ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಒಂದು ತಿಂಗಳ ಕಾಲ ಬೇಳೆಕಾಳುಗಳನ್ನು ತಿನ್ನುವುದನ್ನು ನಿಲ್ಲಿಸಿದರೆ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಅಂದಹಾಗೆ ಸಸ್ಯಾಧಾರಿತ ಆಹಾರಗಳಲ್ಲಿ ಪ್ರೋಟೀನ್ ಸಮೃದ್ಧವಾಗಿರುತ್ತದೆ. ಸ್ನಾಯುಗಳನ್ನು ಬೆಳೆಸಲು ಮತ್ತು ನಿರ್ವಹಿಸಲು ಪ್ರೋಟೀನ್ ತುಂಬಾ ಅವಶ್ಯಕವಾಗಿದೆ. ವಿಶೇಷವಾಗಿ ಸಸ್ಯಾಹಾರಿಗಳಿಗೆ ಬೇಳೆಕಾಳುಗಳು ಪ್ರೋಟೀನ್ನ ಮೂಲವಾಗಿದೆ. ಏಕೆಂದರೆ, ಮಾಂಸಗಳಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಮಾಂಸವನ್ನು ಬಿಟ್ಟರೆ ಬೇಳೆಕಾಳುಗಳಲ್ಲಿ ಪ್ರೋಟೀನ್ ಹೆಚ್ಚಿರುತ್ತದೆ.
ಬೇಳೆಕಾಳುಗಳ ಪ್ರಯೋಜನಗಳು
* ಬೇಳೆಕಾಳುಗಳಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಆರೋಗ್ಯಕರ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ.
* ಕಬ್ಬಿಣ, ಪೊಟ್ಯಾಸಿಯಂ, ಮೆಗ್ನೀಸಿಯಂ ಹಾಗೂ ಬಿ ಜೀವಸತ್ವಗಳಿಂದ ತುಂಬಿರುವ ಬೇಳೆಕಾಳುಗಳು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.
* ಬೇಳೆಕಾಳುಗಳಲ್ಲಿರುವ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ನಿಧಾನವಾಗಿ ಜೀರ್ಣವಾಗುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಹೆಚ್ಚಳವನ್ನು ತಡೆಯುತ್ತದೆ.
* ಬೇಳೆಕಾಳುಗಳ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದ್ರೋಗದ ಅಪಾಯವೂ ಕಡಿಮೆಯಾಗುತ್ತದೆ.
* ಬೇಳೆಕಾಳುಗಳು ಪ್ರೋಟೀನ್ ಮತ್ತು ಫೈಬರ್ನ ಉತ್ತಮ ಮೂಲವಾಗಿದ್ದು, ತೂಕ ನಷ್ಟ ಅಥವಾ ತೂಕ ನಿರ್ವಹಣೆಗೆ ತುಂಬಾ ಸಹಾಯ ಮಾಡುತ್ತದೆ.
* ದ್ವಿದಳ ಧಾನ್ಯಗಳಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕವು ಮೂಳೆಗಳನ್ನು ಬಲವಾಗಿಡಲು ಮುಖ್ಯವಾಗಿದೆ
ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನುವುದನ್ನು ಬಿಟ್ಟರೆ ಏನಾಗುತ್ತದೆ?
* ಸಸ್ಯಾಹಾರಿಗಳು ಪ್ರೋಟೀನ್‌ಗಾಗಿ ಬೇಳೆಕಾಳುಗಳ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಒಂದು ವೇಳೆ ಬೇಳೆಕಾಳುಗಳನ್ನು ತಿನ್ನುವುದನ್ನು ನಿಲ್ಲಿಸಿದರೆ ಸ್ನಾಯುಗಳ ನಷ್ಟ ಮತ್ತು ದೌರ್ಬಲ್ಯಕ್ಕೆ ಕಾರಣವಾಗಬಹುದು.
* ಕಡಿಮೆ ಫೈಬರ್ ಸೇವನೆಯು ಮಲಬದ್ಧತೆ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.
* ಜೀವಸತ್ವಗಳು ಮತ್ತು ಖನಿಜಗಳ ಕೊರತೆಯು ಒಟ್ಟಾರೆ ಆರೋಗ್ಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಬಹುದು.
* ಪೋಷಕಾಂಶಗಳ ಕೊರತೆಯಿಂದ ದೇಹದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುವುದಿಲ್ಲ.
ಬೇಳೆಕಾಳುಗಳನ್ನು ತ್ಯಜಿಸಿದರೆ ನಿಮ್ಮ ಒಟ್ಟಾರೆ ಆಹಾರ, ಜೀವನಶೈಲಿ ಮತ್ತು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
48ನೇ ವಯಸ್ಸಿನಲ್ಲಿ ಕಾಮಾಸಕ್ತಿ ಹೆಚ್ಚಿಸಿಕೊಂಡ ಟೈಟಾನಿಕ್ ಬ್ಯೂಟಿ! ಥೆರಪಿ ರಹಸ್ಯ ಬಿಚ್ಚಿಟ್ಟ ಕೇಟ್ ವಿನ್ಸ್‌ಲೆಟ್!
ಸೈಕಲ್ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗ್ತಿದ್ದ ಲಾರಿ ಚಾಲಕನನ್ನು ಚೇಸ್ ಮಾಡಿ ಹಿಡಿದ ನಟಿ ನವ್ಯಾ ನಾಯರ್!