ಬೆಂಗಳೂರು: ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ದೇಹ ದಪ್ಪ ಮತ್ತು ಸಣ್ಣವಾಗಿದ್ದರೆ ಎರಡು ಯೋಚನೆ ಮಾಡುವ ವಿಷಯವೇ ಆಗಿದೆ. ಆದರೆ ನೀವು ತೂಕ ಇಳಿಸಿಕೊಳ್ಳಲು ಯೋಚನೆ ಮಾಡುತ್ತಿದ್ದರೆ ನಾವು ಇಂದು ನಿಮಗೆ ಕೆಲವು ಸಲಹೆ ನೀಡುತ್ತೇವೆ.
ಮನೆ ಶುಚಿಗೊಳಿಸುವುದರಿಂದ ಹಿಡಿದು ಬಟ್ಟೆ ಒಗೆಯುವುದು, ಅಡುಗೆ ಮಾಡುವುದು ಹೀಗೆ ಹಲವು ಕೆಲಸಗಳನ್ನು ಒಬ್ಬರೇ ಮಾಡುವುದು ಹೇಗೆ ಎಂದು ಮನೆ ಜನಗಳ ಮೇಲೆ ರೇಗಬೇಡಿ. ಇದನ್ನೆಲ್ಲಾ ನೀವೇ ಮಾಡೋದ್ರಿಂದ ಆಗುವ ಲಾಭ ಗೊತ್ತಾದ್ರೆ ದಿನನಿತ್ಯ ಎಲ್ಲಾ ಕೆಲಸವನ್ನ ನೀವೇ ಮಾಡ್ತೀರಿ.. ತಜ್ಞರ ಪ್ರಕಾರ, ನೀವು ಮನೆಯಲ್ಲಿ ಒಂದು ಗಂಟೆ ಮಾಡಿದರೆ, ಅದು ಜಿಮ್‌ನಲ್ಲಿ 20 ನಿಮಿಷಗಳ ತಾಲೀಮುಗೆ ಸಮಾನವಾಗಿರುತ್ತದೆ.
ಇದನ್ನೂ ಓದಿ: ಕೂದಲ ಬಣ್ಣಕ್ಕೆ ದುಬಾರಿ ವಸ್ತುಗಳೇ ಬೇಕಿಲ್ಲ..ಹಿತ್ತಲಲ್ಲಿ ಬೆಳೆಯುವ ಈ ಎಲೆಗಳು ಸಾಕು..ಇಲ್ಲಿದೆ ಶಾಶ್ವತ ಪರಿಹಾರ..!
ಮನೆಗೆಲಸವನ್ನು ಮಾಡುವುದರಿಂದ ಕ್ಯಾಲೊರಿಗಳನ್ನು ದಹಿಸಬಹುದು ಮತ್ತು ಜಿಮ್‌ಗಿಂತ ಉತ್ತಮ ಫಲಿತಾಂಶವನ್ನು ಪಡೆಯಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ.
ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ರೋಗಗಳಿಂದ ದೂರವಿರಬಹುದು….
ಮನೆ ಗುಡಿಸುವುದು, ನೆಲ ಗುಡಿಸುವುದು, ಪಾತ್ರೆ ತೊಳೆಯುವುದು, ಮೆಟ್ಟಿಲುಗಳನ್ನು ತೊಳೆಯುವುದು ಮುಂತಾದ ಕೆಲಸಗಳು ತೂಕ ಇಳಿಸಲು ಸಹಾಯ ಮಾಡುತ್ತದೆ. ಅಂದರೆ ಜಿಮ್‌ಗೆ ಹೋಗದೆ ಮನೆಗೆಲಸ ಮಾಡುವ ಮೂಲಕ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಇದನ್ನೂ ಓದಿ: ಕಾಫಿ ಪುಡಿಯಿಂದ ಫೇಶಿಯಲ್ ಮಾಡಿ..ನಿಮ್ಮ ಮುಖ ಸುಂದರವಾಗಿ ಹೊಳೆಯುತ್ತದೆ..
ಮನೆಯನ್ನು ಸ್ವಚ್ಛಗೊಳಿಸುವುದನ್ನು ವ್ಯಾಕ್ಯೂಮ್ ಕ್ಲೀನರ್ ಅಥವಾ ಮಾಪ್ ಮೂಲಕ ಮಾಡಬಹುದು. ಇದರರ್ಥ ಸ್ವಲ್ಪ ಅಪಾಯವನ್ನು ತೆಗೆದುಕೊಂಡು ನಿಮ್ಮ ಮೊಣಕಾಲುಗಳ ಮೇಲೆ ಕುಳಿತುಕೊಂಡು ಬಾಗಿ ದೈಹಿಕ ಶ್ರಮವನ್ನು ಮಾಡಿ. ಈ ರೀತಿ ಮಾಡುವುದರಿಂದ ಹೊಟ್ಟೆಯ ಕೆಳಭಾಗದಲ್ಲಿ ಒತ್ತಡ ಹೆಚ್ಚುತ್ತದೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಮನೆಗೆಲಸವನ್ನು ಮಾಡುವುದರಿಂದ ಮೈ, ಕೈ ನೋವು ಇದ್ದರೆ ನಿವಾರಣೆಯಾಗುತ್ತದೆ.
ಈ ಟಿಪ್ಸ್ ಪಾಲಿಸಿದರೆ ನಿಮ್ಮ ಶೂಗಳು ಹೊಸದರಂತೆ ಹೊಳೆಯುತ್ತವೆ.. ಚಿಟಿಕೆಯಲ್ಲಿ ಕೊಳೆ ಮಾಯ