ಬಿಹಾರ: ನಳಂದ ವಿಶ್ವವಿದ್ಯಾಲಯದ ಇತಿಹಾಸ ಬಹಳ ಹಳೆಯದು. ನಳಂದ ವಿಶ್ವವಿದ್ಯಾನಿಲಯವನ್ನು ಸುಮಾರು 1600 ವರ್ಷಗಳ ಹಿಂದೆ ಐದನೇ ಶತಮಾನದಲ್ಲಿ ಸ್ಥಾಪಿಸಲಾಯಿತು. 1600 ವರ್ಷಗಳ ಹಿಂದೆ ಸ್ಥಾಪಿಸಲಾದ ಮೂಲ ನಳಂದ ವಿಶ್ವವಿದ್ಯಾಲಯವು ವಿಶ್ವದ ಮೊದಲ ವಸತಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಇದು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳ ಆಕರ್ಷಣೆಯ ಕೇಂದ್ರವಾಗಿತ್ತು. ತಜ್ಞರ ಪ್ರಕಾರ, ಈ ವಿಶ್ವವಿದ್ಯಾಲಯ 12ನೇ ಶತಮಾನದಲ್ಲಿ ಆಕ್ರಮಣಕಾರರಿಂದ ನಾಶವಾಯಿತು. ನಾಶವಾಗುವ ಮೊದಲು ಶತಮಾನಗಳವರೆಗೆ ಅಭಿವೃದ್ಧಿ ಹೊಂದಿತು. ಈ ಪ್ರಾಚೀನ ಶಾಲೆಯು ಸುಮಾರು 800 ವರ್ಷಗಳ ಕಾಲ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದೆ ಎನ್ನಲಾಗಿದೆ.

ಇದನ್ನು ಓದಿ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ನಳಂದದಲ್ಲಿ ನೂತನ ಕ್ಯಾಂಪಸ್ ಉದ್ಘಾಟನೆ; ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ?
ನಳಂದ ವಿಶ್ವವಿದ್ಯಾನಿಲಯದ ಅಡಿಪಾಯವನ್ನು ಗುಪ್ತ ರಾಜವಂಶದ ಕುಮಾರ್ ಗುಪ್ತ I ಅವರು ಹಾಕಿದರು. ಐದನೇ ಶತಮಾನದಲ್ಲಿ ನಿರ್ಮಿಸಲಾದ ಪ್ರಾಚೀನ ವಿಶ್ವವಿದ್ಯಾಲಯದಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು, ಅವರಿಗೆ 1500 ಶಿಕ್ಷಕರಿದ್ದರು. ಹೆಚ್ಚಿನ ವಿದ್ಯಾರ್ಥಿಗಳು ಏಷ್ಯಾದ ದೇಶಗಳಾದ ಚೀನಾ, ಕೊರಿಯಾ ಮತ್ತು ಜಪಾನ್‌ನಿಂದ ಬಂದ ಬೌದ್ಧ ಸನ್ಯಾಸಿಗಳಾಗಿದ್ದರು. ಇತಿಹಾಸಕಾರರ ಪ್ರಕಾರ, ಏಳನೇ ಶತಮಾನದಲ್ಲಿ ಚೀನಾದ ಸನ್ಯಾಸಿ ಹ್ಯೂಯೆನ್ ತ್ಸಾಂಗ್ ಕೂಡ ನಳಂದಾದಲ್ಲಿ ಶಿಕ್ಷಣ ಪಡೆದರು. ನಳಂದ ವಿಶ್ವವಿದ್ಯಾನಿಲಯದ ಹಿರಿಮೆಯನ್ನು ಅವರು ತಮ್ಮ ಪುಸ್ತಕಗಳಲ್ಲಿ ಉಲ್ಲೇಖಿಸಿದ್ದಾರೆ. ಇದು ಬೌದ್ಧ ಧರ್ಮದ ಎರಡು ಪ್ರಮುಖ ಕೇಂದ್ರಗಳಲ್ಲಿ ಒಂದಾಗಿತ್ತು.
