ಎಲ್ಲಿ ನನ್ನ ಜಾನಿ? ಪೊಲೀಸ್​ ಠಾಣೆಯಲ್ಲಿ ಡ್ಯಾನ್ಸ್ ಮಾಸ್ಟರ್​ ಪತ್ನಿ ಆಯೇಷಾ ಹೈಡ್ರಾಮಾ!

ಆಂಧ್ರಪ್ರದೇಶ: ತಮಿಳು, ತೆಲುಗು ಚಿತ್ರಮಂದಿರಗಳಲ್ಲಿ ತನ್ನದೇ ಹೆಸರು ಸ್ಥಾಪಿಸಿಕೊಂಡಿರುವ ಸ್ಟಾರ್​ ಡ್ಯಾನ್ಸ್ ಕೋರಿಯೋಗ್ರಾಫರ್​ ಜಾನಿ ಮಾಸ್ಟರ್ ವಿರುದ್ಧ ಕೇಳಿಬಂದಿರುವ ಅತ್ಯಾಚಾರ ಆರೋಪವು ಇದೀಗ ಚಿತ್ರೋದ್ಯಮದಲ್ಲಿ ದೊಡ್ಡ ಹಾಟ್ ಟಾಪಿಕ್ ಆಗಿದೆ. ಸೆ.16ರಂದು ಶೈಖ್ ಜಾನಿ ಬಾಷಾ ಅಲಿಯಾಸ್​ ಜಾನಿ ಮಾಸ್ಟರ್​ ವಿರುದ್ಧ 21 ವರ್ಷದ ಅನಾಮಧೇಯ ಯುವತಿಯೊಬ್ಬಳು ತನ್ನ ಮೇಲೆ ಜಾನಿ ಮಾಸ್ಟರ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಪ್ರಕರಣ ದಾಖಲಿಸಿಕೊಂಡ ನರಸಿಂಗಿ ಪೊಲೀಸರು ಇದೀಗ ಜಾನಿಯನ್ನು ಗೋವಾದಲ್ಲಿ ಬಂಧಿಸಿ, ಹೈದರಾಬಾದ್​ಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಆರೋಪಿ ಜಾನಿ ಪತ್ನಿ ಗಾಬರಿಯಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಷಯ ಅಲ್ಲಿನ ಪೊಲೀಸರಿಗೆ ಅಚ್ಚರಿ ಉಂಟುಮಾಡಿದೆ.

ಇದನ್ನೂ ಓದಿ: ಕಾಂಗ್ರೆಸ್​-ಪಾಕಿಸ್ತಾನದ ಅಜೆಂಡಾ ಒಂದೇ, ಮೋದಿ ಸರ್ಕಾರ ಇರೋವರೆಗೂ ಇದು ಸಾಧ್ಯವಿಲ್ಲ: ಅಮಿತ್​ ಷಾ

ತನ್ನ ಮೇಲೆ ಆರೋಪ ಕೇಳಿಬಂದಾಗಿನಿಂದಲೂ ತಲೆಮರಿಸಿಕೊಂಡಿದ್ದ ಜಾನಿ ಮಾಸ್ಟರ್ ಇದೀಗ​ ಗೋವಾದ ಲಾಡ್ಜ್‌ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅರೆಸ್ಟ್​ ಆದ ತಕ್ಷಣ ಜಾನಿಯನ್ನು ಗೋವಾ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ತದನಂತರ ಹೈದರಾಬಾದ್‌ಗೆ ಕರೆತರುತ್ತಿದ್ದಾರೆ. ಈ ವೇಳೆ ನೇರವಾಗಿ ಪೊಲೀಸ್ ಠಾಣೆಗೆ ಪತಿಯನ್ನು ಹುಡುಕಿಕೊಂಡು ಬಂದ ಜಾನಿ ಪತ್ನಿ ಆಯೇಷಾ, ಠಾಣೆಯಲ್ಲಿ ಗಲಾಟೆ ಮಾಡಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಎಲ್ಲಿ ನನ್ನ ಜಾನಿ? ನಾನು ಅವನನ್ನು ನೋಡಬೇಕು ಎಂದು ಗಲಾಟೆ ಮಾಡಿದ್ದಾರೆ.

ನಕಲಿ ದೂರವಾಣಿ ಕರೆಯನ್ನು ಸ್ವೀಕರಿಸಿದ ಜಾನಿ ಮಾಸ್ಟರ್​ ಪತ್ನಿ ಆಯೇಷಾ, ತಮ್ಮ ಪತಿಯನ್ನು ನೋಡುವ ತವಕದಿಂದ ನರಸಿಂಗಿ ಪೊಲೀಸ್ ಠಾಣೆಗೆ ಓಡೋಡಿ ಬಂದಿದ್ದಾರೆ. ನನ್ನ ಪತಿ ಜಾನಿ ಎಲ್ಲಿ? ಎಂದು ಪ್ರಾರಂಭದಲ್ಲಿ ಪೊಲೀಸರೊಂದಿಗೆ ನೇರ ವಾಗ್ವಾದಕ್ಕಿಳಿದಿದ್ದಾರೆ. ತಕ್ಷಣವೇ ಆಕೆಯನ್ನು ಸಮಾಧಾನಪಡಿಸಿ, ಸರಿಯಾದ ಮಾಹಿತಿ ಕೊಟ್ಟ ಪೊಲೀಸ್ ಅಧಿಕಾರಿಗಳು, ನಿಮ್ಮ ಪತಿಯನ್ನು ಅರೆಸ್ಟ್​ ಮಾಡಿ, ಹೈದರಾಬಾದ್​ಗೆ ಕರೆತರಲಾಗುತ್ತಿದೆ. ಇಲ್ಲಿಗೆ ಹಾಜರಾಗಲು ಇನ್ನಷ್ಟು ಸಮಯ ತಡವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಬಪ್ಪನಾಡಿನಲ್ಲಿ ಅನಂತವ್ರತ ಪೂಜೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ಇಚ್ಛಿಸದ ಆಯೇಷಾ, ಪೊಲೀಸರ ಮಾಹಿತಿ ಮೇರೆಗೆ ಪೊಲೀಸ್ ಠಾಣೆಯಿಂದ ಹೊರಟು ಹೋಗಿದ್ದಾರೆ. ವರದಿಗಳ ಪ್ರಕಾರ, ಜಾನಿ ಮಾಸ್ಟರ್ ಬಂಧನಕ್ಕೆ ಆಕೆಯೇ ಕಾರಣ ಎಂಬ ಸುದ್ದಿ ಹರಿದಾಡುತ್ತಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ತಮ್ಮ ದೂರಿನಲ್ಲಿ ಜಾನಿ ಮಾಸ್ಟರ್​ ಆಯೇಷಾ ಅವರ ಹೆಸರನ್ನು ಕೂಡ ಸೇರಿಸಿದ್ದಾರೆ ಎಂದು ತಿಳಿದುಬಂದಿದೆ,(ಏಜೆನ್ಸೀಸ್).

ಟೀಮ್ ಇಂಡಿಯಾಗೆ ಕೆ.ಎಲ್​. ರಾಹುಲ್ ​ಸ್ಟೆಪ್ನಿ ಇದ್ದಂತೆ! ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಹಿರಿಯ ಆಟಗಾರ

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…