More

    ಲೆಗ್ಗಿಂಗ್ಸ್, ಟೈಟ್ ಜೀನ್ಸ್ ಧರಿಸುತ್ತಿದ್ದೀರಾ? ಹಾಗಿದ್ರೆ ಸೈಡ್ ಎಫೆಕ್ಟ್ಸ್ ಬಗ್ಗೆ ತಿಳಿದುಕೊಳ್ಳಿ…

    ಬೆಂಗಳೂರು: ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆದರೆ ಇಂದು ಜನರು ಆರೋಗ್ಯಕ್ಕಿಂತ ಹೆಚ್ಚಾಗಿ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಲೆಗ್ಗಿಂಗ್ಸ್, ಟೈಟ್ ಜೀನ್ಸ್ ಧರಿಸುವುದು ಇಂದಿನ ಫ್ಯಾಶನ್​. ಆದರೆ ಹೀಗೆ ಮೈಗೆ ಬಿಗಿಯಾದ ಬಟ್ಟೆ ಧರಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆಂದು ಹೇಳುತ್ತಾರೆ.

    ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ರೋಗಗಳಿಂದ ದೂರವಿರಬಹುದು….

    ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಯಾವುದೇ ಕೆಲಸ ಮಾಡಲು ಕಷ್ಟವಾಗುತ್ತದೆ. ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಇದು ಸ್ನಾಯು ಸೆಳೆತದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.

    ಇದನ್ನೂ ಓದಿ: ಕೂದಲ ಬಣ್ಣಕ್ಕೆ ದುಬಾರಿ ವಸ್ತುಗಳೇ ಬೇಕಿಲ್ಲ..ಹಿತ್ತಲಲ್ಲಿ ಬೆಳೆಯುವ ಈ ಎಲೆಗಳು ಸಾಕು..ಇಲ್ಲಿದೆ ಶಾಶ್ವತ ಪರಿಹಾರ..!

    ಹೊಟ್ಟೆಯ ಮೇಲೆ ಅವುಗಳನ್ನು ಬಿಗಿಯಾಗಿ ಒತ್ತುವುದರಿಂದ ಹೊಟ್ಟೆಯ ಕೆಳಭಾಗದಲ್ಲಿ ನೋವು ಉಂಟಾಗುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.

    ಇದನ್ನೂ ಓದಿ: ಕಾಫಿ ಪುಡಿಯಿಂದ ಫೇಶಿಯಲ್ ಮಾಡಿ..ನಿಮ್ಮ ಮುಖ ಸುಂದರವಾಗಿ ಹೊಳೆಯುತ್ತದೆ..

    ಲೆಗ್ಗಿಂಗ್ಸ್, ಟೈಟ್ ಜೀನ್ಸ್ ಬಟ್ಟೆ ಧರಿಸುವುದರಿಂದ ಮೈ ಬೆವರುವುದರಿಂದ ಅಲರ್ಜಿ, ಸೆಳೆತ ನೋವಿನಂತಹ ಸಮಸ್ಯೆಗಳನ್ನು ಉಂಟುಮಾಡುತ್ತವೆ.
    ನೀವು ಅಂತಹ ಬಿಗಿಯಾದ ಬಟ್ಟೆಗಳನ್ನು ಧರಿಸಿದರೆ, ಚರ್ಮದ ಮೇಲೆ ಕಲೆಗಳು, ಕೆಂಪು ಕಲೆಗಳು ಮತ್ತು ಕಿರಿಕಿರಿಯು ಕಾಣಿಸಿಕೊಳ್ಳುತ್ತದೆ.

    ಇದನ್ನೂ ಓದಿ: ಈ ಟಿಪ್ಸ್ ಪಾಲಿಸಿದರೆ ನಿಮ್ಮ ಶೂಗಳು ಹೊಸದರಂತೆ ಹೊಳೆಯುತ್ತವೆ.. ಚಿಟಿಕೆಯಲ್ಲಿ ಕೊಳೆ ಮಾಯ
    ಬಿಗಿಯಾದ ಬಟ್ಟೆ ಧರಿಸುವುದರಿಂದ ಸ್ನಾಯುಗಳ ಮೇಲೆ ಒತ್ತಡ ಉಂಟಾಗುತ್ತದೆ. ಚರ್ಮಕ್ಕೆ ಉಸಿರಾಡಲು ಕಷ್ಟವಾಗುತ್ತದೆ. ಇಂತಹ ಕಾಯಿಲೆಗಳ ಹಿಡಿತದಿಂದ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಸಡಿಲವಾದ ಬಟ್ಟೆಗಳನ್ನು ಧರಿಸುವುದು ಉತ್ತಮ.

    ಪ್ರತಿನಿತ್ಯ ಸ್ನಾನ ಮಾಡುವುದರಿಂದ ಆಗುವ ಲಾಭಗಳೇನು ಗೊತ್ತಾ?

    ರಾಜ್ಯೋತ್ಸವ ರಸಪ್ರಶ್ನೆ - 22

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts