ಹೃದಯಾಘಾತವಾಗುವ ಒಂದು ವಾರಕ್ಕೂ ಮೊದಲು ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ… ನಿರ್ಲಕ್ಷಿಸಬೇಡಿ! Heart Attack

Heart Attack
Published on

Heart attack: ಆರೋಗ್ಯವಂತರಾಗಿರಲು ಪ್ರತಿಯೊಬ್ಬರೂ ತುಂಬಾ ಕಾಳಜಿ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಅನೇಕರು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದರಲ್ಲೂ ಹೃದಯಾಘಾತದ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಚಿಕ್ಕ ಮಕ್ಕಳು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.

ಇನ್ನು ಹೃದಯಾಘಾತ ಆಗುವ ಮುನ್ನ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ವಿಶೇಷವಾಗಿ ಕೆಲವು ಲಕ್ಷಣಗಳು ವಾರದ ಮೊದಲು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ನಿರ್ಲಕ್ಷಿಸುವುದು ಖಂಡಿತ ಒಳ್ಳೆಯದಲ್ಲ. ಹೃದಯಾಘಾತದ ಒಂದು ವಾರದ ಮೊದಲು ಎದೆಯಲ್ಲಿ ಸ್ವಲ್ಪ ನೋವು ಇರುತ್ತದೆ. ಸಾಮಾನ್ಯವಾಗಿ ಅಸಿಡಿಟಿಯಂತಹ ಸಮಸ್ಯೆಗಳಿದ್ದಾಗಲೂ ಎದೆನೋವು ಬರುತ್ತದೆ. ಹೃದಯಾಘಾತದ ಸಮಯದಲ್ಲಿ ಎದೆ ನೋವು ತೀವ್ರವಾಗಿರುತ್ತದೆ. ಹೆಚ್ಚಾಗಿ ಇದು ಎಡಭಾಗದಲ್ಲಿ ಬರುತ್ತದೆ.

Heart Attack

ಇದಿಷ್ಟೇ ಅಲ್ಲದೆ, ಹೃದಯಾಘಾತದ ಮೊದಲು, ಭುಜ ಮತ್ತು ತೋಳುಗಳಲ್ಲಿ ನೋವು ಕಾಣಿಸುತ್ತದೆ. ಎಡ ಭುಜದಲ್ಲಿ ತೀವ್ರ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಅಲ್ಲದೆ ಕೆಲವು ಸಂದರ್ಭಗಳಲ್ಲಿ ಹಸ್ತದ ಜೊತೆಗೆ ಕೈಗಳಲ್ಲಿ ನೋವು ಉಂಟಾಗುತ್ತದೆ. ಅಸಹನೀಯ ನೋವು ಒಂದು ವಾರಕ್ಕಿಂತ ಹೆಚ್ಚು ಕಾಲ ಇದ್ದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇನ್ನು ಹೃದಯಾಘಾತವು ಬೆನ್ನುನೋವಿಗು ಕೂಡ ಸಂಬಂಧಿಸಿದೆ. ಯಾವುದೇ ಶ್ರಮವಿಲ್ಲದೆ ಸುಮ್ಮನೇ ಬೆನ್ನು ನೋವು ಕಾಣಿಸಿಕೊಂಡರೆ, ವೈದ್ಯರನ್ನು ಸಂಪರ್ಕಿಸಿ. ಅಲ್ಲದೆ, ಹೃದಯಾಘಾತದ ಮೊದಲು ಎಡ ದವಡೆಯಲ್ಲಿ ಹಠಾತ್ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಕೂಡ ನಿರ್ಲಕ್ಷಿಸಬೇಡಿ.

ಹೃದಯಾಘಾತಕ್ಕೂ ಮುನ್ನ ಈ ಮೇಲಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂಬುದನ್ನು ಮರೆಯದಿರಿ ಮತ್ತು ಯಾವುದೇ ಸಮಸ್ಯೆ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ. ಹೃದಯದ ಆರೋಗ್ಯಕ್ಕೆ ಉತ್ತಮವಾದ ಆಹಾರವನ್ನು ಸೇವಿಸುವುದು ಮತ್ತು ಹಗಲಿನಲ್ಲಿ ದೈಹಿಕ ಚಟುವಟಿಕೆ ಇರುವಂತೆ ನೋಡಿಕೊಳ್ಳುವುದು ಮುಖ್ಯ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್​ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net