ಕಾಫಿ ಪುಡಿಯಿಂದ ಫೇಶಿಯಲ್ ಮಾಡಿ..ನಿಮ್ಮ ಮುಖ ಸುಂದರವಾಗಿ ಹೊಳೆಯುತ್ತದೆ..

coffee powder
Published on

ಬೆಂಗಳೂರು: ಚರ್ಮವನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿಡುವುದು ಬಹಳ ಮುಖ್ಯವಾಗಿದೆ. ಅನೇಕ ಜನರು ತಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಸುಂದರವಾಗಿ ಕಾಣಲು ಫೇಶಿಯಲ್ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ತ್ವಚೆಯ ರಂಧ್ರಗಳು ಶುಚಿಯಾಗುವುದಲ್ಲದೆ ತ್ವಚೆಯು ಸುಂದರವಾಗಿ ಮತ್ತು ಆರೋಗ್ಯಕರವಾಗಿ ಕಾಣುತ್ತದೆ. ಸಾಮಾನ್ಯವಾಗಿ ಟೀ, ಕಾಫಿ ಕುಡಿಯೋ ಅಭ್ಯಾಸ ಎಲ್ಲರಿಗೂ ಇರುತ್ತದೆ. ಹಾಗಾಗಿ ಮನೆಯಲ್ಲಿ ಈ ಪುಡಿಗಳು ಇದ್ದೇ ಇರುತ್ತವೆ. ಕಾಫಿ ಫೇಶಿಯಲ್ ಮಾಡಿಕೊಳ್ಳಬಹುದಾಗಿದೆ. ಸಿಂಪಲ್ ಟಿಪ್ಸ್ ನೊಂದಿಗೆ ಮನೆಯಲ್ಲೇ ಫೇಶಿಯಲ್ ಮಾಡಿಕೊಳ್ಳಲು ಈ ಸರಳ ಸಲಹೆಗಳನ್ನು ಅನುಸರಿಸಿ...

1) ಕಾಫಿ ಪೌಡರ್​​-ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಿ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಚರ್ಮವು ಸುಂದರವಾಗಿ ಹೊಳೆಯುತ್ತದೆ. ಎಣ್ಣೆಯುಕ್ತ ಮುಖಕ್ಕೆ ಈ ಪ್ಯಾಕ್ ಅನ್ನು ಅನ್ವಯಿಸಿ. ಈ ಪ್ಯಾಕ್ ನಿಮಗೆ 10 ನಿಮಿಷಗಳಲ್ಲಿ ಉತ್ತಮ ಹೊಳಪನ್ನು ನೀಡುತ್ತದೆ. ಇದನ್ನು ತಿಂಗಳಿಗೆ ಎರಡು ದಿನ ಬಳಸಿದರೆ ಮುಖದಲ್ಲಿರುವ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.

2) ತೆಂಗಿನ ಎಣ್ಣೆಯಲ್ಲಿ ಸ್ವಲ್ಪ ನೀರು ಬೆರೆಸಿ ಮುಖಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ. ಈಗ 1 ನಿಮಿಷ ಮಸಾಜ್ ಮಾಡಿ. ನಂತರ ಕಾಫಿ ಪೌಡರ್​​, ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮಸಾಜ್​ ಮಾಡಿ.

3) ಫೇಸ್ ಪ್ಯಾಕ್ ಅನ್ನು ಹಗಲಿನಲ್ಲಿ ಅನ್ವಯಿಸುವುದಕ್ಕಿಂತ ರಾತ್ರಿಯಲ್ಲಿ ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಮುಖದಲ್ಲಿರುವ ಟ್ಯಾನ್ ಮತ್ತು ಕೊಳೆ ನಿವಾರಣೆಯಾಗಿ ಮುಖ ಹೊಳೆಯುತ್ತದೆ.

4) ಕಾಫಿ ಪುಡಿಗೆ 1 ಚಮಚ ಅಲೋವೆರಾ ಜೆಲ್ ಹಾಕಿಕೊಳ್ಳಬೇಕು. ಇವೆರನ್ನು ಸಣ್ಣಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ವೃತ್ತಾಕಾರದಲ್ಲಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಬೇಕು. 10 ನಿಮಿಷದ ಬಳಿಕ ತಣ್ಣೀರಲ್ಲಿ ಮುಖ ತೊಳೆದುಕೊಳ್ಳಬೇಕು. ಈ ರೀತಿ ಕಾಫಿ ಪುಡಿಯನ್ನು ಫೇಸ್ ಮಾಸ್ಕ್, ಸ್ಕ್ರಬ್‍ ನಲ್ಲಿ ಬಳಸುವ ಮೂಲಕ ಮನೆಯಲ್ಲೇ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net