More

    ದೇಹದ ಆ ಭಾಗಗಳನ್ನು ಜೂಮ್​ ಮಾಡಿ… ನೋವುಂಟು ಮಾಡುತ್ತಿದೆ ಎಂದ ನಟಿ ಮೃನಾಲ್​ ಠಾಕೂರ್​

    ಹೈದರಾಬಾದ್​: ಮೃನಾಲ್ ಠಾಕೂರ್. ಈ ಹೆಸರು ಈಗ ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ತೆಲುಗಿನಲ್ಲಿ ತಾನು ನಟಿಸಿದ ಕೇವಲ ಎರಡೇ ಚಿತ್ರಕ್ಕೆ ಮೃನಾಲ್​ ಸ್ಟಾರ್ ನಟಿ ಇಮೇಜ್ ಪಡೆದುಕೊಂಡಿದ್ದಾರೆ. ಮೂಲತಃ ಬಾಲಿವುಡ್ ಬೆಡಗಿಯಾಗಿರುವ ಮೃನಾಲ್​, ಟಾಲಿವುಡ್​ನಲ್ಲಿ ಅಪಾರ ಕ್ರೇಜ್ ಗಳಿಸಿದ್ದಾರೆ. ತನ್ನ ಮನಮೋಹಕ ಸೌಂದರ್ಯ ಮತ್ತು ಅತ್ಯುತ್ತಮ ನಟನೆಯಿಂದ ತೆಲುಗು ಪ್ರೇಕ್ಷಕರ ಮನ ಕದ್ದಿರುವ ಮೃನಾಲ್​, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ತಾವು ಎದುರಿಸುತ್ತಿರುವ ಕಹಿ ಕ್ಷಣಗಳನ್ನು ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಮೃನಾಲ್​ ಅವರಿಗೆ ಏನಾಯಿತು ಎಂದು ನಾವೀಗ ತಿಳಿಯೋಣ.

    ಟಾಲಿವುಡ್​ನಲ್ಲಿ ಸೀತಾರಾಮ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಪರಿಚಯವಾದ ಮೃನಾಲ್, ತನ್ನ ಮೊದಲ ಸಿನಿಮಾದಿಂದಲೇ ತೆಲುಗು ಇಂಡಸ್ಟ್ರಿಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಆದರೆ ಸಿನಿಮಾಗಳ ಆಯ್ಕೆಯಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾ ಯಶಸ್ಸು ಪಡೆಯುತ್ತಿರುವ ಮೃನಾಲ್​ಗೆ ಈ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ಕಹಿ ಘಟನೆಗಳು ಎದುರಾಗಿದ್ದವು. ಆದರೆ ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    ಕೆಲವು ನಾಯಕಿಯರನ್ನು ವಸ್ತುವಿನಂತೆ ನೋಡುತ್ತಾರೆ. ಮೇಲಾಗಿ ನಾಯಕಿಯರ ಫೋಟೋಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಭಾಗಗಳ ಮೇಲೆ ಕೇಂದ್ರೀಕರಿಸುವುದು, ಅವುಗಳನ್ನು ಜೂಮ್ ಮಾಡುವುದು ಮತ್ತು ಕೆಟ್ಟ ಕಾಮೆಂಟ್​ಗಳನ್ನು ಮಾಡುವುದು. ಫೋಟೋಗಳನ್ನು ನಾನಾ ರೀತಿಯಲ್ಲಿ, ಅಶ್ಲೀಲವಾಗಿ ಎಡಿಟ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ ಎಂದು ಮೃನಾಲ್​ ಕಿಡಿಕಾರಿದ್ದಾರೆ. ಆದರೆ, ಈ ವಿಚಾರದಲ್ಲಿ ತಾನೂ ಕೂಡ ಬಲಿಪಶು ಎಂದು ಹೇಳದೆ ಎಲ್ಲರನ್ನು ಸೇರಿಸಿಕೊಂಡು ಹೇಳಿದ್ದಾರೆ. ಇಂತಹ ಸಂಗತಿಗಳು ನಮಗೆ ತುಂಬಾ ನೋವನ್ನುಂಟು ಮಾಡುತ್ತಿದೆ ಎಂದು ಮೃನಾಲ್​ ಹೇಳಿದ್ದಾರೆ.

