಕ ರಾಬರ್ಟ್​ ಪೆಸ್ಟೋನ್​ ಮಾಹಿತಿ ನೀಡಿದ್ದಾರೆ.

    ಲಸಿಕೆಯಿಂದಾಗಿ ಮಾನವ ದೇಹದಲ್ಲಿ ಪ್ರತಿರೋಧಕ ಶಕ್ತು ಉಂಟಾಘುತ್ತಿದೆ. ಜತೆಗೆ, ವೈರಸ್​ಅನ್ನು ನಾಶಪಡಿಸುತ್ತಿರುವ ಅಂಶ (ಟಿ-ಸೆಲ್​) ಪರೀಕ್ಷೆಯಲ್ಲಿ ಗೊತ್ತಾಗಿದೆ ಎಂದು ಅವರು ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.ಒಂದು ವೇಳೆ ಈ ಪ್ರಯೋಗ ಯಶಸ್ವಿಯಾಗಿದ್ದೇ ಆದಲ್ಲಿ, ನಿರೀಕ್ಷೆಗಿಂತಲೂ ಮುನ್ನವೇ ಕರೊನಾ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ; ಕರೊನಾ ಕವಚ; ಕೋವಿಡ್​ನಿಂದ ಬಚಾವಾಗಲು ಇಲ್ಲಿವೆ ವಿಶೇಷ ವಿಮಾ ಯೋಜನೆಗಳು

    ಕರಈಗಾಗಲೇ ಹತ್ತಕ್ಕೂ ಅಧಿಕ ಕಂಪನಿಗಳು ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ಹಂತದಲ್ಲಿವೆ. ಇದು ಪೂರ್ಣಗೊಂಡಲ್ಲಿ ಸೆಪ್ಟಂಬರ್​ ಹೊತ್ತಿಗೆ ಲಸಿಕೆ ದೊರೆಯಲಿದೆ. ಆದರೆ, ಆಗಸ್ಟ್​ ಮಧ್ಯಭಾಗದಲ್ಲಿಯೇ ಲಸಿಕೆ ಬಿಡುಗಡೆ ಮಾಡುವುದಾಗಿ ರಷ್ಯಾ ಹೇಳಿಕೊಂಡಿವೆ. ಈ ನಡುವೆ ಭಾರತದ ಎರಡು ಲಸಿಕೆಗಳು ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿವೆ.
    ಆಕ್ಸ್​​ಫರ್ಡ್​ ಲಸಿಕೆ ಯಶಸ್ವಿಯಾದರೆ ಅದು ಭಾರತದಲ್ಲಿಯೂ ಉತ್ಪಾದನೆಯಾಗಲಿದೆ ಎಂಬುದು ಆಶಾದಾಯಕ ಸಂಗತಿಯಾಗಿದೆ.

    ಆಗಸ್ಟ್​ 15ಕ್ಕೆ ಬಳಕೆಗೆ ದೊರೆಯಲಿದೆ ಕರೊನಾ ಲಸಿಕೆ; ಆದರೆ ಭಾರತದ್ದಲ್ಲ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts