

Periods: ಇಂದಿನ ದಿನಗಳಲ್ಲಿ ಮಕ್ಕಳು ಅತೀ ಬೇಗನೆ ಋತುಚಕ್ರವನ್ನು ಪ್ರಾರಂಭಿಸುತ್ತಿದ್ದಾರೆ. ಈ ಹಿಂದೆ 14-15 ವರ್ಷದಿಂದ ಹುಡುಗಿಯರು ಋತುಚಕ್ರವನ್ನು ಪ್ರಾರಂಭಿಸುತ್ತಿದ್ದರು. ಆದರೆ, ಇಂದಿನ ದಿನಗಳಲ್ಲಿ 8-9 ವರ್ಷದ ಹುಡುಗಿಯರೇ ಜಾಸ್ತಿ ಋತುಮತಿ ಹೊಂದುತ್ತಿದ್ದಾರೆ. ಇದು ಪಾಲಕರಲ್ಲಿ ಹಲವಾರು ರೀತಿಯಲ್ಲಿ ಗೊಂದಲ ಸೃಷ್ಟಿಮಾಡಿದ್ದು, ತಮ್ಮ ಮಕ್ಕಳಿಗೆ ಭವಿಷ್ಯದಲ್ಲಿ ತೊಂದರೆ ಆಗುತ್ತದೆಯೇ ಎಂದು ಯೋಚಿಸುತ್ತಿದ್ದಾರೆ. ಇನ್ನು ಈ ವಿಚಾರದ ಬಗ್ಗೆ ಕೆಲವೊಂದು ವೈದ್ಯಕೀಯ ತಪಾಸಣೆಗಳು ಏನು ಹೇಳಿವೆ ನೋಡೋಣ ಬನ್ನಿ...
ಮೊದಲನೆದಾಗಿ, ಹುಡುಗಿಯರು ಬೇಗನೆ ಋತುಚಕ್ರವನ್ನು ಅನುಭವಿಸಲು ಅವರ ದೇಹದಲ್ಲಿರುವ ಬೊಜ್ಜೇ ಕಾರಣ ಎಂದು ತಿಳಿದುಬಂದಿದೆ. ಇನ್ನು ದೇಹದಲ್ಲಿನ ಹಾರ್ಮೋನುಗಳು ವಿಪರೀತವಾಗಿ ಬದಲಾವಣೆ ಹೊಂದುವುದರಿಂದ ಬೇಗನೆ ಋತುಮತಿ ಆಗುತ್ತಿದ್ದಾರೆ. ಮಕ್ಕಳಲ್ಲಿ ತ್ವರಿತ ತೂಕ ಹೆಚ್ಚಾಗುವುದರಿಂದ ಈ ರೀತಿಯಾಗಿ ಸಮಸ್ಯೆಗಳು ಕಾಣಸಿಗುತ್ತಿವೆ.
ಇಂದಿನ ಮಕ್ಕಳು ಅತಿಯಾಗಿ ರಸ್ತೆ ಬದಿ ಸಿಗುವಂತಹ ಆಹಾರವನ್ನು ಸೇವಿಸುತ್ತಿರುವುದನ್ನು ಗಮನಿಸಬಹದು. ಇದು ಅಧಿಕ ಮಸಾಲೆಯುಕ್ತ ಪದಾರ್ಥಗಳಿರುವಂತಹ ಆಹಾರವನ್ನು ಸೇವಿಸುತ್ತಾರೆ. ಎಥೇಚ್ಚವಾಗಿ, ಪಿಜ್ಜಾ, ಬರ್ಗರ್ ಹಾಗೂ ಕುರುಕಲು ತಿಂಡಿಗಳನ್ನು ಸೇವಿಸುತ್ತಿದ್ದಾರೆ.