2016ರಲ್ಲಿ ನಳಂದದ ಅವಶೇಷಗಳನ್ನು ವಿಶ್ವಸಂಸ್ಥೆಯ ಪಾರಂಪರಿಕ ತಾಣವೆಂದು ಘೋಷಿಸಲಾಯಿತು. ನಂತರ ವಿಶ್ವವಿದ್ಯಾಲಯದ ನಿರ್ಮಾಣ ಕಾರ್ಯವನ್ನು 2017ರಲ್ಲಿ ಪ್ರಾರಂಭಿಸಲಾಯಿತು. ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ನಳಂದದ ಪ್ರಾಚೀನ ಅವಶೇಷಗಳ ಬಳಿ ನಿರ್ಮಿಸಲಾಗಿದೆ. ಈ ಹೊಸ ಕ್ಯಾಂಪಸ್ ಅನ್ನು ನಳಂದ ವಿಶ್ವವಿದ್ಯಾಲಯ ಕಾಯಿದೆ, 2010ರ ಮೂಲಕ ಸ್ಥಾಪಿಸಲಾಗಿದೆ. ಹೊಸ ನಳಂದ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಥಾಪನೆಯು 2007ರಲ್ಲಿ ಫಿಲಿಪೈನ್ಸ್‌ನಲ್ಲಿ ನಡೆದ ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆ (EAS) ದೇಶಗಳ ನಡುವಿನ ಸಹಯೋಗದ ಪ್ರಯತ್ನವಾಗಿದೆ.
ನಳಂದ ವಿಶ್ವವಿದ್ಯಾಲಯದಲ್ಲಿ ಉದ್ಘಾಟಿಸಿದ ನೂತನ ಕ್ಯಾಂಪಸ್ ಎರಡು ಶೈಕ್ಷಣಿಕ ಬ್ಲಾಕ್ಗಳನ್ನು ಹೊಂದಿದೆ. ಇದು 40 ತರಗತಿ ಕೊಠಡಿಗಳನ್ನು ಹೊಂದಿದೆ. ಇಲ್ಲಿ ಒಟ್ಟು 1900 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಇದೆ. ವಿಶ್ವವಿದ್ಯಾಲಯವು 300 ಆಸನಗಳನ್ನು ಹೊಂದಿರುವ ಎರಡು ಸಭಾಂಗಣಗಳನ್ನು ಹೊಂದಿದೆ. ಇದಲ್ಲದೇ ಅಂತಾರಾಷ್ಟ್ರೀಯ ಕೇಂದ್ರ ಹಾಗೂ ಆಂಫಿಥಿಯೇಟರ್ ಕೂಡ ನಿರ್ಮಿಸಲಾಗಿದ್ದು, 2 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಇಷ್ಟು ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಫ್ಯಾಕಲ್ಟಿ ಕ್ಲಬ್ ಮತ್ತು ಕ್ರೀಡಾ ಸಂಕೀರ್ಣ ಸೇರಿದಂತೆ ಹಲವು ಸೌಲಭ್ಯಗಳಿದ್ದು, ನಳಂದ ವಿಶ್ವವಿದ್ಯಾಲಯದ ಕ್ಯಾಂಪಸ್ ‘ನೆಟ್ ಜೀರೋ’ ಕ್ಯಾಂಪಸ್ ಆಗಿದ್ದು, ಪರಿಸರ ಸ್ನೇಹಿ ಚಟುವಟಿಕೆಗಳು ಮತ್ತು ಶಿಕ್ಷಣ ಇಲ್ಲಿ ನಡೆಯುತ್ತದೆ. ಕ್ಯಾಂಪಸ್ ನೀರನ್ನು ಮರುಬಳಕೆ ಮಾಡಲು ಒಂದು ಸ್ಥಾವರವನ್ನು ಹೊಂದಿದೆ, 100 ಎಕರೆ ಜಲಮೂಲಗಳು ಮತ್ತು ಪರಿಸರ ಸ್ನೇಹಿ ಅನೇಕ ಸೌಲಭ್ಯಗಳನ್ನು ಹೊಂದಿದೆ.(ಏಜೆನ್ಸೀಸ್)
‘ನಾಯಕ್’ ನಾಯಕನಾಗಿ ಸೆಲೆಕ್ಟ್ ಆಗಿದ್ದ ಶಾರುಖ್; ಸಿನಿಮಾ ಕೈತಪ್ಪಿದ್ದಕ್ಕೆ ಅವರೇ ಕೊಟ್ಟ ಉತ್ತರ…