ಎರಡನೇ ಬಾರಿ ಕೈ ಕೊಟ್ಟ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಪ್ರಯಾಣಿಸುತ್ತಿದ್ದ ವಿಮಾನ

Justin Trudeau
Published on

ನವದೆಹಲಿ: ಕುಟುಂಬದ ಸದಸ್ಯರ ಜೊತೆ ಜಮೈಕಾ ದ್ವೀಪಕ್ಕೆ ಪ್ರವಾಸಕ್ಕೆ ಹೋಗಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಮತ್ತೊಮ್ಮೆ ತಾಂತ್ರಿಕ ದೋಷ ಕಂಡು ಬಂದಿದೆ.

ಕೆನಡಾದ ಸಶಸ್ತ್ರ ಪಡೆಗಳು ದೇಶದ ಪ್ರಧಾನಿಯನ್ನು ಮರಳಿ ಕರೆತರಲು ಸಾಧ್ಯವಾದ ಪ್ರಯತ್ನ ಮಾಡುತ್ತಿವೆ. ಎರಡು ರಾಯಲ್ ಕೆನಡಿಯನ್ ಏರ್​ಫೋರ್ಸ್ ಬೋಯಿಂಗ್​ CC-144 ಚಾಲೆಂಜರ್‌ ವಿಮಾನಗಳು ಜಮೈಕಾಕ್ಕೆ ಕಳುಹಿಸಲಾಗಿತ್ತು ಎಂದು ರಾಷ್ಟ್ರೀಯ ರಕ್ಷಣಾ ಇಲಾಖೆಯ (DND) ವಕ್ತಾರ ಆಂಡ್ರೀ-ಆನ್ ಪೌಲಿನ್ ಖಚಿತಪಡಿಸಿದ್ದಾರೆ.

ಜ.4 ರಂದು ಪ್ರಧಾನಿ ಟ್ರೂಡೋ ಕೆನಡಾಕ್ಕೆ ತೆರಳುವುದು ನಿರ್ಧಾರವಾಗಿತ್ತು ಆದರೆ ಜ.2 ರಂದು ವಿಮಾನದ ತಪಾಸಣೆಯ ಸಂದರ್ಭದಲ್ಲಿ ತಾಂತ್ರಿಕ ದೋಷವಿರುವುದು ಪತ್ತೆಯಾಗಿದೆ. ಜ.3 ರಂದು ವಿಮಾನದ ತಾಂತ್ರಿಕ ಸಮಸ್ಯೆ ಸರಿಪಡಿಸಿದ್ದು ವಿಮಾನ ಸೇವೆಗೆ ಹಿಂತಿರುಗಿದೆ ಕೆನಡಾ ಸಶಸ್ತ್ರ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆ.12 ರಂದು ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಹೊಸದಿಲ್ಲಿಗೆ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ನಿಗದಿತ ದಿನದಂದು ಸ್ವದೇಶಕ್ಕೆ ಮರಳಬೇಕಿತ್ತು. ಆದರೆ ಎರಡು ದಿನ ಕಳೆದರೂ ಅವರಿಗೆ ತವರಿಗೆ ಮರಳುವುದು ಸಾಧ್ಯವಾಗುತ್ತಿಲ್ಲ. ವಿಮಾನ ವಿಘ್ನ ಅವರನ್ನು ಭಾರತದಲ್ಲಿಯೇ ಉಳಿಯುವಂತೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net