ಇಂದಿನ ಮಕ್ಕಳು ನಿದ್ರೆಯಿಂದ ವಂಚಿತರಾಗುತ್ತಿದ್ದಾರೆ, ಶೈಕ್ಷಣಿಕ ಒತ್ತಡಗಳು, ಅಧಿಕ ಮೊಬೈಲ್ ನೋಡುವುದು ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿದ್ದು, ರಾತ್ರಿಹೊತ್ತು ಲೇಟಾಗಿ ಮಲಗುವುದನ್ನು ಮಾಡುತ್ತಾರೆ. ಇದರಿಂದ ಸಾಕಷ್ಟು ನಿದ್ರೆ ಪಡೆಯದೆ ಮಕ್ಕಳಲ್ಲಿ ಹಾರ್ಮೋನ್ಗಳಲ್ಲಿ ವ್ಯತ್ಯಾಸ ಉಂಟಾಗುವುದರಿಂದ ಚಿಕ್ಕ ಮಕ್ಕಳಲ್ಲಿ ಋತುಮತಿಯಾಗಲು ಕಾರಣವಾಗುತ್ತದೆ.
ಇಂದಿನ ಯುಗದಲ್ಲಿ ಮಕ್ಕಳು ಶಾಲೆ, ಪುಸ್ತಕ, ಟಿವಿ ಮೊಬೈಲ್ಗಳ ಬಳಕೆ ಅತಿ ಹೆಚ್ಚಾಗಿ ಮಾಡುತ್ತಿದ್ದು, ಯಾವುದೇ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿಲ್ಲ. ಇದರಿಂದ ಸಾಕಷ್ಟು ದೇಹಕ್ಕೆ ಕೊರತೆಗಳು ಉಂಟಾಗುತ್ತಿವೆ. ಇವುಗಳಿಂದ ದೇಹದಲ್ಲಿನ ಹಾರ್ಮೋನ್ಗಳು ವ್ಯತ್ಯಾಸ ಉಂಟಾಗುತ್ತದೆ.
ಇಂದಿನ ಮಕ್ಕಳು ಶೈಕ್ಷಣಿಕ ವ್ಯವಸ್ಥೆಯಿಂದ ಅಧಿಕವಾಗಿ ಒತ್ತಡಗಳನ್ನು ಅನುಭವಿಸುತ್ತಿದ್ದಾರೆ. ಹಾಗೆಯೇ ಪರೀಕ್ಷೆ , ಶಾಲೆ ಅಲ್ಲಿನ ವ್ಯವಸ್ಥೆರಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವುದರಿಂದ ವಿದ್ಯಾರ್ಥಿಗಳು ಒತ್ತಡ ಅನುಭವಿಸುತ್ತಿದ್ದಾರೆ.
ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸದೇ ಇರುವುದು, ಶೈಕ್ಷಣಿಕ ಒತ್ತಡ ಅನುಭವಿಸುದು, ಹಾಗೇ ನಿದ್ರೆಯ ಕೊರತೆಯನ್ನು ಅನುಭವಿಸುವುದರಿಂದ ಮಕ್ಕಳಲ್ಲಿ ತೂಕ ಹೆಚ್ಚಳವಾಗುತ್ತದೆ. ಈ ಎಲ್ಲಾ ಕಾರಣಗಳಿಂದಲೇ ಚಿಕ್ಕ ವಯಸ್ಸಿನಲ್ಲಿಯೇ ಋತುಚಕ್ರವನ್ನು ಅನುಭವಿಸುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ನಿಮ್ಮ ಮಕ್ಕಳು ಋತುಚಕ್ರವನ್ನು ಅನುಭವಿಸಿದರೆ ಭವಿಷ್ಯದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಭವಿಷ್ಯದಲ್ಲಿ ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ನಂತಹ ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ಆದರಿಂದ ಪಾಲಕರು ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಹಾಗೆಯೇ, ನಿದ್ರಾ ಕೊರತೆ, ಆಹಾರದ ಕೊರತೆ, ದೈಹಿಕ ಚಟುವಟಿಕೆಗಳ ಮೇಲೆ ಕಾರ್ಯ ನಿರ್ವಹಿಸಲು ಸದಾ ಪ್ರೇರೇಪಿಸಬೇಕಾಗಿರುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