ಯುಕ್ರೇನ್ ಶಾಂತಿ ಮಾತುಕತೆಯನ್ನು ತಡೆಯಲು ಪಾಶ್ಚಿಮಾತ್ಯ ದೇಶಗಳು ಪ್ರಯತ್ನಿಸುತ್ತಿದೆ: ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್| Sergei Lavrov

Sergei Lavrov 24
Published on

Sergei Lavrov: ಪಾಶ್ಚಿಮಾತ್ಯ ದೇಶಗಳು ಯುಕ್ರೇನ್ ಸಂಘರ್ಷವನ್ನು ಕೊನೆಗೊಳಿಸುವ ಶಾಂತಿ ಮಾತುಕತೆಗಳನ್ನು ತಡೆಯಲು ಪ್ರಯತ್ನಿಸುತ್ತಿವೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಭಾನುವಾರ (ಆಗಸ್ಟ್ 24, 2025) ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ರಷ್ಯಾದ ವಿದೇಶಾಂಗ, ಪಾಶ್ಚಿಮಾತ್ಯ ರಾಷ್ಟ್ರಗಳು ಮಾತುಕತೆಗಳನ್ನು ತಡೆಯಲು ಒಂದು ನೆಪವನ್ನು ಹುಡುಕುತ್ತಿದ್ದಾರೆ. ಅಲ್ಲದೆ, ನಮ್ಮ ಅಧ್ಯಕ್ಷರಾದ ಪುಟಿನ್ ಮತ್ತು ಟ್ರಂಪ್ ರೂಪಿಸಿದ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ಯುಕ್ರೇನಿಯನ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ರೊಂದಿಗೆ ಯಾವುದೇ ಬೆಲೆ ತೆತ್ತಾದರೂ ತಕ್ಷಣದ ಸಭೆಗೆ ಒತ್ತಾಯಿಸುತ್ತಾ, ಷರತ್ತುಗಳನ್ನು ವಿಧಿಸುತ್ತಾ, ಹಠಮಾರಿತನದಿಂದ ವರ್ತಿಸುತ್ತಿರುವ ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಸೆರ್ಗೆಯ್ ಲಾವ್ರೊವ್ ಟೀಕಿಸಿದ್ದಾರೆ.

ಯುರೋಪಿಯನ್​ ದೇಶಗಳ ಈ ಪ್ರಯತ್ನಗಳು ವಿಫಲವಾಗುತ್ತವೆ ಎಂದು ನಾವು ಭಾವಿಸುತ್ತೇವೆ ಲಾವ್ರೊವ್ ಹೇಳಿದ್ದಾರೆ. ಅಲ್ಲದೆ, ಕಳೆದ ವಾರ ಲಾವ್ರೊವ್ ಅವರು ಯುಕ್ರೇನ್​ ಝೆಲೆನ್ಸ್ಕಿ ಮತ್ತು ಪುಟಿನ್ ನಡುವೆ ಯಾವುದೇ ಸಭೆ ಯೋಜಿಸಲಾಗಿಲ್ಲ ಎಂದು ತಿಳಿಸಿದ್ದರು.

ಈ ವಾರದ ಆರಂಭದಲ್ಲಿ, ಝೆಲೆನ್ಸ್ಕಿ ಅವರು ರಷ್ಯಾ ಸಭೆ ನಡೆಸುವುದರಿಂದ ಹಿಂದೆ ಸರಿಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಶಾಂತಿ ಮಾತುಕತೆಗೆ ಯಾವುದೇ ಚರ್ಚೆ ಸಾಧ್ಯವಿಲ್ಲ ಎಂದು ರಷ್ಯಾ ಹೇಳಿದೆ. ಅಲ್ಲದೆ, ಯುಕ್ರೇನ್‌ನಲ್ಲಿ ಯುರೋಪಿಯನ್ ಪಡೆಗಳ ಯಾವುದೇ ಉಪಸ್ಥಿತಿಯು ಸ್ವೀಕಾರಾರ್ಹವಲ್ಲ ರಷ್ಯಾ ಹೇಳಿದೆ.

ಯುಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ, ಪುಟಿನ್ ಅವರನ್ನು ಭೇಟಿ ಮಾಡುವ ಇಚ್ಛೆಯನ್ನು ಸೂಚಿಸಿದ್ದರು. ಆದರೆ ಯುಕ್ರೇನ್‌ ಮಿತ್ರರಾಷ್ಟ್ರಗಳು ಭದ್ರತಾ ಖಾತರಿಗಳನ್ನು ಖಚಿತಪಡಿಸಿಕೊಂಡ ನಂತರವೇ ಶಾಂತಿ ಮಾತುಕತೆ ನಡೆಸಬೇಕು ಎಂದು ತಿಳಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net