More

    ಟಿ-20 ವಿಶ್ವಕಪ್​ಗೆ ಹಾರ್ದಿಕ್​ ಪಾಂಡ್ಯ ಸಾರಥ್ಯ?; ಸಿಡಿದೆದ್ದ ರೋಹಿತ್​ ಅಭಿಮಾನಿಗಳು

    ನವದೆಹಲಿ: ಜೂನ್​ 1ರಿಂದ ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ತನ್ನ ಆಭಿಯಾನವನ್ನು ಜೂನ್​ 05ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಬಳಿಕ ಜೂನ್​ 09ರಂದು ಬದ್ಧವೈರಿ ಪಾಕಿಸ್ತಾನದ ವಿರುದ್ಧ ಆಡಲಿದೆ.

    ಇನ್ನು ಟೀಂ ಇಂಡಿಯಾವನ್ನು ರೋಹಿತ್​ ಶರ್ಮಾ ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಮ್ಯಾಚ್​ ಪೋಸ್ಟರ್​ ವಿವಾದಕ್ಕೆ ಕಾರಣವಾಗಿದ್ದು, ರೋಹಿತ್​ ಅಭಿಮಾನಿಗಳು ಸ್ಟಾರ್​ ಸ್ಪೋರ್ಟ್ಸ್​ ವಿರುದ್ಧ ಕಿಡಿಕಾರಿದ್ದಾರೆ.

    ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಿಸಿದಂತೆ ಎರಡೂ ತಂಡಗಳ ನಾಯಕರನ್ನು ಒಳಗೊಂಡ ಪೋಸ್ಟರ್ ಅನ್ನು ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡಿದೆ. ಅದರಲ್ಲಿ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡದ ನಾಯಕರನ್ನಾಗಿ ತೋರಿಸಲಾಗಿದೆ. ಈ ಪೋಸ್ಟರ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಟಿ-20 ವಿಶ್ಬಕಪ್​ಗೆ ಹಾರ್ದಿಕ್​ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ind Vs Pak

    ಇದನ್ನೂ ಓದಿ: ಬಾಂಗ್ಲಾದೇಶ ಚುನಾವಣೆ; ಮತಗಟ್ಟೆ, ರೈಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

    ಇತ್ತ ರೋಹಿತ್​ ಶರ್ಮಾ ಅಭಿಮಾನಿಗಳು ಇದಕ್ಕೆ ಅಪಸ್ವರ ತೆಗೆದಿದ್ದು, ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್​ ಪಾಂಡ್ಯ ಇನ್ನೂ ಸಂಪೂರ್ಣ ಫಿಟ್​ ಆಗಿಲ್ಲ. ತಂಡಕ್ಕೆ ಮರಳುತ್ತಾರೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ. ಇದರ ಹೊರತ್ತಾಗಿಯೂ ಹಾರ್ದಿಕ್​ ಪಾಂಡ್ಯ ಅವರಿಗೆ ನಾಯಕತ್ವ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ರೋಹಿತ್​ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

    ಈಗಾಗಲೇ ಮುಂಬೈ ಇಂಡಿಯನ್ಸ್​ ನಾಯಕತ್ವದಿಂದ ರೋಹಿತ್​ ಶರ್ಮಾರನ್ನು ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯರನ್ನು ನೇಮಿಸಿದ್ದ ವಿಚಾರ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಕಿಚ್ಚು ಆರುವ ಮುನ್ನವೇ ಇದೀಗ ಮತ್ತೊಂದು ವಿವಾದ ಭುಗಿಲೆದಿದ್ದು, ಬಿಸಿಸಿಐ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts