More

    ಕ್ಷುಲಕ ಕಾರಣಕ್ಕೆ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಿದ ಸ್ಟೀವ್​ ಸ್ಮಿತ್​; ವಿಡಿಯೋ ವೈರಲ್

    ಸಿಡ್ನಿ: ಬ್ಯಾಟಿಂಗ್​ ಮಾಡುವ ವೇಳೆ ಬ್ಯಾಟ್ಸ್​ಮನ್​ಗಳು ಸೈಡ್ ಸ್ಕ್ರೀನ್ ಬಗ್ಗ ದೂರುವುದು ನಿನ್ನೆ ಮೊನ್ನೆಯ ವಿಚಾರವೇನಲ್ಲ. ಆದರೆ, ಸೈಡ್​ಸ್ಕ್ರೀನ್​ ವಿಚಾರವಾಗಿ ಇಲ್ಲೊಬ್ಬ ಆಟಗಾರ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಿದ ಘಟನೆ ನಡೆದಿದ್ದು, ಎಲ್ಲರ ಕಣ್ಣು ಕೆಂಪಗಾಗಿಸಿದೆ.

    ಸಿಡ್ನಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್​ ಪಂದ್ಯದ ವೇಳೆ ಅತಿಥೇಯ ತಂಡದ ಬ್ಯಾಟ್ಸ್​ಮನ್​​ ಸ್ಟೀವ್​ ಸ್ಮಿತ್​ ನಡವಳಿಕೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

    ಇದನ್ನೂ ಓದಿ: ಶತಕೋಟಿ ಕ್ಲಬ್​ ಸೇರಿದ ಕಾಟೇರ; ಮಾರಾಟವಾದ ಟಿಕೆಟ್​ ಎಷ್ಟು ಗೊತ್ತಾ?

    ಟೆಸ್ಟ್​ ಪಂದ್ಯದ ಮೂರನೇ ದಿನದಂದು ಸ್ಟೀವ್​​ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ ಸೈಡ್ ಸ್ಕ್ರೀನ್‌ನಲ್ಲಿ ಏನೋ ಕಾಣಿಸಿಕೊಂಡಿದೆ ಎಂದು ದೂಷಿಸಿದ ಸ್ಮಿತ್​ ಅಂಪೈರ್​ ಮೂಲಕ ಮೈದಾನದ ಸಿಬ್ಬಂದಿಗೆ ಸರಿಪಡಿಸುವಂತೆ ಸೂಚಿಸಿದರು. ಇದಾದ ಕೆಲಕ್ಷಣದ ಬಳಿಕ ಮತ್ತೊಮ್ಮೆ ಈ ಬಗ್ಗೆ ದೂರಿದ ಸ್ಟೀವ್​ ಸ್ಮಿತ್​ ಕೆಲಕಾಲ ಪಂದ್ಯವನ್ನು ಸ್ಥಗಿತಗೊಳಿಸುವಂತೆ ಅಂಪೈರ್​ ಬಳಿ ಮನವಿ ಮಾಡಿದರು.

    ಬಳಿಕ ಮೈದಾನದ ಸಿಬ್ಬಂದಿ ಸೈಡ್​ಸ್ಕ್ರೀನ್​ ಮೇಲೆ ಬಿದ್ದಿದ್ದ ಟೇಪ್​ಅನ್ನು ಹೊರತೆಗೆದಿದ್ದು, ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಹೊಡೆಯುವ ಮೂಲಕ ಸ್ಟೀವ್​ ಸ್ಮಿತ್​ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಇತ್ತ ಕಾಮೆಂಟೇಟರ್​ಗಳು ಸಹ ಸ್ಟೀವ್​ ಸ್ಮಿತ್​ ನಡೆಗೆ ಕಿಡಿಕಾರಿದ್ದು, ಇದು ಒಳ್ಳೆಯ ಲಕ್ಷಣವಲ್ಲ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts