

Yash dialogue | ಭಾರತದ ಮೇಲೆ ಪಾಕಿಸ್ತಾನ ಅನೇಕ ಬಾರಿ ದಾಳಿ ಮಾಡಿದೆ. ಈ ರೀತಿ ದಾಳಿ ಮಾಡಿದಾಗಲೆಲ್ಲ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಆದರೆ ಈ ಬಾರಿ ಭಾರತ ಪಾಕಿಸ್ತಾನಕ್ಕೆ ಖಡತ್ ಉತ್ತರ ಕೊಟ್ಟಿದ್ದು, ಭಾರತವನ್ನು ಕೆಣಕಿರುವ ಪಾಕಿಸ್ತಾನ ಬಹಳ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದೆ. ಇನ್ನೂ ಈ ಬಗ್ಗೆ ಯಶ್ ಹೇಳಿದ್ದ ಒಂದು ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗ್ತಾ ಇದೆ.
ಈ ಹಿಂದೆ ಯಶ್ ವೇದಿಕೆಯೊಂದರಲ್ಲಿ ನಿಂತು ಕೆಜಿಎಫ್ ಡೈಲಾಗ್ ಹೊಡೆದಿದ್ದರು. ಅದು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಾ ಇದೆ. ಉಗ್ರರರ ದಾಳಿ ಆದಾಗ ನಾವು ಹೇಳಬಹುದಾದ ಡೈಲಾಗ್ ಇದು. ಸರಿಯಾಗಿ ಮ್ಯಾಚ್ ಆಗುತ್ತದೆ ಅಂದುಕೊಳ್ಳುತ್ತೇನೆ. ಒಂದು ಹೊಡೆದಾಟದಲ್ಲಿ ಯಾರು ಮೊದಲು ಹೊಡೆದ್ರು ಅನ್ನೋದು ಲೆಕ್ಕಕ್ಕೆ ಬರಲ್ಲ. ಯಾರು ಮೊದಲು ಬಿದ್ದರು ಅನ್ನೋದೇ ಲೆಕ್ಕಕ್ಕೆ ಬರೋದು ಎಂದಿದ್ದರು ಯಶ್.
ಇದು ‘ಕೆಜಿಎಫ್’ ಸಿನಿಮಾದ ಡೈಲಾಗ್ ಆಗಿದ್ದು, ಈಗಿನ ಪರಿಸ್ಥಿತಿಗೆ ಈ ಡೈಲಾಗ್ ಸರಿಯಾಗಿ ಮ್ಯಾಚ್ ಆಗ್ತಿದೆ. ಮೊದಲು ಹೊಡೆದಿದ್ದು ಪಾಕಿಸ್ತಾನವೇ ಆದರೂ, ಅದಕ್ಕೆ ಭಾರತ ಪ್ರತ್ಯುತ್ತರ ಕೊಡುತ್ತಿರುವುದರಿಂದ ಪಾಕಿಸ್ತಾನ ತತ್ತರಿಸಿ ಹೋಗಿದೆ. ಏನು ಮಾಡಬೇಕು ಎಂಬುದೇ ಅವರಿಗೆ ತಿಳಿಯದಂತೆ ಆಗಿದೆ.