ಹೈದರಾಬಾದ್: ಖ್ಯಾತ ನಟಿ ಸಮಂತಾ ರುತು ಪ್ರಭು ಅವರ 10ನೇ ತರಗತಿಯ ಅಂಕಪಟ್ಟಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಮಂತಾ ಅವರು ಚೆನ್ನೈನ ಸಿಎಸ್‌ಐ ಸೇಂಟ್ ಸ್ಟೀಫನ್ಸ್ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಶಿಕ್ಷಣ ಪಡೆದರು. ಅಂದು ಶಾಲೆಯಲ್ಲಿ ಟಾಪರ್ ಆಗಿದ್ದ ನಟಿ, ಈಗ ಸಿನಿಮಾದಲ್ಲೂ ಟಾಪರ್ ಆಗಿದ್ದಾರೆ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ.
ಸಮಂತಾ ಅವರ ಎಸ್ಎಸ್ಎಲ್ಸಿ ರಿಪೋರ್ಟ್ ಕಾರ್ಡ್‌ನಲ್ಲಿ ಇಂಗ್ಲಿಷ್ 1 ರಲ್ಲಿ 90 ಅಂಕಗಳು ಮತ್ತು ಇಂಗ್ಲಿಷ್ 2ರಲ್ಲಿ 74 ಅಂಕಗಳನ್ನು ಗಳಿಸಿದ್ದಾರೆ. ಗಣಿತಶಾಸ್ತ್ರ 1ರಲ್ಲಿ 100ಕ್ಕೆ 100 ಹಾಗೂ ಗಣಿತಶಾಸ್ತ್ರ 2ರಲ್ಲಿ 99 ಅಂಕಗಳನ್ನು ಪಡೆದಿದ್ದಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಅಂಕಪಟ್ಟಿಯಲ್ಲಿ ಕೆಲ ತಪ್ಪುಗಳು ಎದ್ದು ಕಾಣುತ್ತಿವೆ.
ಯಾವುವು ಆ ತಪ್ಪುಗಳೆಂದರೆ, ಸಮಂತಾಗೆ ಭೌತಶಾಸ್ತ್ರ ಪರೀಕ್ಷೆಯಲ್ಲಿ 95 ಮತ್ತು ಸಸ್ಯಶಾಸ್ತ್ರದಲ್ಲಿ 84 ಅಂಕಗಳನ್ನು ನೀಡಲಾಗಿದೆ. ಆದರೆ, ಒಟ್ಟು ಅಂಕಗಳು ಇರುವುದು 50 ಮಾತ್ರ. ಆದರೆ, 95 ಮತ್ತು 84 ಅಂಕಗಳನ್ನು ನೀಡಿದ್ದು ಹೇಗೆ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳಿದ್ದಾರೆ. ಆದರೆ, ಈ ಪ್ರಶ್ನೆಗೆ ಸಮಂತಾ ಬಳಿ ಮಾತ್ರ ಉತ್ತರವಿದೆ.
ಇನ್ನು ಸಮಂತಾ ಮಾನಹಾನಿ ಮಾಡಲು ಯಾರೋ ಬಿಡುಗಡೆ ಮಾಡಿರುವ ನಕಲಿ ಮಾರ್ಕ್ ಶೀಟ್ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಸ್ವತಃ ಸಮಂತಾ ಅವರೇ ಹಿಂದೊಮ್ಮೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಆದ್ದರಿಂದ ಈ ಅಂಕಪಟ್ಟಿ ಸಮಂತಾರದ್ದೇ ಎಂದು ಹೇಳಲಾಗಿದೆ. ಇತ್ತ ನೆಟ್ಟಿಗರು ಕೂಡ ಆಕೆ 50ಕ್ಕೆ 84 ಅಂಕ ಗಳಿಸಿದ್ದು ಹೇಗೆ ಎಂದು ಮೀಮ್ಸ್ ಹರಿಬಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಮಂತಾ ವಿಚಾರಕ್ಕೆ ಬರುವುದಾದರೆ ನಾಗಚೈತನ್ಯ ಜೊತೆ ಡಿವೋರ್ಸ್ ಮಾಡಿಕೊಂಡಿರುವ ಸಮಂತಾ, ಸದ್ಯ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅವರ ನಿರೀಕ್ಷಿತ ಸ್ಪೈ ಥ್ರಿಲ್ಲರ್ ಸರಣಿ “ಸಿಟಾಡೆಲ್ ಹನಿ ಬನ್ನಿ” ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ. ಬಾಲಿವುಡ್ ನಟ ವರುಣ್ ಧವನ್ ಜತೆ ನಟಿಸಿದ್ದಾರೆ. ಈ ಸರಣಿಯು ಹಾಲಿವುಡ್ ವೆಬ್ ಸರಣಿ ಸಿಟಾಡೆಲ್‌ನ ರೀಮೇಕ್ ಆಗಿದೆ. ಇದರ ಹೊರತಾಗಿ ಮತ್ತೊಂದೆಡೆ ಅಗ್ರ ಒಟಿಟಿ ಕಂಪನಿ ನೆಟ್‌ಫ್ಲಿಕ್ಸ್‌ನೊಂದಿಗೆ “ರಕ್ತ ಬ್ರಹ್ಮಾಂಡ” ಎಂಬ ಸರಣಿಯಲ್ಲಿ ಸಮಂತಾ ನಟಿಸಲಿದ್ದಾರೆ. ಈ ಸರಣಿಯನ್ನು “ತುಂಬದ್” ಖ್ಯಾತಿಯ ನಿರ್ದೇಶಕ ಅನಿಲ್ ರಾಹಿ ಬರ್ವೆ ನಿರ್ದೇಶಿಸಿದ್ದಾರೆ. ಇದರಲ್ಲೂ ಸಮಂತಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. (ಏಜೆನ್ಸೀಸ್)
ವಿರಾಟ್ ಕೊಹ್ಲಿ SSLC ಮಾರ್ಕ್ಸ್ ಕಾರ್ಡ್ ವೈರಲ್! ರನ್ ಮೆಷಿನ್ ಪಡೆದ ಅಂಕ ಎಷ್ಟು? ಗಣಿತದ ಮೇಲೆ ಎಲ್ಲರ ಕಣ್ಣು
ಅವನನ್ನ ಬಿಡ್ಬೇಡಿ, ಪಾಠ ಕಲಿಸಿ, ಇವನಂಥವರು ಭೂಮಿ ಮೇಲಿರಬಾರದು! ಪವಿತ್ರಾ ಮಾತಿಗೆ ರೊಚ್ಚಿಗೆದ್ದ ಡಿ-ಗ್ಯಾಂಗ್