ಕೂಲ್ ಡ್ರಿಂಕ್ಸ್ ಕುಡಿದರೆ ಹೊಟ್ಟೆಯಲ್ಲಿ ಏನೆಲ್ಲ ಬದಲಾವಣೆ ಆಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ.... Cool drinks

Cool drinks
Published on

Cool drinks : ಅನೇಕ ಜನರು ನಿಯಮಿತವಾಗಿ ಕೂಲ್ ಡ್ರಿಂಕ್ಸ್ ಸೇವಿಸುತ್ತಾರೆ. ಪ್ರಯಾಣ ಮಾಡುವಾಗ, ಕೆಲಸ ಮಾಡುವಾಗ, ಹುಟ್ಟುಹಬ್ಬ ಆಚರಣೆ ಮಾಡುವಾಗ ಹೀಗೆ ಒಂದಿಲ್ಲೊಂದು ಸಂದರ್ಭದಲ್ಲಿ ಕೂಲ್​ ಡ್ರಿಂಕ್ಸ್​ ಸೇವನೆ ಮಾಡುತ್ತಾರೆ. ಕೂಲ್​ ಡ್ರಿಂಕ್ಸ್​ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಅದನ್ನು ಕುಡಿಯುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ ಮತ್ತು ಕೂಲ್​ ಡ್ರಿಂಕ್ಸ್​ ಕಂಪನಿಗಳ ಆದಾಯವು ಕೂಡ ಹೆಚ್ಚಾಗುತ್ತಿದೆ.

ಕೂಲ್ ಡ್ರಿಂಕ್ಸ್ ಕುಡಿಯುವುದರಿಂದ ಹೊಟ್ಟೆಯಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎಂಬುದನ್ನು ನಾವೀಗ ನೋಡೋಣ. ಕೆಲ ಜನರು ಬಾಯಾರಿಕೆಯಾದಾಗ ನೀರಿನ ಬದಲು ತಂಪು ಪಾನೀಯಗಳನ್ನು ಸೇವಿಸುತ್ತಾರೆ. ಬಾಯಾರಿಕೆಯಾದಾಗ ಕೂಲ್​ ಡ್ರಿಂಕ್ಸ್​ ಕುಡಿಯಿರಿ ಎಂದು ಜಾಹೀರಾತುಗಳಲ್ಲೂ ತೋರಿಸಲಾಗುತ್ತದೆ. ಹೀಗಾಗಿ ಕೂಲ್​ ಡ್ರಿಂಕ್ಸ್​ ಕುಡಿದರೆ ಬಾಯಾರಿಕೆ ನೀಗುತ್ತದೆ ಎಂದು ಬಹುತೇಕರು ಭಾವಿಸಿದ್ದಾರೆ. ಆದರೆ, ಅಸಲಿ ಸಂಗತಿ ಬೇರೇನೆ ಇದೆ.

ಕೂಲ್​​ ಡ್ರಿಂಕ್ಸ್​ ವಾಸ್ತವವಾಗಿ ನಿರ್ಜಲೀಕರಣವನ್ನು ಉಂಟುಮಾಡಬಹುದು, ಏಕೆಂದರೆ ಅವುಗಳು ಹೆಚ್ಚು ಮೂತ್ರ ವಿಸರ್ಜಿಸಲು ಕಾರಣವಾಗುತ್ತದೆ. ಇದು ನಿಮ್ಮ ದೇಹದಲ್ಲಿ ದ್ರವದ ನಷ್ಟಕ್ಕೆ ಕಾರಣವಾಗುತ್ತದೆ. ತಂಪು ಪಾನೀಯಗಳಲ್ಲಿ ಕ್ಯಾಲೋರಿ ಮತ್ತು ಸಕ್ಕರೆ ಹೆಚ್ಚಾಗಿದ್ದು, ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಕೂಲ್​ ಡ್ರಿಂಕ್ಸ್​ ಕುಡಿದಾಗ ನೀರಿನ ಅಂಶವು ಕಡಿಮೆಯಾಗುತ್ತದೆ. ಇದರಿಂದ ಬಿಪಿ ಕಡಿಮೆಯಾಗುವುದು, ಅಂಗಾಂಗಗಳಿಗೆ ರಕ್ತ ಪೂರೈಕೆ ಕಡಿಮೆಯಾಗುವುದರಿಂದ ಕಿಡ್ನಿ ಸಮಸ್ಯೆಗಳು ಮತ್ತು ಮೂತ್ರನಾಳದ ಸೋಂಕುಗಳು ಸಹ ಉಂಟಾಗಬಹುದು. ಈ ತಂಪು ಪಾನೀಯಗಳಲ್ಲಿ ಶೇ. 90 ರಿಂದ 99 ರಷ್ಟು ನೀರು ಇರುತ್ತದೆ. ಅಲ್ಲದೆ, ಸಿಹಿಕಾರಕಗಳು, ಸಕ್ಕರೆ, ಕೃತಕ ಬಣ್ಣಗಳು ಮತ್ತು ಕಾರ್ಬನ್ ಡೈಆಕ್ಸೈಡ್ ಅನ್ನು ಸಹ ಒಳಗೊಂಡಿದೆ. ಕಾರ್ಬೊನೇಟೆಡ್ ಪಾನೀಯಗಳಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ನೀರಿನೊಂದಿಗೆ ಹೆಚ್ಚಿನ ಒತ್ತಡದಲ್ಲಿ ಬೆರೆಸಲಾಗುತ್ತದೆ. ಇದರಿಂದಾಗಿ ತಂಪು ಪಾನೀಯಗಳಲ್ಲಿ ಗುಳ್ಳೆಗಳು ರೂಪುಗೊಳ್ಳುತ್ತವೆ. ಇದನ್ನು ಕುಡಿಯುವುದರಿಂದ ಒಂದು ರೀತಿಯ ಸ್ಪರ್ಶದ ಅನುಭವವಾಗುತ್ತದೆ.

ಕೂಲ್ ಡ್ರಿಂಕ್ಸ್ ಹೆಚ್ಚು ಕುಡಿಯುವುದರಿಂದ ಹಲ್ಲಿನ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ಇದರಲ್ಲಿ ಸಕ್ಕರೆ ಅಂಶ ಇರುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಕೂಲ್​ಡ್ರಿಂಕ್ಸ್​ನಲ್ಲಿ ಯಾವುದೇ ಪೌಷ್ಟಿಕಾಂಶ ಇರುವುದಿಲ್ಲ. ಕ್ಯಾಲೋರಿಗಳು ಮಾತ್ರ ಇರುತ್ತದೆ. ಇದರ ಸೇವನೆಯು ನಿದ್ರಾಹೀನತೆಗೆ ಕಾರಣವಾಗಬಹುದು. ಆದ್ದರಿಂದ ಕೂಲ್ ಡ್ರಿಂಕ್ಸ್ ಸೇವಿಸುವುದನ್ನು ತಪ್ಪಿಸಿ, ನಿಮಗೆ ಬಾಯಾರಿಕೆಯಾದಾಗ ಸಾಕಷ್ಟು ನೀರು ಕುಡಿಯಿರಿ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net