More

    ಸೋನಿಯಾ ಗಾಂಧಿ ಭೇಟಿ ಸಾಧ್ಯವಾಗಿಲ್ಲ…ನಾನು ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳೋದಿಲ್ಲ: ಸಚಿನ್​ ಪೈಲಟ್​

    ನವದೆಹಲಿ: ರಾಜಸ್ಥಾನ ಸರ್ಕಾರ ಮುಂದೇನಾಗಲಿದೆ? ಸಚಿನ್​ ಪೈಲಟ್​ ರಾಜಿಯಾಗಲಿದ್ದಾರಾ? ಅಶೋಕ್​ ಗೆಹ್ಲೋಟ್​ ಜತೆ ಡಿಸಿಎಂ ಆಗಿ ಮುಂದುವರಿಯಲಿದ್ದಾರಾ? ಹೈಕಮಾಂಡ್​ ಸೂಚನೆಯಂತೆ ನಾಳೆ ಸಿಎಂ ನಿವಾಸದಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರಾ? ಎಂಬಿತ್ಯಾದಿ ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ ಡಿಸಿಎಂ ಸಚಿನ್​ ಪೈಲಟ್​ ಅವರ ಕಚೇರಿಯಿಂದ ಹೇಳಿಕೆಯೊಂದು ಬಿಡುಗಡೆಯಾಗಿದೆ.

    ಜು.13ರಂದು ಅಶೋಕ್​ ಗೆಹ್ಲೋಟ್​ ನಿವಾಸದಲ್ಲಿ ಆಯೋಜಿಸಲಾಗಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿನ್​ ಪೈಲಟ್​ ಅವರು ಪಾಲ್ಗೊಳ್ಳುವುದಿಲ್ಲ ಎಂದು ಡಿಸಿಎಂ ಕಚೇರಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ, ಅಶೋಕ್​ ಗೆಹ್ಲೋಟ್​ ಅವರ ಸರ್ಕಾರ ಇನ್ನೂ ಅಸ್ಥಿರವಾಗಿದೆ. ಬಹುಮತ ಹೊಂದಿಲ್ಲ ಎಂದೂ ಹೇಳಿದೆ. ಇದನ್ನೂ ಓದಿ: ಸಿಎಂ ವಿರುದ್ಧ ಬಂಡಾಯ ಎದ್ದು ದೆಹಲಿಗೆ ತೆರಳಿದ್ದ ಸಚಿನ್​ ಪೈಲಟ್​ಗೆ ಕಾಂಗ್ರೆಸ್​ ‘ಹೈ’ ಶಾಕ್​…!

    ಅಷ್ಟೇ ಅಲ್ಲ, ಸಚಿನ್​ ಪೈಲಟ್​ ಕೂಡ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇದನ್ನೇ ಪುನರುಚ್ಚರಿಸಿದ್ದಾರೆ. ನನ್ನ ಜತೆ ಶಾಸಕರು ಇದ್ದಾರೆ. ನಾಳಿನ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವುದಿಲ್ಲ ಎಂದಿದ್ದಾರೆ.

    ಕಾಂಗ್ರೆಸ್​ ಅಧ್ಯಕ್ಷ ಸೋನಿಯಾ ಗಾಂಧಿಯನ್ನಾಗಲಿ, ರಾಹುಲ್​ ಗಾಂಧಿಯನ್ನಾಗಲಿ ನನಗೆ ಭೇಟಿಯಾಗಲು ಅವಕಾಶ ಸಿಗಲಿಲ್ಲ. ಜೈಪುರಕ್ಕೆ ಹೋಗುವ ಮಾತೇ ಇಲ್ಲ ಎಂದು ಸಚಿನ್​ ಪೈಲಟ್​ ತಿಳಿಸಿದ್ದಾರೆ.

    ಸುಮಾರು 30 ಕಾಂಗ್ರೆಸ್​ ಶಾಸಕರು ಸಚಿನ್​ ಪೈಲಟ್​ ಜತೆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸಚಿನ್​ ಪೈಲಟ್​ ಜತೆ ದೆಹಲಿಗೆ ಹೋಗಿ, ಈಗ ಉಲ್ಟಾ ಹೊಡೆದ ಶಾಸಕರು; ನಾವು ಕಾಂಗ್ರೆಸ್​ ಸೈನಿಕರು ಎಂದರು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts