ಕೇರಳ: ಎರಡು ವರ್ಷಗಳ ಹಿಂದೆ ಫಿಕ್ಸ್ ಆಗಿದ್ದ ಮದುವೆ ಕೆಲಸಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಕುಟುಂಬವೊಂದು, ಅಂತಿಮ ಸಿದ್ಧತೆಯಾದ ಮದುವೆ ಆಮಂತ್ರಣ ಪತ್ರಿಕೆ ಹಂಚಿಕೆಯಲ್ಲಿ ತೊಡಗಿತ್ತು. ಇನ್ನೇನು ವಿವಾಹದ ಶುಭ ಘಳಿಗೆಗೆ ಸಾಕ್ಷಿಯಾಗಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದ್ದು ಸದ್ಯ ಕುಟುಂಬಸ್ಥರಲ್ಲಿ ಭಾರೀ ಆಘಾತವನ್ನು (Sad Demise) ತಂದೊಡ್ಡಿದೆ.
ಇದನ್ನೂ ಓದಿ: ನಕ್ಸಲರ ಶರಣಾಗತಿಯಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆ: ಸಚಿವ ಎಂ.ಬಿ. ಪಾಟೀಲ | MB Patil
ಒಬ್ಬನೇ ಮಗ
ಕೇರಳದ ಉಲಿಕ್ಕಲ್ ಮೂಲದ ಕುಟುಂಬವೊಂದು ಈ ದುರಂತ ಸುದ್ದಿಯಿಂದ ಅಕ್ಷರಶಃ ಕಂಗಾಲಾಗಿದ್ದು, ತಮ್ಮವರನ್ನು ಕಳೆದುಕೊಂಡು ಕಣ್ಣೀರಿಟ್ಟಿದೆ. ಇದ್ದ ಒಬ್ಬೇ ಒಬ್ಬ ಮಗ ಆಲ್ಬಿನ್ ವಿವಾಹಕ್ಕೆ ಸಂಬಂಧಿಕರಿಗೆ ಆಮಂತ್ರಣ ಪತ್ರಿಕೆ ಹಂಚಲು ಮನೆಯವರೊಂದಿಗೆ ಕಾರಿನಲ್ಲಿ ತೆರಳಿದ್ದ ಆಲ್ಬಿನ್ ತಾಯಿ ಬೀನಾ ಮತ್ತು ಅವರ ಪತಿ ಥಾಮಸ್ರ ಸೋದರಳಿಯ ಲಿಜೋಬಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
11ರಂದು ನಿಶ್ಚಿತಾರ್ಥ, 18ರಂದು ಮದುವೆ
ಅಪಘಾತದಲ್ಲಿ ಸಾವನ್ನಪ್ಪಿದ ಬೀನಾಳ ಪುತ್ರ ಆಲ್ಬಿನ್, ಮದುವೆ ಎರಡು ವರ್ಷಗಳ ಹಿಂದೆಯೇ ನಿಶ್ಚಯವಾಗಿತ್ತು. ಪೋಲೆಂಡ್‌ನಲ್ಲಿ ಕೆಲಸ ಮಾಡುತ್ತಿರುವ ಆಲ್ವಿನ್, ಮದುವೆಗೆ ಸಿದ್ಧತೆ ನಡೆಸಲು ಕ್ರಿಸ್‌ಮಸ್ ಹಬ್ಬದಂದು ಭಾರತಕ್ಕೆ ಹಿಂತಿರುಗಿದ್ದರು. 11ರಂದು ನಿಶ್ಚಿತಾರ್ಥ ಮುಗಿಸಿ, 18ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದರು. ಆದರೆ, ವಿಧಿಯ ಲೆಕ್ಕಾಚಾರವೇ ಬೇರೆ ಇತ್ತು ಎಂಬುದು ಇದೀಗ ಅವರ ತಾಯಿ ಮತ್ತು ಸಹೋದರನ ಸಾವಿನಿಂದ ತಿಳಿದುಬಂದಿದೆ. ಸಂಬಂಧಿಕರಿಗೆ ಪತ್ರಿಕೆ ಕೊಟ್ಟು ಮದುವೆಯ ಬಟ್ಟೆಗಳನ್ನು ಖರೀದಿಸಲು ಕುಟುಂಬವು ಎರ್ನಾಕುಲಂಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ ಎದು ವರದಿಯಾಗಿದೆ.
ದುರಂತದಲ್ಲಿ ಸಾವಿಗೀಡಾದ ಆಲ್ಬಿನ್ ತಾಯಿ ಬೀನಾ ಮತ್ತು ಲಿಜೋಬಿಗೆ ದುಃಖಿಸಿದ ಸ್ಥಳೀಯರು, ಶುಭ ಸಂದರ್ಭ ನಡೆಯಬೇಕಿದ್ದ ಮನೆ ಈಗ ಸೂತಕದ ಮನೆಯಾಯಿತು ಎಂದು ಕಣ್ಣೀರಿಟ್ಟಿದ್ದಾರೆ. ರಸ್ತೆ ಅಪಘಾತದಲ್ಲಿ ಬೀನಾ ಪುತ್ರ ಆಲ್ಬಿನ್ ಮತ್ತು ಅವರ ತಂದೆ ಥಾಮಸ್ ಇಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ,(ಏಜೆನ್ಸೀಸ್).