

WhatsApp: ಸಾಮಾಜಿಕ ಜಾಲತಾಣಗಳ ಪೈಕಿ ದಿನನಿತ್ಯ ಹಾಗೂ ಅತಿ ಹೆಚ್ಚು ಬಳೆಕೆಯಾಗುವ ವ್ಯಾಟ್ಸ್ಆ್ಯಪ್ ಇದೀಗ ಒಂದಷ್ಟು ಐಫೋನ್ ಸರಣಿಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ. ಅಸಲಿಗೆ ಇದರ ಹಿಂದಿರುವ ಕಾರಣವೇನು? ಯಾವ ಸಿರೀಸ್ಗಳಲ್ಲಿ ವಾಟ್ಸ್ಆ್ಯಪ್ ಸ್ಥಗಿತ ಎಂಬುದರ ವಿವರ ಹೀಗಿದೆ ಗಮನಿಸಿ.
ಇದೇ ಮೇ 5, 2025ರಿಂದ ನಿಮ್ಮ ಐಫೋನ್ಗಳ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ. ಇದಕ್ಕೆ ಕಾರಣ, ಮುಂದಿನ ತಿಂಗಳಿನಿಂದ ಮೆಟಾ ಮಾಲೀಕತ್ವದ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸ್ಆ್ಯಪ್ ಐಓಎಸ್ನ ಹಳೆಯ ಆವೃತ್ತಿಗಳನ್ನು ಹೊಂದಿರುವ ಕೆಲವೇ ಕೆಲವು ಐಫೋನ್ ಸಿರೀಸ್ಗಳಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ. ಅಧಿಕೃತ ಘೋಷಣೆಯ ಪ್ರಕಾರ, WhatsApp iOS 15.1 ಅಥವಾ ಅದರ ಮುಂದಿನ ಅಪ್ಡೇಟ್ ವರ್ಶನ್ ಹೊಂದಿರುವ ಐಫೋನ್ಗಳಿಗೆ ಮಾತ್ರ ವಾಟ್ಸ್ಆ್ಯಪ್ ತನ್ನ ಸೇವೆಯನ್ನು ಮುಂದುವರಿಸಲಿದೆ.
ನಿಮ್ಮ ಐಫೋನ್ ಸಿರೀಸ್ಗಳನ್ನು ಇದಕ್ಕೆ ನವೀಕರಿಸದಿದ್ದರೆ ಶೀಘ್ರದಲ್ಲೇ ವಾಟ್ಸ್ಆ್ಯಪ್ ಸೇವೆಯನ್ನು ಆನಂದಿಸಲು ಸಾಧ್ಯವಿಲ್ಲ. ಇದು ಬಹುತೇಕರ ದೈನಂದಿನ ಕೆಲಸಕ್ಕೆ ದೊಡ್ಡ ಬ್ರೇಕ್ ನೀಡಲಿದೆ. ಕೆಲಸ ನಿಮಿತ್ತ ಸಂದೇಶ, ಕರೆ, ವಿಡಿಯೋ ಕರೆ ಸೇರಿದಂತೆ ಹಲವಾರು ಸೇವೆಗಳನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ವಾಟ್ಸ್ಆ್ಯಪ್ನ ಯಾವುದೇ ನೋಟಿಫಿಕೇಶನ್ ಅಥವಾ ಇನ್ನಿತರ ಮಾಹಿತಿಗಳನ್ನು ಪಡೆಯಲು ಆಗುವುದಿಲ್ಲ.
1. ಐಫೋನ್ 5s
2. ಐಫೋನ್ 6
3. ಐಫೋನ್ 6 ಪ್ಲಸ್
ಆ್ಯಪಲ್ ಈ ಹಳೆಯ ಐಫೋನ್ಗೆ ಸಾಫ್ಟ್‌ವೇರ್ ಅಪ್ಡೇಟ್ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ. ಈ ರೀತಿ ಸ್ಥಗಿತಗೊಳಿಸಿದರೆ ಹಳೆ ವರ್ಶನ್ ಐಫೋನ್ ಬಳಕೆದಾರರು ಏನು ಮಾಡಬೇಕು? ಎಂಬ ಪ್ರಶ್ನೆಗೆ ಉತ್ತರ ಹೀಗಿದೆ. ನಿಮ್ಮ ಬಳಿಯಿರುವ ಐಫೋನ್ ಸಿರೀಸ್ಗಳು ಈ ಪಟ್ಟಿಗೆ ಸೇರಿದ್ದರೆ, ಐಫೋನ್ 13, 14 ನಂತರ ಸಿರೀಸ್ ಫೋನ್ಗಳನ್ನು ಖರೀದಿ ಮಾಡುವುದು ಸೂಕ್ತ ಎನ್ನಲಾಗಿದೆ. ಇದು ಸರಳ ಹಾಗೂ ಸುಲಭ ಪರಿಹಾರ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).