More

  ನಟಿಸಿದ್ದು ಕೆಲವೇ ಸಿನಿಮಾಗಳು ಆದ್ರೆ ಮೃನಾಲ್​ ಠಾಕೂರ್​ ಒಟ್ಟು ಆಸ್ತಿ ಕೇಳಿದ್ರೆ ದಂಗಾಗ್ತೀರಾ!

  ಮುಂಬೈ: ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್​ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಾಲಿವುಡ್​ಗಿಂತ ಬೇರೆ ಭಾಷೆಗಳಲ್ಲೇ ಭಾರಿ ಆಫರ್​ಗಳು ಬರುತ್ತಿವೆ. ಸ್ಟಾರ್​ ನಟಿಯರ ಸಾಲಿಗೆ ಸೇರಿರುವ ಮೃನಾಲ್​, ತೆಲುಗಿನ ಫ್ಯಾಮಿಲಿ ಸ್ಟಾರ್​ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

  ಬೆರಳಣಿಕೆ ಸಿನಿಮಾಗಳಲ್ಲಿ ನಟಿಸಿರುವ ಮೃನಾಲ್​, ಅಲ್ಪಾವಧಿಯಲ್ಲಿ ಭಾರತೀಯ ಚಿತ್ರರಂಗದ ಬಹು ಬೇಡಿಕೆ ನಟಿ ಪಟ್ಟವನ್ನು ಅಲಂಕರಿಸಿದ್ದಾರೆ. ನಟಿಸಿದ ಕೆಲವೇ ಚಿತ್ರಗಳಾದರೂ ಕೋಟಿಗಟ್ಟಲೇ ಆಸ್ತಿಯನ್ನು ಮಾಡಿದ್ದಾರೆ. ಸದ್ಯ ಮೃನಾಲ್​ ಅವರ ಒಟ್ಟು ಆಸ್ತಿಯ ಮೌಲ್ಯ 33 ಕೋಟಿ ರೂಪಾಯಿ. ವರ್ಷದಿಂದ ವರ್ಷಕ್ಕೆ ಅವರ ಆಸ್ತಿಯಲ್ಲಿ ಏರಿಕೆ ಕಂಡಿದೆ.

  ವರದಿಗಳ ಪ್ರಕಾರ 2022ರಲ್ಲಿ 28 ಕೋಟಿ ರೂ. ಆಸ್ತಿ ಹೊಂದಿದ್ದರು. 2021ರಲ್ಲಿ 16 ಕೋಟಿ, 2020ರಲ್ಲಿ 8 ಕೋಟಿ, 2019ರಲ್ಲಿ 4 ಕೋಟಿ ರೂ. ಆಸ್ತಿ ಇತ್ತು. ಕೇವಲ ಐದೇ ವರ್ಷದಲ್ಲಿ 30 ಕೋಟಿ ರೂ. ಆಸ್ತಿಯನ್ನು ಮೃನಾಲ್​ ಸಂಪಾದನೆ ಮಾಡಿದ್ದಾರೆ. ಇತ್ತೀಚೆಗೆ ಸಂಭಾವನೆಯನ್ನು ಸಹ ಹೆಚ್ಚಿಸಿಕೊಂಡಿದ್ದಾರೆ. ಈ ಮುಂಚೆ 85 ಲಕ್ಷ ರೂ. ಪಡೆಯುತ್ತಿದ್ದ ಮೃನಾಲ್​ ಇದೀಗ ಒಂದು ಸಿನಿಮಾಗೆ 2 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

  ಮೃನಾಲ್​ ಅವರ ಬಳಿ 2.17 ಕೋಟಿ ರೂ. ಮೌಲ್ಯದ ಮರ್ಸಿಡೀಸ್​ ಬೆಂಜ್​, 30 ಲಕ್ಷದ ಟೊಯೋಟಾ ಫಾರ್ಚೂನರ್​ ಮತ್ತು 45 ಲಕ್ಷ ರೂ. ಮೌಲ್ಯದ ಹೊಂಡಾ ಕಾರುಗಳನ್ನು ಹೊಂದಿದ್ದಾರೆ. ಅಂದಹಾಗೆ ಮೃನಾಲ್​ ಅವರು ಅತ್ಯುತ್ತಮ ಕಾರುಗಳನ್ನು ಹೊಂದಿದ್ದಲ್ಲದೆ, ಕೆಲವು ಸುಂದರವಾದ ಬ್ಯಾಗ್‌ಗಳನ್ನು ಸಹ ಹೊಂದಿದ್ದಾರೆ. ಒಮ್ಮೆ ಅವರು 2.50 ಲಕ್ಷ ರೂ. ಮೌಲ್ಯದ ಮಿನಿ ಹ್ಯಾಂಡ್‌ಬ್ಯಾಗ್ ಬಳಸಿದ ಸುದ್ದಿ ಭಾರಿ ವೈರಲ್​ ಆಗಿತ್ತು.

  See also  ಗೋವಿಂದ, ಗೋವಿಂದ ಕೆಆರ್‌ಎಸ್ ನೀರೆಲ್ಲ ಖಾಲಿ ಗೋವಿಂದ: ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

  ಸಿನಿಮಾ ವಿಚಾರಕ್ಕೆ ಬಂದರೆ, ಮೃನಾಲ್​ ಠಾಕೂರ್​ ಅವರು ವಿಜಯ್​ ದೇವರ ನಟನೆಯ ಫ್ಯಾಮಿಲಿ ಸ್ಟಾರ್​ ಸಿನಿಮಾದಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಚಿತ್ರದ ಟೈಲರ್​ ಈಗಾಗಲೇ ಎಲ್ಲೆಡೆ ಒಳ್ಳೆಯ ರೆಸ್ಪಾನ್ಸ್​ ಪಡೆದುಕೊಳ್ಳಲಿದೆ. (ಏಜೆನ್ಸೀಸ್​)

  ದೇಹದ ಆ ಭಾಗಗಳನ್ನು ಜೂಮ್​ ಮಾಡಿ… ನೋವುಂಟು ಮಾಡುತ್ತಿದೆ ಎಂದ ನಟಿ ಮೃನಾಲ್​ ಠಾಕೂರ್​

  ನನ್ನ ಕಾಲ್ಬೆರಳಿನ ಸತ್ತ ಚರ್ಮವೂ ಸೆಕ್ಸಿಯಾಗಿದೆ ಆದ್ರೆ…. ದಪ್ಪ ತೊಡೆ, ಮಾದಕತೆ ಬಗ್ಗೆ ಮೃನಾಲ್​ ಓಪನ್​ ಟಾಕ್​

  ಮೃನಾಲ್​ ಠಾಕೂರ್​ ಹಳೇ ಫೋಟೋ ವೈರಲ್​! ಇವರೇನಾ ಸೀತಾಮಹಾಲಕ್ಷ್ಮೀ ಎನ್ನುತ್ತಿರುವ ನೆಟ್ಟಿಗರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts