

Ind-Pak: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತೀವ್ರವಾಗುತ್ತಿದ್ದು, ಭದ್ರತಾ ಪಡೆಯ ಸಂಸ್ಥೆಗಳು ಜಾಗ್ರತೆ ಬಗ್ಗೆ ಗಡಿ ಭಾಗದ ಹಳ್ಳಿ ಮತ್ತು ಗ್ರಾಮದ ಜನರಿಗೆ ಎಚ್ಚರಿಸುತ್ತಿದ್ದಾರೆ. ಆದರೆ, ಇದವೂದಕ್ಕೂ ಹೆದರದ ಹಳ್ಳಿಗರು ದೇಶಭಕ್ತಿ ಮತ್ತು ಧೈರ್ಯದ ಉದಾರಣೆಗಳು ಹೊರಹೊಮ್ಮತ್ತಿವೆ.
ಹೌದು, ಫಿರೋಜ್ಪುರ, ಗುರುದಾಸ್ಪುರ, ಉರಿ ಮತ್ತು ಜಮ್ಮುವಿನ ಗಡಿ ಗ್ರಾಮಗಳಲ್ಲಿ ಜನರು ದೃಢವಾಗಿ ನಿಂತಿದ್ದಾರೆ. ತಮ್ಮ ಜೀವಕ್ಕೆ ಅಪಾಯವಿದ್ದರೂ ಸಹ, ಅವರು ದೇಶದೊಂದಿಗೆ ನಿಲ್ಲುತ್ತಾರೆ ಎಂದು ಹೇಳುವ ಮೂಲಕ ತಮ್ಮ ಉತ್ಸಾಹವನ್ನು ತೋರಿಸುತ್ತಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಪಂಜಾಬ್ ಕಾಶ್ಮೀರ, ಜಮ್ಮು ಹಾಗೂ ರಾಜಸ್ತಾನದ ಭಾರತ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಯುದ್ಧದ ಕಾರ್ಮೋಡ ಅವರಿಸುತ್ತಿದ್ದು, ಇದಾಗಲೇ ಗುಂಡು, ಶೆಲ್ ಹಾಗೂ ಡ್ರೋಣ್ಗಳ ದಾಳಿಯನ್ನು ಪಾಕ್ ಸೇನೆ ಮಾಡುತ್ತಿದೆ. ಇತ್ತ ಭಾರತೀಯ ಸೇನಾಪಡೆ ಪಾಕ್ಗೆ ತಕ್ಕಪಾಠ ಕಲಿಸುತ್ತಿದೆ. ಈ ಹಿನ್ನಲೆ ಗಡಿ ಭಾಗದ ಜನರಿಗೆ ಊರು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸುತ್ತಿದ್ದಾರೆ. ಆದರೆ, ಗ್ರಾಮಸ್ಥರು ಮಾತ್ರ ಇದಕ್ಕೆ ಊ ಎನ್ನುತ್ತಿಲ್ಲ. ನಮ್ಮ ಊರುಗಳು ನಾವು ಬಿಡುವುದಿಲ್ಲ. ಅಗತ್ಯಬಿದ್ದರೆ ಸೈನ್ಯದ ಬೆಂಬಲಕ್ಕೆ ನಿಲ್ಲುತ್ತೇವೆ ಎನ್ನುತ್ತಿದ್ದಾರೆ ಎಂದು ವರದಿಯಾಗಿದೆ. ಇದು ಕೇವಲ ಒಂದು ಅಥವಾ ಎರಡು ಊರು ಕಥೆಗಳಲ್ಲ ಜಮ್ಮು-ಕಾಶ್ಮೀರದಿಂದ ರಾಜಸ್ಥಾನದ ಗಡಿಯವರೆಗೂ ಎಲ್ಲ ಹಳ್ಳಿಗಳ ಜನರು ಇದನ್ನೇ ಹೇಳುತ್ತಿದ್ದಾರೆ.
1965 ಮತ್ತು 1971 ರ ಯುದ್ಧಗಳಲ್ಲಿಯೂ ಸಹ ನಾವು ಎಲ್ಲಿಗೂ ಹೋಗಲಿಲ್ಲ ಎಂದು ಅವರು ಹೇಳಿದರು. ಈ ಬಾರಿಯೂ ನಾನು ಹೋಗುವುದಿಲ್ಲ. ನಮ್ಮ ಸೈನಿಕರು ಪಾಕಿಸ್ತಾನಕ್ಕೆ ಪ್ರತಿಕ್ರಿಯಿಸಿದ ರೀತಿಗೆ ನಾವು ಬೆಂಬಲ ನೀಡುತ್ತೇವೆ. ನಾವು ನಮ್ಮ ದೇಶಕ್ಕೆ ಪ್ರಾಣವನ್ನು ಬೇಕಾದರೂ ಕೊಡುತ್ತೇವೆ ಎಂದು ಫಿರೋಜ್ಪುರ ಗಡಿಯಲ್ಲಿರುವ ಮಹ್ವಾ ಗ್ರಾಮದ ಹಿರಿಯೊಬ್ಬರು ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಮಾತನಾಡಿದ್ದಾರೆ.
ಗ್ರಾಮದ ಮುಖ್ಯಸ್ಥೆ ನಿರ್ಮಲಾ ದೇವಿ ಈಗಾಗಲೇ ಗ್ರಾಮಸ್ಥರಿಗೆ ಮನೆಯಲ್ಲಿ ಪಡಿತರ ಮತ್ತು ನೀರನ್ನು ಸಂಗ್ರಹಿಸಿಡಲು ಮತ್ತು ಕಠಿಣ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಮಕ್ಕಳಿಗೆ ಕಲಿಸಲು ಹೇಳಿದ್ದಾರೆ. ಯುದ್ಧ ನಡೆದರೆ ಹಳ್ಳಿ ಬಿಟ್ಟು ಹೋಗುವುದಿಲ್ಲ. ಪಾಕಿಸ್ತಾನಕ್ಕೆ ಪಾಠ ಕಲಿಸುವುದು ಅಗತ್ಯ ಎಂದಿದ್ದಾರೆ.(ಏಜೆನ್ಸೀಸ್)