ಸುನೀತಾ ವಿಲಿಯಮ್ಸ್​ ಭೂಮಿಗೆ ಬರೋದು ಇನ್ನೂ ಲೇಟಾಗಿದ್ರೆ ಏನಾಗ್ತಿತ್ತು? ವಿಜ್ಞಾನ ಏನು ಹೇಳುತ್ತೆ? ಇಲ್ಲಿದೆ ಮಾಹಿತಿ… Sunita Williams

Sunita Williams

Sunita Williams : ಸರಿ ಸುಮಾರು 9 ತಿಂಗಳು ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ನಾಸಾ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​ ಕೊನೆಗೂ ಭೂಮಿಯತ್ತ ಪ್ರಯಾಣ ಬೆಳೆಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3.27ಕ್ಕೆ ಭೂಮಿಗೆ ಕಾಲಿಡಲಿದ್ದಾರೆ. ಒಂದು ವೇಳೆ ಗಗನಯಾತ್ರಿಗಳು ಭೂಮಿಗೆ ಬರಲು ಸಾಧ್ಯವಾಗದೇ ಬಾಹ್ಯಾಕಾಶದಲ್ಲೇ ಉಳಿದರೆ ಏನಾಗುತ್ತದೆ ಎಂಬುದರ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

ಅಂದಹಾಗೆ ಬೋಯಿಂಗ್‌ನ ಮೊದಲ ಮಾನವಸಹಿತ ಬಾಹ್ಯಾಕಾಶ ಹಾರಾಟದ ಭಾಗವಾಗಿ 2024, ಜೂನ್ 5 ರಂದು ಉಡಾವಣೆಯಾದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಸುನೀತಾ ಮತ್ತು ವಿಲ್ಮೋರ್ ISS ಅನ್ನು ತಲುಪಿದರು. ವೇಳಾಪಟ್ಟಿಯ ಪ್ರಕಾರ ಅವರು ಎಂಟು ದಿನಗಳಲ್ಲಿ ಹಿಂತಿರುಗಬೇಕಿತ್ತು. ಆದರೆ, ಸ್ಟಾರ್‌ಲೈನರ್‌ನ ತಾಂತ್ರಿಕ ಸಮಸ್ಯೆಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಅದನ್ನು ದುರಸ್ತಿ ಮಾಡುವ ಪ್ರಯತ್ನಗಳು ಸಹ ಸಂಪೂರ್ಣವಾಗಿ ಯಶಸ್ವಿಯಾಗಲಿಲ್ಲ. ಆದ್ದರಿಂದ NASA ಅಪಾಯವನ್ನು ತೆಗೆದುಕೊಳ್ಳದಿರಲು ನಿರ್ಧರಿಸಿತು. ಪರಿಣಾಮವಾಗಿ, ಸೆಪ್ಟೆಂಬರ್ 7 ರಂದು ಸ್ಟಾರ್‌ಲೈನರ್, ಗಗನಯಾತ್ರಿಗಳನ್ನು ಅಲ್ಲಿಯೇ ಬಿಟ್ಟು ಭೂಮಿಗೆ ಮರಳಿತು.

ಸುನೀತಾ ಮತ್ತು ವಿಲ್ಮೋರ್​ ಅವರನ್ನು ಮರಳಿ ಕರೆತರಲು ಒಂದು ಅಥವಾ ಎರಡು ಪ್ರಯತ್ನಗಳು ವಿಫಲವಾದವು. ಸುನೀತಾ ಅವರು 9 ತಿಂಗಳಿನಿಂದ ಐಎಸ್‌ಎಸ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಂತಿಮವಾಗಿ, ಅವರನ್ನು ಮತ್ತು ವಿಲ್ಮೋರ್ ಅವರನ್ನು ಮರಳಿ ಕರೆತರಲು ನಾಸಾ, ಸ್ಪೇಸ್‌ಎಕ್ಸ್ ಸಹಯೋಗದೊಂದಿಗೆ ಉಡಾಯಿಸಿದ ಡ್ರ್ಯಾಗನ್ -10 ಬಾಹ್ಯಾಕಾಶ ನೌಕೆ, ಭಾನುವಾರ ಐಎಸ್‌ಎಸ್‌ಗೆ ಯಶಸ್ವಿಯಾಗಿ ತಲುಪಿತು. ಅದರಲ್ಲಿ ಬಂದ ನಾಲ್ವರು ಗಗನಯಾತ್ರಿಗಳು ಸುನೀತಾ ಅವರ ತಂಡದಿಂದ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡರು. ಸುನೀತಾ ಅವರು ರಷ್ಯಾದ ಅಲೆಕ್ಸಿ ಒಚಿನಿನ್ ಅವರಿಗೆ ಕಮಾಂಡರ್ ಜವಾಬ್ದಾರಿಗಳನ್ನು ಹಸ್ತಾಂತರಿಸಿದರು. ಮುಂದಿನ ಆರು ತಿಂಗಳ ಕಾಲ ಎಲ್ಲಾ ಐಎಸ್‌ಎಸ್ ಕಾರ್ಯಾಚರಣೆಗಳು ಅವರ ಮೇಲ್ವಿಚಾರಣೆಯಲ್ಲಿ ನಡೆಯಲಿವೆ. ಇದೀಗ ಸುನೀತಾ ಮತ್ತು ವಿಲ್ಮೋರ್​ ಅವರನ್ನು ಹೊತ್ತ ಕ್ರೂ ಡ್ರ್ಯಾಗನ್ -10 ನೌಕೆ ಭೂಮಿಯತ್ತ ಪ್ರಯಾಣ ಬೆಳೆಸಿದೆ. ಬುಧವಾರ ಬೆಳಗ್ಗೆ 2.41 ಕ್ಕೆ ಭೂಮಿಯ ಕಕ್ಷೆಯನ್ನು ಪ್ರವೇಶಿಸುತ್ತದೆ. ಬುಧವಾರ ಬೆಳಗ್ಗೆ 3.27ರ ಸುಮಾರಿಗೆ ಫ್ಲೋರಿಡಾ ಕರಾವಳಿಯ ಬಳಿ ಸಮುದ್ರದ ನೀರಿನಲ್ಲಿ ನೌಕೆ ಇಳಿಯುತ್ತದೆ. ಅದರ ನಂತರ, NASA ಸಿಬ್ಬಂದಿ ಎಲ್ಲ ನಾಲ್ವರು ಗಗನಯಾತ್ರಿಗಳನ್ನು ಒಬ್ಬೊಬ್ಬರಾಗಿ ಹೊರತರುತ್ತಾರೆ.

ಬಾಹ್ಯಾಕಾಶದಲ್ಲಿ ಎಷ್ಟು ದಿನ ಇರಬಹುದು?

