More

    ಶೀತಗಾಳಿ, ಭದ್ರತಾ ಕಳವಳ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಮುಂದೂಡಿಕೆ

    ಇಸ್ಲಾಮಾಬಾದ್: ಶೀತಗಾಳಿ ಮತ್ತು ಭದ್ರತಾ ದೃಷ್ಟಿಯಿಂದ ಫೆ.8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆ ಮುಂದೂಡಲು ಪಾಕಿಸ್ತಾನದ ಸೆನೆಟ್ ನಿರ್ಣಯವನ್ನು ಅಂಗೀಕರಿಸಿದೆ.

    ಸೆನೆಟರ್ ದಿಲಾವರ್ ಖಾನ್ ಮಂಡಿಸಿದ ನಿರ್ಣಯವನ್ನು ಎಲ್ಲಾ ಶಾಸಕರು ಅನುಮೋದಿಸಿದರು. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮುರ್ತಾಜಾ ಸೊಲಂಗಿ ಮತ್ತು ಪಿಎಂಎಲ್-ಎನ್ ಸೆನೆಟರ್ ಅಫ್ನಾನ್ ಉಲ್ಲಾ ಈ ನಡೆಯನ್ನು ವಿರೋಧಿಸಿದರು.

    ಸಂವಿಧಾನವು ಪಾಕಿಸ್ತಾನದ ಪ್ರತಿಯೊಬ್ಬ ಪ್ರಜೆಗೂ ಮತ ಚಲಾಯಿಸುವ ಹಕ್ಕನ್ನು ಎತ್ತಿಹಿಡಿದಿದೆ. ಪಾಕಿಸ್ತಾನದ ಚುನಾವಣಾ ಆಯೋಗವು ಒಳಗೊಳ್ಳುವಿಕೆಯ ಮೇಲೆ ಅನಿಶ್ಚಿತವಾಗಿ ಮತ್ತು ಎಲ್ಲಾ ಪ್ರಾದೇಶಿಕ ಜನರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವ ಮೂಲಕ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ಬದ್ಧವಾಗಿದೆ ಎಂದು ನಿರ್ಣಯದಲ್ಲಿ ಹೇಳಿದೆ.

    ಇದನ್ನೂ ಓದಿ: ಎರಡನೇ ಬಾರಿ ಕೈ ಕೊಟ್ಟ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಪ್ರಯಾಣಿಸುತ್ತಿದ್ದ ವಿಮಾನ

    ಸಂವಿಧಾನವು ಪಾಕಿಸ್ತಾನದ ಪ್ರತಿಯೊಬ್ಬ ಪ್ರಜೆಗೂ ಮತ ಚಲಾಯಿಸುವ ಹಕ್ಕನ್ನು ಎತ್ತಿಹಿಡಿದಿದೆ. ಪಾಕಿಸ್ತಾನದ ಚುನಾವಣಾ ಆಯೋಗವು ಒಳಗೊಳ್ಳುವಿಕೆಯ ಮೇಲೆ ಅನಿಶ್ಚಿತವಾಗಿ ಮತ್ತು ಎಲ್ಲಾ ಪ್ರಾದೇಶಿಕ ಜನರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವ ಮೂಲಕ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ಬದ್ಧವಾಗಿದೆ ಎಂದು ಹೇಳಿದೆ.

    ರಾಜಕೀಯ ನಾಯಕರ ಭದ್ರತಾ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೆನೆಟ್​ ನಿರ್ಣಯದಲ್ಲಿ ತೀರ್ಮಾನಿಸಲಾಗಿದೆ. ಹಣಕಾಸು, ರಾಜಕೀಯ, ಹಾಗೂ ಭದ್ರತೆಯ ಕಾರಣಕ್ಕೆ ಚುನಾವಣೆ ಮುಂದಿನ ವರ್ಷದವರೆಗೆ ಚುನಾವಣೆ ಮುಂದೂಡಲು ಪ್ರಮುಖ ಕಾರಣ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts