ಕಾನೂನು ಕೊಟ್ಟ ಉಡುಗೊರೆ ... 'ವೆಡ್ಡಿಂಗ್​ ಗಿಫ್ಟ್​' ಚಿತ್ರದ ಹಾಡುಗಳ ಬಿಡುಗಡೆ

Wedding Gift (2)
Published on

ಬೆಂಗಳೂರು: ನವೆಂಬರ್​ನಲ್ಲಿ ಶುರುವಾಗಿ, ಡಿಸೆಂಬರ್​ನಲ್ಲಿ ಮುಕ್ತಾಯವಾದ ಪ್ರೇಮಾ ಅಭಿನಯದ 'ವೆಡ್ಡಿಂಗ್​ ಗಿಫ್ಟ್​' ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಜೂನ್​ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕ-ನಿರ್ದೇಶಕ ವಿಕ್ರಂ ಪ್ರಭು ಅವರದ್ದು. ಅದಕ್ಕೂ ಮುನ್ನ, ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಯಿತು.

ಕೆಲವು ಹೆಣ್ಣುಮಕ್ಕಳು ಹೇಗೆ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದಾರಂತೆ ನಿರ್ದೇಶಕ ವಿಕ್ರಂ ಪ್ರಭು. "ಹಿಂದಿಯ "ಸೆಕ್ಷನ್​ 375' ಈ ಚಿತ್ರಕ್ಕೆ ಸ್ಫೂರ್ತಿ. ಹೇಗೆ ಕೆಲವು ಕಾನೂನುಗಳನ್ನು ತಮಗೆ ಬೇಕಾದ ರೀತಿ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳುವುದಕ್ಕೆ ಹೊರಟಿದ್ದೇವೆ. ಕಾನೂನಿನಲ್ಲಿರುವ ಲೂಪ್​ಹೋಲ್​ಗಳನ್ನು ಇಟ್ಟಿಕೊಂಡು ಗಂಡಂದಿರನ್ನು ಹೇಗೆ ಟ್ರಾಪ್​ ಮಾಡಲಾಗುತ್ತದೆ ಎಂಬುದನ್ನು ಇಲ್ಲಿ ಹೇಳ ಹೊರಟಿದ್ದೇವೆ. ಇದು ಮಹಿಳೆಯರಿಗೆ ನಮ್ಮ ಕಾನೂನು ಕೊಟ್ಟಿರುವ ಒಂದು ಗಿಫ್ಟ್​. ಅದೇ ಕಾರಣಕ್ಕೆ ಚಿತ್ರಕ್ಕೆ 'ವೆಡ್ಡಿಂಗ್​ ಗಿಫ್ಟ್​' ಎಂದು ಹೆಸರಿಟ್ಟಿದ್ದೇವೆ' ಎಂದು ವ್ಯಾಖ್ಯಾನಿಸಿದರು ಅವರು.

'ವೆಡ್ಡಿಂಗ್​ ಗಿಫ್ಟ್​' ಹಾಡುಗಳನ್ನ ಬಿಡುಗಡೆ ಮಾಡಿ ಮಾತನಾಡಿದ ಪ್ರೇಮಾ, "ನಾನು ದುಡ್ಡಿಗಾಗಿ ಸಿನಿಮಾ ಮಾಡುವವಳಲ್ಲ. ಕಥೆ ಇಷ್ಟವಾದರೆ ಮಾತ್ರ ಒಂದು ಚಿತ್ರ ಒಪ್ಪುತ್ತೇನೆ. ವಿಕ್ರಂ ಪ್ರಭು ಹೇಳಿದ ಕಥೆ ಇಷ್ಟವಾಗಿ, ತಕ್ಷಣ ಒಪ್ಪಿಕೊಂಡೆ. ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ' ಎನ್ನುತ್ತಾರೆ.

ಛಾಯಾಗ್ರಾಹಕ ಉದಯ್​ ಲೀಲಾ, ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು, ಬಾ.ಮಾ. ಹರೀಶ್​ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net