ಗಡಿ ಭಾಗಕ್ಕೆ ಪಾಕ್ ಸೇನೆ ಸ್ಥಳಾಂತರ; ಭಾರತೀಯ ಪಡೆಗಳು ಸಜ್ಜಾಗಿವೆ ಎಂದ ಸರ್ಕಾರ|Terror attack

indian army
Published on

Terror attack| 1999 ರ ಕಾರ್ಗಿಲ್ ಯುದ್ಧದ ನಂತರ ಪಾಕಿಸ್ತಾನ ತನ್ನ ಸೈನ್ಯವನ್ನು ಗಡಿಯುದ್ದಕ್ಕೂ ಸ್ಥಳಾಂತರಿಸುತ್ತಿದೆ ಎಂದು ಹೇಳಲಾಗಿದೆ. ಆದರೆ ಭಾರತೀಯ ಪಡೆಗಳು ಸಿದ್ಧವಾಗಿವೆ ಮತ್ತು ಜಾಗರೂಕವಾಗಿವೆ ಆರು ಪಾಕಿಸ್ತಾನಿ ವಾಯುನೆಲೆಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದೆ ಎಂದು ಭಾರತ ಹೇಳಿದೆ. ಪಾಕಿಸ್ತಾನವು ನಾಲ್ಕು ರಾಜ್ಯಗಳಾದ್ಯಂತ 26 ಸೇನಾ ಸ್ಥಳಗಳನ್ನು ಗುರಿಯಾಗಿಸಿಕೊಂಡ ಬಳಿಕ, ಭಾರತವು ಪಾಕಿಸ್ತಾನಿ ವಾಯುನೆಲೆಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದೆ ಎಂದು ಸರ್ಕಾರ ಹೇಳಿದೆ.

ಪಾಕಿಸ್ತಾನಿ ಸೇನೆಯು ಗಡಿ ಪ್ರದೇಶಗಳಿಗೆ ತನ್ನ ಸೈನಿಕರನ್ನು ಸ್ಥಳಾಂತರಿಸುತ್ತಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವ ಆಕ್ರಮಣಕಾರಿ ಉದ್ದೇಶವನ್ನು ಸೂಚಿಸುತ್ತದೆ. ಆದರೆ, ಭಾರತೀಯ ಸಶಸ್ತ್ರ ಪಡೆಗಳು ಹೆಚ್ಚಿನ ಕಾರ್ಯಾಚರಣೆಯ ಸನ್ನದ್ಧತೆಯಲ್ಲಿವೆ ಮತ್ತು ಎಲ್ಲಾ ಪ್ರತಿಕೂಲ ಕ್ರಮಗಳನ್ನು ಪರಿಣಾಮಕಾರಿಯಾಗಿ ಎದುರಿಸಲಾಗಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದರು.

ಸಂಘರ್ಷದ ಬಗ್ಗೆ ಮಾಹಿತಿಯನ್ನು ರವಾನಿಸುವಲ್ಲಿ ಸರ್ಕಾರದ ಭಾಗವಾಗಿರುವ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ, ಸೈನ್ಯವನ್ನು ಸಜ್ಜುಗೊಳಿಸುವ ಪಾಕಿಸ್ತಾನದ ಈ ನಿರ್ಧಾರವು ಆಕ್ರಮಣಕಾರಿ ಉದ್ದೇಶವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಭಾರತ-ಪಾಕ್ ಮಿಲಿಟರಿ ಸಂಘರ್ಷದ ಕುರಿತು ವಿಶೇಷ ವಿದೇಶಾಂಗ ಸಚಿವಾಲಯದ ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ವಿಂಗ್ ಕಮಾಂಡರ್ ವೋಮಿಕಾ ಸಿಂಗ್, "ಪಾಕಿಸ್ತಾನ ಸೇನೆಯು ಪಶ್ಚಿಮ ಗಡಿಯಾದ್ಯಂತ ಆಕ್ರಮಣಕಾರಿ ಕಾರ್ಯಾಚರಣೆ ನಡೆಸುತ್ತಲೇ ಇತ್ತು. ನಾಗರಿಕ ಪ್ರದೇಶಗಳು ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಲು ಪಾಕಿಸ್ತಾನ ಡೋನ್‌ಗಳು, ದೀರ್ಘ ವ್ಯಾಪ್ತಿಯ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳನ್ನು ಬಳಸಿಕೊಂಡಿದೆ ಎಂದರು.

ಪಾಕಿಸ್ತಾನ, ಪಂಜಾಬ್‌ನಲ್ಲಿ ಅತಿ ವೇಗದ ಕ್ಷಿಪಣಿಯನ್ನು ಉಡಾಯಿಸಿತ್ತು ಶ್ರೀನಗರ, ಅವಂತಿಪುರ ಮತ್ತು ಉಧಂಪುರದಲ್ಲಿನ ವೈದ್ಯಕೀಯ ಸೌಲಭ್ಯಗಳ ಮೇಲೆ ದಾಳಿ ಮಾಡಿತ್ತು. ಪಾಕಿಸ್ತಾನದ ಕ್ರಮಗಳಿಗೆ ಸೂಕ್ತ ಉತ್ತರ ನೀಡಲಾಗಿದೆ ಎಂದು ಖುರೇಷಿ ಹೇಳಿದರು.

(ಏಜೆನ್ಸೀಸ್)

ಪಾಕಿಸ್ತಾನ ಸೇನೆಯು ಪ್ರೋನ್‌ಗಳನ್ನು ಬಳಸಿ ವಾಯು ಒಳನುಸುಳುವಿಕೆ ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ ಭಾರೀ ಕ್ಯಾಲಿಬರ್ ಶಸ್ತ್ರಾಸ್ತ್ರಗಳ ಗುಂಡಿನ ದಾಳಿಯನ್ನು ಸಹ ನಡೆಸಿದೆ. ಈ ಬೆದರಿಕೆಗಳನ್ನು ನಮ್ಮ ಸಶಸ್ತ್ರ ಪಡೆಗಳು ಯಶಸ್ವಿಯಾಗಿ ತಟಸ್ಥಗೊಳಿಸಿದವು. ಆದಾಗ್ಯೂ, ಉಧಂಪುರ, ಪಠಾಣ್‌ಕೋಟ್, ಆದಂಪುರ ಮತ್ತು ಭುಜ್‌ನಲ್ಲಿರುವ ಭಾರತೀಯ ವಾಯುಪಡೆಯ ನೆಲೆಗಳಲ್ಲಿ ಹಾನಿ ಸಂಭವಿಸಿದೆ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net