ಸಾಮಾನ್ಯವಾಗಿ ಒಬ್ಬ ಗಗನಯಾತ್ರಿ ಅಂತರಿಕ್ಷದಲ್ಲಿದ್ದಾಗ ಅಲ್ಲಿ ಎಷ್ಟು ದಿನ ಬದುಕಬಹುದು ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ. ಗಗನಯಾತ್ರಿಗಳು ಯಾವುದೋ ಕಾರಣಕ್ಕಾಗಿ ಬಾಹ್ಯಾಕಾಶದಲ್ಲೇ ಸಿಲುಕಿಕೊಂಡರೆ, ಅವರು ಸುಲಭವಾಗಿ 300 ರಿಂದ 400 ದಿನಗಳವರೆಗೆ ಅಂದರೆ, ಒಂದು ವರ್ಷ ಆರಾಮಾಗಿ ಅಲ್ಲಿಯೇ ಉಳಿಯಬಹುದು. ಬಾಹ್ಯಾಕಾಶದಲ್ಲಿ ಹೆಚ್ಚು ಸಮಯ ಕಳೆದ ದಾಖಲೆ ರಷ್ಯಾದ ಗಗನಯಾತ್ರಿ ವ್ಯಾಲೆರಿ ಪಾಲಿಯಕೋವ್ ಅವರ ಹೆಸರಿನಲ್ಲಿದೆ. ಅವರು 1994ರ ಜನವರಿಯಿಂದ 1995ರ ಮಾರ್ಚ್​ವರೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು 437 ದಿನಗಳನ್ನು ಕಳೆದರು. ಅಂದಹಾಗೆ, ಬಾಹ್ಯಾಕಾಶದ ವಾತಾವರಣವೇ ತುಂಬಾ ವಿಭಿನ್ನ. ಈ ವಾತಾವರಣದಲ್ಲಿ ಒತ್ತಡದ ಅನುಪಸ್ಥಿತಿ ಇರುತ್ತದೆ ಮತ್ತು ವಿಪರೀತ ನಿರ್ವಾತ ಪರಿಸ್ಥಿತಿ ಇರುತ್ತದೆ. ಅಂದರೆ, ಭಾರವೇ ಇರುವುದಿಲ್ಲ. ಹೀಗಾಗಿ ಎಚ್ಚರಿಕೆಯ ನಡೆ ಅತ್ಯಗತ್ಯ. ಗಗನಯಾತ್ರಿಗಳ ಉಳಿವಿಗಾಗಿ ಅಗತ್ಯವಾದ ಆಮ್ಲಜನಕ ಮಟ್ಟ ಸೇರಿದಂತೆ ನಿಯಂತ್ರಿತ ವಾತಾವರಣವನ್ನು ಒದಗಿಸಲು ಬಾಹ್ಯಾಕಾಶ ನೌಕೆಯಂತಹ ವ್ಯವಸ್ಥೆಗಳನ್ನು ಅವಲಂಬಿಸಿರುತ್ತಾರೆ. ಈ ವ್ಯವಸ್ಥೆಯಲ್ಲಿ ಯಾವುದೇ ಸಣ್ಣ ವೈಫಲ್ಯ ಕಾಣಿಸಿಕೊಂಡರು ಗಂಭೀರ ಆರೋಗ್ಯ ಪರಿಣಾಮಗಳಿಗೆ ಕಾರಣವಾಗಬಹುದು. ಅಲ್ಲದೆ, ಸಾವು ಸಂಭವಿಸುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: ಬಿಕಿನಿಯಲ್ಲಿ ಕಣ್ಮರೆಯಾದ ಭಾರತೀಯ ವಿದ್ಯಾರ್ಥಿನಿ ಕೇಸ್​ಗೆ ಸ್ಫೋಟಕ ತಿರುವು! ಬಾರ್​ನಲ್ಲಿ ಆಕೆ ಜತೆಗಿದ್ದಿದ್ದು ಯಾರು? Sudiksha Konanki

ಬಾಹ್ಯಾಕಾಶದಲ್ಲಿರುವ ವಿಶಿಷ್ಟ ಪರಿಸರವು ದೇಹದಲ್ಲಿ ದ್ರವದ ಬದಲಾವಣೆಗಳಿಗೆ ಕಾರಣವಾಗುತ್ತದೆ. ದೇಹದೊಳಗಿನ ದ್ರವಗಳು ಮೇಲಿನ ದೇಹದ ಮೇಲ್ಭಾಗಕ್ಕೆ ಮರುಹಂಚಿಕೆಯಾಗುತ್ತವೆ. ಇದರಿಂದ ಇಂಟ್ರಾಕ್ರೇನಿಯಲ್ ಒತ್ತಡ ಹೆಚ್ಚಾಗಬಹುದು. ಹೀಗಾದಲ್ಲಿ ತಲೆನೋವು, ದೃಷ್ಟಿಹೀನತೆ ಮತ್ತು ಮೆದುಳು ಹಾನಿಯಾಗಬಹುದು. ಅಲ್ಲದೆ, ಬಾಹ್ಯಾಕಾಶದಲ್ಲಿ ಕಾಸ್ಮಿಕ್ ವಿಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಡಿಎನ್​ಎಗೂ ಹಾನಿಯಾಗಬಹುದು. ಇದರಿಂದ ಕ್ಯಾನ್ಸರ್​ ಸೇರಿದಂತೆ ಇತರೆ ನರವೈಜ್ಞಾನಿಕ ಪರಿಸ್ಥಿತಿಗಳು ಸಹ ಎದುರಾಗಬಹುದು. ಬಾಹ್ಯಾಕಾಶ ಪ್ರಯಾಣದ ಸಂದರ್ಭದಲ್ಲಿ, ಗಗನಯಾತ್ರಿಗಳಿಗೆ ಲೈಫ್​ ಸಪೋರ್ಟಿಂಗ್​ ಸಿಸ್ಟಮ್​ ಮೂಲಕ ಆಮ್ಲಜನಕವನ್ನು ನಿರಂತರವಾಗಿ ಪೂರೈಸಲಾಗುತ್ತದೆ. ಆದಾಗ್ಯೂ, ಈ ವ್ಯವಸ್ಥೆಯು ವಿಫಲವಾದಲ್ಲಿ ಅಥವಾ ಆಮ್ಲಜನಕದ ಕೊರತೆಗೆ ಕಾರಣವಾಗುವ ತುರ್ತುಸ್ಥಿತಿ ಎದುರಾದರೆ, ಅದರಿಂದಾಗುವ ಅಪಾಯಗಳು ಮಾತ್ರ ಗಂಭೀರವಾಗಿವೇ. ಹೀಗಾಗಿ ಬಾಹ್ಯಾಕಾಶದಲ್ಲಿ ಹೆಚ್ಚಿನ ದಿನ ಉಳಿಯಲು ಸಾಧ್ಯವಿಲ್ಲ. ಒಂದು ವೇಳೆ ಉಳಿದರೆ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ.

ಘಟನೆಯ ಟೈಮ್‌ಲೈನ್

* 2024 ಜೂನ್ 5: ಸುನೀತಾ ಮತ್ತು ವಿಲ್ಮೋರ್ ಅವರೊಂದಿಗೆ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಐಎಸ್​ಎಸ್​ಗೆ ಹೊರಟಿತು
* ಜೂನ್ 6: ಸ್ಟಾರ್‌ಲೈನರ್ ಐಎಸ್​ಎಸ್​ನೊಂದಿಗೆ ಯಶಸ್ವಿಯಾಗಿ ಡಾಕ್ ಮಾಡಿತು. ಆದರೆ ಈ ಪ್ರಕ್ರಿಯೆಯಲ್ಲಿ, ಸ್ಟಾರ್‌ಲೈನರ್‌ನ ಥ್ರಸ್ಟರ್‌ಗಳು ಕಾರ್ಯನಿರ್ವಹಿಸದಿರುವುದು ಮತ್ತು ಪ್ರೊಪಲ್ಷನ್ ಸಿಸ್ಟಮ್‌ನಲ್ಲಿ ಹೀಲಿಯಂ ಸೋರಿಕೆಯಂತಹ ತಾಂತ್ರಿಕ ಸಮಸ್ಯೆಗಳು ಮುನ್ನೆಲೆಗೆ ಬಂದವು. ಇದರೊಂದಿಗೆ, ಗಗನಯಾತ್ರಿಗಳ ಸುರಕ್ಷಿತ ವಾಪಸಾತಿಯ ಬಗ್ಗೆ ಕಳವಳ ಉಂಟಾಯಿತು.
* ಜೂನ್ 12: ಸ್ಟಾರ್‌ಲೈನರ್ ಪ್ರಯಾಣಕ್ಕೆ ಸಿದ್ಧವಾಗಿಲ್ಲದ ಕಾರಣ ಸುನೀತಾ ಮತ್ತು ವಿಲ್ಮೋರ್ ಅವರ ವಾಪಸಾತಿ ಪ್ರವಾಸವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ ಎಂದು ನಾಸಾ ಘೋಷಿಸಿತು.
* ಜುಲೈ–ಆಗಸ್ಟ್: ವಾಪಸಾತಿಯ ಬಗ್ಗೆ ಅನಿಶ್ಚಿತತೆ ಮತ್ತಷ್ಟು ಹೆಚ್ಚಾಯಿತು. ಇದರೊಂದಿಗೆ, ಸುನೀತಾ ಮತ್ತು ವಿಲ್ಮೋರ್ ಐಎಸ್​ಎಸ್​ ಸಿಬ್ಬಂದಿಯನ್ನು ಸೇರಿಕೊಂಡರು ಮತ್ತು ಅದರ ನಿರ್ವಹಣಾ ಜವಾಬ್ದಾರಿಗಳು, ಸಂಶೋಧನೆ ಇತ್ಯಾದಿಗಳನ್ನು ಸಂಪೂರ್ಣವಾಗಿ ವಹಿಸಿಕೊಂಡರು. ಈ ಪ್ರಕ್ರಿಯೆಯಲ್ಲಿ, ಸುನೀತಾ ಅವರ ಆರೋಗ್ಯ ಸ್ವಲ್ಪ ಹದಗೆಟ್ಟಿತು. ಮೂಳೆ ಸಾಂದ್ರತೆ ಕಡಿಮೆಯಾಗುವಂತಹ ಹಲವಾರು ಸಮಸ್ಯೆಗಳು ಉದ್ಭವಿಸಿದವು.
* ಸೆಪ್ಟೆಂಬರ್: ಸುನೀತಾ ಐಎಸ್​ಎಸ್​ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡರು.
* ನವೆಂಬರ್: ಸುನೀತಾ ಐಎಸ್​ಎಸ್​ನಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ದೀಪಾವಳಿ ಮತ್ತು ಥ್ಯಾಂಕ್ಸ್ಗಿವಿಂಗ್ ಆಚರಿಸುತ್ತಾರೆ.
* ಡಿಸೆಂಬರ್: ಸುನೀತಾ ವಿದ್ಯಾರ್ಥಿಗಳೊಂದಿಗೆ ಚಾಟ್ ಮಾಡುತ್ತಾರೆ ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಬಾಹ್ಯಾಕಾಶದಲ್ಲಿನ ಜೀವನವು ತುಂಬಾ ತಮಾಷೆಯಾಗಿದೆ ಎಂದು ಹೇಳುತ್ತಾರೆ.
* 2025, ಜನವರಿ 30: ಸುನೀತಾ ತಮ್ಮ ಮೊದಲ ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡರು. ಅದರ ಭಾಗವಾಗಿ, ಅವರು ಐಎಸ್​ಎಸ್​ನ ಹೊರಗೆ ಪ್ರಮುಖ ದುರಸ್ತಿ ಕಾರ್ಯಗಳಲ್ಲಿ ಭಾಗವಹಿಸಿದರು.
* ಫೆಬ್ರವರಿ: ಸುನೀತಾ ಮತ್ತು ವಿಲ್ಮೋರ್ ಅವರು ಹಿಂದಿರುಗುವ ಪ್ರಯಾಣದ ಬಗ್ಗೆ ಅನಿಶ್ಚಿತತೆ ಹೆಚ್ಚುತ್ತಿರುವಾಗ ಅವರು ಚೆನ್ನಾಗಿದ್ದೇವೆ ಎಂದು ಸಂದೇಶಗಳನ್ನು ಕಳುಹಿಸಿದರು.
* ಮಾರ್ಚ್ 12: ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ ಅವರನ್ನು ಮರಳಿ ತರಲಾಗುತ್ತಿದೆ ಎಂದು ನಾಸಾ ಘೋಷಿಸಿತು.
* ಮಾರ್ಚ್ 16: ಕ್ರೂ ಡ್ರ್ಯಾಗನ್ -10 ಬಾಹ್ಯಾಕಾಶ ನೌಕೆ ISS ನೊಂದಿಗೆ ಯಶಸ್ವಿಯಾಗಿ ಡಾಕ್ ಆಯಿತು.
* ಮಾರ್ಚ್ 17: ಸುನೀತಾ, ವಿಲ್ಮೋರ್ ಮತ್ತು ಇತರ ಇಬ್ಬರು ಗಗನಯಾತ್ರಿಗಳನ್ನು ಹೊಂದಿರುವ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಮಾರ್ಚ್ 18 ರಂದು ಭೂಮಿಗೆ ಮರಳಲಿದೆ ಎಂದು ನಾಸಾ ಘೋಷಿಸಿದೆ.