    ಈ ಹಿಂದೆ ಮೃನಾಲ್​ ಅವರು ಬಾಡಿ ಶೇಮಿಂಗ್​ ಬಗ್ಗೆ ಮಾತನಾಡಿದ್ದರು. ಆ ವ್ಯಕ್ತಿ ನನ್ನನ್ನು ಮಾದಕ ಪಾತ್ರದಲ್ಲಿ ನೋಡುವುದಿಲ್ಲವಂತೆ ಅಥವಾ ನಾನು ಸಾಕಷ್ಟು ಸೆಕ್ಸಿಯಾಗಿ ಕಾಣುವುದಿಲ್ಲ ಎಂದು ಹೇಳಿದ್ದರಿಂದ ನಿರ್ಮಾಪಕರೊಬ್ಬರು ನನಗೆ ಅವಕಾಶ ನೀಡಲಿಲ್ಲ. ನನ್ನ ಕಾಲ್ಬೆರಳಿನ ಸತ್ತ ಚರ್ಮವೂ ಕೂಡ ಸೆಕ್ಸಿಯಾಗಿದೆ ಆದರೆ, ನಿರಂತರವಾಗಿ ಆ ಪಾತ್ರಗಳಿಗೆ ನಾನು ಒಡ್ಡಿಕೊಳ್ಳುವುದಿಲ್ಲ ಎಂದಿದ್ದರು.

    ನಾನು ಜೇಡಿಮಣ್ಣಾಗಲು ಬಯಸುತ್ತೇನೆ. ಏಕೆಂದರೆ, ಜೇಡಿಮಣ್ಣನ್ನು ವಿವಿಧ ಭಾಗಗಳಾಗಿ ರೂಪಿಸಬಹುದು. ಮಾದಕತೆ ಎಂಬುದು ಒಬ್ಬರ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ನನಗೆ ಒಳ್ಳೆಯ ಸಂಭಾಷಣೆಯು ಕೂಡ ಸೆಕ್ಸಿಯಾಗಿದೆ ಎಂದ ಮೃನಾಲ್​, ಮೊದಲ ಬಾರಿಗೆ ಹಾಡೊಂದರಲ್ಲಿ ನಟಿಸಿದಾಗ, ತೂಕ ಇಳಿಸಿಕೊಳ್ಳಲು ಜನರು ಸಲಹೆ ನೀಡಿದ್ದನ್ನು ಮೃನಾಲ್​ ನೆನೆದರು. ಅಲ್ಲದೆ, ಬಿಟ್ಟಿ ಸಲಹೆಗಳಿಗೆ ಆ ವೇಳೆ ಖಡಕ್​ ಆಗಿಯೇ ತಿರುಗೇಟು ನೀಡಿದ್ದ ಮೃನಾಲ್​, ನನಗೆ ದಪ್ಪ ತೊಡೆಗಳಿವೆ ಮತ್ತು ನಾನು ಅವುಗಳನ್ನು ಹೊಂದಿದ್ದೇನೆ. ನನಗೆ ಅನಾನುಕೂಲವಾಗಿಲ್ಲದಿದ್ದರೆ, ನೀವು ಯಾಕೆ ಹಾಗೆ ಫೀಲ್​ ಮಾಡಿಕೊಳ್ಳುತ್ತೀರಿ ಎಂದಿದ್ದರಂತೆ.

    ಮೃನಾಲ್ ಅವರು ಜಿಮ್‌ಗೆ ಹೋದಾಗ ಯಾರೋ ಅವರಿಗೆ ಸಲಹೆ ನೀಡಿದ್ದನ್ನು ನೆನೆದರು. ಇವು ನಿಮ್ಮ ಸಮಸ್ಯೆಯ ಪ್ರದೇಶಗಳಾಗಿವೆ ಎಂದು ದೇಹದ ಬಗ್ಗೆ ಕಾಮೆಂಟ್​ ಮಾಡಿದರಂತೆ. ಆದರೆ, ಆ ಕಾಮೆಂಟ್‌ಗೆ ಬಾಸ್ ಮಹಿಳೆಯಂತೆ ಪ್ರತಿಕ್ರಿಯಿಸಿದ ಮೃನಾಲ್, ಇಲ್ಲ ಇದು ನನ್ನ ಶಕ್ತಿ ಎಂದಿದ್ದರಂತೆ.

    ಸಿನಿಮಾ ವಿಚಾರಕ್ಕೆ ಬಂದರೆ, ಮೃನಾಲ್​ ಠಾಕೂರ್​ ಅವರು ವಿಜಯ್​ ದೇವರ ನಟನೆಯ ಫ್ಯಾಮಿಲಿ ಸ್ಟಾರ್​ ಸಿನಿಮಾದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

    ನನ್ನ ಕಾಲ್ಬೆರಳಿನ ಸತ್ತ ಚರ್ಮವೂ ಸೆಕ್ಸಿಯಾಗಿದೆ ಆದ್ರೆ…. ದಪ್ಪ ತೊಡೆ, ಮಾದಕತೆ ಬಗ್ಗೆ ಮೃನಾಲ್​ ಓಪನ್​ ಟಾಕ್​

    Lust and S..x ಬಗ್ಗೆ ಮೃನಾಲ್​ ಮುಕ್ತ​ ಮಾತು: ಸೀತಾ ಮಹಾಲಕ್ಷ್ಮೀಯ ಹೇಳಿಕೆ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts