ಸಾಧಿಸಲು ಇನ್ನೇನು ಉಳಿದಿದೆ? ವಿರಾಟ್​ ಕೊಹ್ಲಿಗೆ ಅವಮಾನ ಮಾಡಿತಾ ಸ್ಮೃತಿ ಮಂದನಾ ಪಡೆ!?

Virat Kohli
Published on

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಮಹಿಳಾ ತಂಡ ಡಬ್ಲ್ಯುಪಿಎಲ್​ ಟ್ರೋಫಿ ಜಯಿಸಿ ಎರಡು ವಾರಗಳೇ ಕಳೆದಿವೆ. ಮಹಿಳಾ ಪ್ರೀಮಿಯರ್​ ಲೀಗ್​ನ ಎರಡನೇ ಆವೃತ್ತಿಯಲ್ಲೇ ಈ ಮೈಲಿಗಲ್ಲು ಸ್ಥಾಪಿಸಿದೆ. ಪುರುಷರ ಐಪಿಎಲ್​ ಟೂರ್ನಿ ಆರಂಭವಾಗಿ ಎರಡು ವಾರ ಕಳೆದರೂ ಆರ್​ಸಿಬಿ ಮಹಿಳಾ ತಂಡದ ಟ್ರೋಫಿಯನ್ನು ಮುಂದಿಟ್ಟು ವಿರಾಟ್​ ಕೊಹ್ಲಿಯನ್ನು ಟ್ರೋಲ್​ ಮಾಡುತ್ತಿರುವುದು ಮುಂದುವರಿದಿದೆ.

ಡಬ್ಲ್ಯುಪಿಎಲ್​ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದನಾ ಪುರುಷರ ತಂಡವನ್ನು ತಮಾಷೆ ಮಾಡುತ್ತಿರುವಂತೆ ಕಾಣುತ್ತದೆ.

ಪುರುಷರ ತಂಡವನ್ನು ಅಣಕಿಸಿದ ಮಹಿಳಾ ತಂಡ ಡಬ್ಲ್ಯುಪಿಎಲ್​ ಫೈನಲ್​ ಬಳಿಕ ಸ್ಮೃತಿ ಮಂದಾನ ಅವರ ಆ್ಯಂಕರ್​ಗಳ ಗುಂಪಿನ ಜತೆ ಸಂಭಾಷಣೆ ನಡೆಸುತ್ತಿರುತ್ತಾರೆ. ಈ ವೇಳೆ ಸ್ಮೃತಿ ಅವರು ವಿರಾಟ್ ಕೊಹ್ಲಿ ಅವರ ಸಾಧನೆಗಳ ಬಗ್ಗೆ ಮಾತನಾಡುತ್ತಾ ಅವರು ಸಾಧಿಸಲು ಇನ್ನೇನು ಉಳಿದಿದೆ ಎಂದು ಪ್ರಶ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ ಆರ್​ಸಿಬಿ ತಂಡದ ಸಹ ಆಟಗಾರ್ತಿಯೊಬ್ಬರು ಮಧ್ಯಪ್ರವೇಶಿಸಿ ಐಪಿಎಲ್​ ಟ್ರೋಫಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗುತ್ತಾರೆ. ಈ ವೇಳೆ ಸಂಭಾಷಣೆ ನಿಲ್ಲುತ್ತದೆ ಮತ್ತು ಸ್ಮೃತಿ ಮಂದಾನ ಸೇರಿ ಆ್ಯಂಕರ್​ಗಳೆಲ್ಲರು ನಗುತ್ತಾರೆ. ಕೊಹ್ಲಿ ಹೆಸರೇಳುತ್ತಿದ್ದಂತೆ ಟ್ರೋಫಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದನ್ನು ನೋಡಿ ನೆಟ್ಟಿಗರು ಕೊಹ್ಲಿಯನ್ನು ಮಹಿಳಾ ತಂಡ ಅಣಕಿಸಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಇದಿಷ್ಟೇ ಅಲ್ಲದೆ, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಅಭಿಮಾನಿಗಳು ಇದೇ ವಿಡಿಯೋವನ್ನು ಮುಂದಿಟ್ಟುಕೊಂಡು ಕೊಹ್ಲಿ ಕಾಲೆಳೆಯುತ್ತಿದ್ದಾರೆ. ತನ್ನ ಮಹಿಳಾ ತಂಡದ ಆಟಗಾರರಿಂದಲೇ ಕೊಹ್ಲಿಗೆ ಅವಮಾನವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ.

ಇನ್ನೂ ಪ್ರಸಕ್ತ ಸೀಸನ್​ನಲ್ಲಿ ಆರ್​ಸಿಬಿ ತಂಡ ಮೊದಲ ಪಂದ್ಯವನ್ನು ಸಿಎಸ್​ಕೆ ಜತೆ ಎದುರಿಸಿ ಸೋಲುಂಡಿತು. ಎರಡನೇ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಗೆಲುವು ದಾಖಲಿಸಿತು. ಆದರೆ ಮೂರನೇ ಪಂದ್ಯದಲ್ಲಿ ಕೋಲ್ಕತ ನೈಟ್​ ರೈಡರ್ಸ್ ವಿರುದ್ಧ ಮತ್ತೆ ಸೋಲುಂಡಿತು. ನಾಳೆ ಲಖನೌ ಸೂಪರ್​ ಜೇಂಟ್ಸ್​ ವಿರುದ್ಧ ತನ್ನ ನಾಲ್ಕನೇ ಪಂದ್ಯವನ್ನು ಆರ್​ಸಿಬಿ ಎದುರಿಸಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net