ಸುನಿತಾ, ವಿಲ್ಮೋರ್​ಗೂ ಮುಂಚೆ ಹೆಚ್ಚು ಸಮಯ ಬಾಹ್ಯಕಾಶದಲ್ಲಿದ್ದ ಗಗನಯಾತ್ರಿಗಳು ಇವರೇ ನೋಡಿ! 437 ದಿನ ಏಕಾಂಗಿಯಾಗಿದ್ರು ವ್ಯಾಲೆರಿ!| Astronauts

ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್​ಗೆ 1 ದಿನಕ್ಕೆ ಕೇವಲ 347 ರೂ. ಮಾತ್ರ: 9 ತಿಂಗಳಿಗೆ 1 ಲಕ್ಷ ರೂ. ಅಷ್ಟೇ! Sunita Williams

Share This Article

ಒಂದು ದಿನಕ್ಕೆ ಒಬ್ಬರು ಎಷ್ಟು ಸಿಹಿ ತಿನ್ನಬೇಕು? ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳೊದೇನು? ಇಲ್ಲಿದೆ ಮಾಹಿತಿ..| WHO

WHO: ನೀವು ಪ್ರತಿದಿನ ಸಿಹಿ ತಿನ್ನುತ್ತಿದ್ದೀರಾ? ದಿನಂಪ್ರತಿ ಸಿಹಿತಿಂಡಿಗಳು-ಚಾಕಲೇಟ್​ ಸೇರಿದಂತೆ ಸಿಹಿ ಪಾನೀಯಗಳು ಸೇವನೆಯ ಅಭ್ಯಾಸವು…

ಅಡುಗೆಮನೆಯಲ್ಲಿ ಈ ಫೋಟೋವನ್ನು ಇಟ್ಟರೆ, ಮನೆಯಲ್ಲಿ ಅದೃಷ್ಟ, ಸಂಪತ್ತು ಸದಾ ತುಂಬಿರುತ್ತದಂತೆ! Vastu Tips

Vastu Tips: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ವಾಸ್ತು ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು…

ಫ್ರಿಡ್ಜ್​​​ನಲ್ಲಿಟ್ಟ ಮಾಂಸ ತಿನ್ನುತ್ತಿದ್ದೀರಾ? ನೀವು ಇದನ್ನು ಖಂಡಿತ ತಿಳಿದುಕೊಳ್ಳಬೇಕು..meat

meat: ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ರೆಫ್ರಿಜರೇಟರ್‌ಗಳು ಅತ್ಯಗತ್ಯವಾಗಿರುತ್ತವೆ. ಪ್ರತಿಯೊಂದು ವಸ್ತುವನ್ನು ಫ್ರಿಡ್ಜ್‌ನಲ್ಲಿ ಇಡುವುದನ್ನು ಅವರು…