ಹುಡುಗರು ನಿಮ್ಮನ್ನು ನೋಡಿದಾಗ ಮೊದಲು ಗಮನಿಸೋದು ಏನು; ವೈರಲ್​ ಆಗುತ್ತಿದೆ ಜಾಹ್ನವಿ ಕಪೂರ್ ರಿಯಾಕ್ಷನ್

Janhvi Kushi
Published on

ಮುಂಬೈ: ಬಾಲಿವುಡ್‌ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ 8ನೇ ಸೀಸನ್ ಮುಕ್ತಾಯದ ಹಂತ ತಲುಪಿದ್ದು, ನಟಿ ಶ್ರೀದೇವಿ ಪುತ್ರಿಯರಾದ ಜಾಹ್ನವಿ ಕಪೂರ್ ಹಾಗೂ ಖುಷಿ ಕಪೂರ್​ ಅತಿಥಿಗಳಾಗಿ ಭಾಗಿಯಾಗಿದದ್ದರು ಮತ್ತು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ತಮ್ಮ ವೃತ್ತಿ ಬದುಕು, ಮುಂಬರುವ ಸಿನಿಮಾಗಳ ಕುರಿತು ಜಾಹ್ನವಿ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಜೊತೆ ಅವರು ಹೇಳಿದ ಒಂದು ಮಾತು ಎಲ್ಲರ ಗಮನ ಸೆಳೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಈ ಹಿಂದೆ ಕಾಫಿಇ ವಿತ್​ ಕರಣ್​ ಶೋ ಹಲವು ವಿವಾದಗಳನ್ನು ಹುಟ್ಟುಹಾಕಿದೆ. ಈ ಶೋನಲ್ಲಿ ರ‍್ಯಾಪಿಡ್ ಫೈರ್ ರೌಂಡ್​ನಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಕೆಲವರು ಮುಚ್ಚುಮರೆ ಇಲ್ಲದೇ ಉತ್ತರ ಕೊಡುತ್ತಾರೆ. ಕೆಲವರು ಇಂತಹ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಆದರೆ, ಜಾಹ್ನವಿ ತಮಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಮುಚ್ಚುಮರೆ ಇಲ್ಲದೆ ಉತ್ತರ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಹುಡುಗರು ನಿಮ್ಮನ್ನು ನೋಡಿದಾಗ ಮೊದಲು ಗಮನಿಸೋದು ಏನು ಎಂದು ಕರಣ್​ ಜೋಹರ್​ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಜಾಹ್ನವಿ ಮೊದಲಿಗೆ ನಾನು ಈ ಬಗ್ಗೆ ಕೇಳಿದಾಗ ಅವರು ನನ್ನ ಕಣ್ಣು ನೋಡುವುದಾಗಿ ಹೇಳಿದ್ದಾರೆ. ಆದರೆ, ನಾನು ಗಮನಿಸಿದ ಹಾಗೆ ಅವರ ಕಣ್ಣು ಬೇರೆ ಕಡೆ ಇರುತ್ತದೆ ಎಂದು ಜಾಹ್ನವಿ ಹೇಳಿದ್ದಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಹೀಗೆ ಹೇಳಲು ಧೈರ್ಯ ಬೇಕು ಎಂದಿದ್ದಾರೆ. ಪ್ರಚಾರಕ್ಕೋಸ್ಕರ ಈ ರೀತಿಯ ಹೇಳಿಕೆಗಳನ್ನು ನೀಡುವುದು ತಪ್ಪು ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net