ಬಾಂಗ್ಲಾದೇಶದ ಮಹಿಳೆ, ಮಗುವನ್ನು ಬಹುದೊಡ್ಡ ಅಪಾಯದಿಂದ ಪಾರು ಮಾಡಿದ ಬಿಎಸ್​ಎಫ್​ ಯೋಧರು...

BSF Rescue
Published on

ಕೋಲ್ಕತ್ತ: ಬಾಂಗ್ಲಾದೇಶದ ಮಹಿಳೆ ಮತ್ತು ಆಕೆಯ ಮಗುವನ್ನು ಗಡಿ ಭದ್ರತಾ ಪಡೆಯ ಯೋಧರು (ಬಿಎಸ್​ಎಫ್​) ದೊಡ್ಡ ಅಪಾಯದಿಂದ ಪಾರು ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಗೋಜದಂಗ ಎಂಬಲ್ಲಿ ಬಾಂಗ್ಲಾದೇಶ ಮಹಿಳೆ ಮತ್ತು ಆಕೆಯ ಮಗು ಮಾನವ ಕಳ್ಳ ಸಾಗಣೆದಾರರ ಕೈಯಲ್ಲಿ ಸಿಲುಕಿ, ಅಪಾಯಕ್ಕೀಡಾಗಿದ್ದರು. ಅವರನ್ನು ರಕ್ಷಿಸಿದ ಬಿಎಸ್​ಎಫ್​ ಸಿಬ್ಬಂದಿ, ಆರೋಪಿಗಳನ್ನು ಹಿಡಿದು ಬಸೀರ್​ಹತ್​ ಪೊಲೀಸರ ವಶಕ್ಕೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net