ಜಮ್ಮುವಿನ ಶಂಭು ದೇವಸ್ಥಾನದ ಮೇಲೆ ಪಾಕ್​ ಡ್ರೋನ್‌ ದಾಳಿ; ಕ್ಷಿಪಣಿಯ ತುಣುಕುಗಳು ವಶಕ್ಕೆ| Drone attack

drone
Published on

ನಾಗರಿಕರು ಮತ್ತು ಧಾರ್ಮಿಕ ಸ್ಥಳಗಳಿಗೆ ಅಪಾಯವನ್ನುಂಟುಮಾಡುವ ಹಲವಾರು ಸಶಸ್ತ್ರ ಡ್ರೋನ್‌ಗಳನ್ನು ರಾತ್ರಿಯಿಡೀ ಕಳುಹಿಸಲಾಗಿದೆ ಎಂದು ಸಚಿವಾಲಯ ತಿಳಿಸಿದ್ದು, ಭಾರತೀಯ ಸಶಸ್ತ್ರ ಪಡೆಗಳು ಜಾಗರೂಕವಾಗಿವೆ ಮತ್ತು ರಾಷ್ಟ್ರದ ಸಾರ್ವಭೌಮತ್ವವನ್ನು ರಕ್ಷಿಸಲು ಬದ್ಧವಾಗಿವೆ ಎಂದು ಹೇಳಿದೆ.

Jammu: ಶನಿವಾರ (10) ಪಾಕಿಸ್ತಾನದ ಡ್ರೋನ್‌ಗಳು ಜಮ್ಮುವಿನ ಪ್ರಸಿದ್ಧ ಶಂಭು ದೇವಸ್ಥಾನ ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಯುದ್ಧವನ್ನು ಮುಂದುವರೆಸಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಜಮ್ಮು ಪೊಲೀಸರು ಮತ್ತು ಇತರ ಸಂಸ್ಥೆಗಳು ಕ್ಷಿಪಣಿಯ ತುಣುಕುಗಳನ್ನು ವಶಪಡಿಸಿಕೊಳ್ಳುವ ಕೆಲಸದಲ್ಲಿ ತೊಡಗಿದ್ದಾರೆ.

ಸ್ಥಳೀಯರು ಹೇಳಿದ್ದೇನು?

ಇದು ಶಂಭು ದೇವಸ್ಥಾನದ ಮುಖ್ಯ ದ್ವಾರವಾಗಿದ್ದು, ಜನರು ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬರುತ್ತಾರೆ, ಆದರೆ ಸೈರನ್ ಮೊಳಗಿದ್ದರಿಂದ ಕಡಿಮೆ ಜನ ಇದ್ದರು. ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನಮ್ಮ ಸೇನೆ ನೀಡಲಿದೆ ಎಂದು ಸ್ಥಳೀಯರು ಹೇಳಿದ್ದಾರೆ

ಪೊಲೀಸರು ಮತ್ತು ಇತರ ಸಂಸ್ಥೆಗಳು ಪ್ರದೇಶವನ್ನು ಸುತ್ತುವರಿದಿದ್ದಾರೆ. SDRF ಸಿಬ್ಬಂದಿ ರಶ್ಪಾಲ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ನಮ್ಮ ತಂಡ ಇಲ್ಲಿದೆ, ಯಾವುದೇ ಸಾವುನೋವುಗಳಿಲ್ಲ, ಕ್ಷಿಪಣಿಯ ಭಾಗಗಳು ತೆರೆದ ಪ್ರದೇಶದಲ್ಲಿ ಬಿದ್ದಿವೆ ಎಂದಿದ್ದಾರೆ.

(ಏಜೆನ್ಸೀಸ್)

ಶುಕ್ರವಾರ ಶಾಲೆಗಳು ಮತ್ತು ಪ್ರಾರ್ಥನಾ ಸ್ಥಳಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದಕ್ಕಾಗಿ ವಿದೇಶಾಂಗ ಸಚಿವಾಲಯ ಪಾಕಿಸ್ತಾನವನ್ನು ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ನಿಯಂತ್ರಣ ರೇಖೆಯ ಉದ್ದಕ್ಕೂ ಗುರುದ್ವಾರಗಳು, ಚರ್ಚುಗಳು ಮತ್ತು ದೇವಾಲಯಗಳನ್ನು ಉದ್ದೇಶಪೂರ್ವಕವಾಗಿ ಶೆಲ್ ದಾಳಿ ನಡೆಸಿದ್ದಕ್ಕಾಗಿ ಪಾಕಿಸ್ತಾನವನ್ನು ಟೀಕಿಸಿದ್ದಾರೆ, ಈ ದಾಳಿಗಳ ಮೂಲಕ ಪಾಕಿಸ್ತಾನ ಹಾಗೂ ಅಲ್ಲಿನ ಸೇನೆ ತೀರಾ ಕೆಳಮಟ್ಟಕ್ಕೆ ಇಳಿದಿದೆ ಎಂದು ಅವರು ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net