ಶ್ರೀನಗರ: ಪಾಕಿಸ್ತಾನ ಸರ್ಕಾರವು ಪಾಕ್ ಆಕ್ರಮಿತ ಕಾಶ್ಮೀರದ(POK) ಜನರನ್ನು ವಿದೇಶಿಯರು ಎಂದು ಹೇಳಿದೆ. ಆದರೆ ಭಾರತ ಅವರನ್ನು ತನ್ನ ಪ್ರಜೆಗಳು ಎಂದು ಪರಿಗಣಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ(ಸೆಪ್ಟೆಂಬರ್8) ಹೇಳಿದ್ದಾರೆ.
ಇದನ್ನು ಓದಿ: ‘ಆಧಾರ್’ ಪಡೆಯಲು ಎನ್‌ಆರ್‌ಸಿ ಅರ್ಜಿ ಸಂಖ್ಯೆ ಸಲ್ಲಿಸಲು ಸೂಚನೆ; ಈ ತೀರ್ಮಾನಕ್ಕೆ ಸಿಎಂ ನೀಡಿದ ಕಾರಣ ಹೀಗಿದೆ..
ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಅಭ್ಯರ್ಥಿ ರಾಕೇಶ್ ಸಿಂಗ್ ಠಾಕೂರ್ ಅವರನ್ನು ಬೆಂಬಲಿಸಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಅಫಿಡವಿಟ್ನಲ್ಲಿ ಪಾಕಿಸ್ತಾನದ ಸಾಲಿಸಿಟರ್ ಜನರಲ್ ಅವರು ಪಿಒಕೆ ಜನರನ್ನು ‘ವಿದೇಶಿಯರು’ ಎಂದು ಕರೆದಿದ್ದಾರೆ, ಆದರೆ ನಾವು ಅವರನ್ನು ನಮ್ಮವರೆಂದು ಹೇಳುತ್ತೇವೆ. ಅವರನ್ನು ವಿದೇಶಿಯರೆಂದು ಕರೆಯುವುದಿಲ್ಲ, ಅವರು ನಮ್ಮ ಜನರು, ಅವರು ನಮ್ಮೊಂದಿಗೆ ಬಂದು ಸೇರಲಿ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಯಾದ ನಂತರ, ಪಿಒಕೆ ಜನರು ಭಾರತಕ್ಕೆ ಬಂದು ಸೇರಲು ಬಯಸುತ್ತಾರೆ ಎಂದು ತಿಳಿಸಿದರು.
ಮೆಹಬೂಬಾ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಾವು ಅಪ್ರಾಪ್ತರು ಮತ್ತು ಅಮಾಯಕರ ಮೇಲಿನ ಪ್ರಕರಣಗಳನ್ನು ಹಿಂಪಡೆದಿದ್ದೇವೆ. ಸಮಸ್ಯೆಯೆಂದರೆ ಪಿಡಿಪಿ ಸಹಾನುಭೂತಿ ಹೊಂದಿತ್ತು. ಜಮ್ಮು ಮತ್ತು ಕಾಶ್ಮೀರದ ಜನರು ಶಾಂತಿ ಮತ್ತು ಸಮೃದ್ಧಿಯ ಹಕ್ಕನ್ನು ಹೊಂದಿದ್ದಾರೆ ಎಂದು ಯಾವಾಗಲೂ ಪ್ರತ್ಯೇಕತಾವಾದಿಗಳಿಗೆ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.
ಇನ್ನು ಆಗಸ್ಟ್ 2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದ ಭದ್ರತೆಯಲ್ಲಾಗಿರುವ ಗಮನಾರ್ಹ ಬದಲಾವಣೆ ಬಗ್ಗೆ ತಿಳಿಸಿದರು. ಇಲ್ಲಿನ ಯುವಕರು ಒಂದು ಕಾಲದಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದಿದ್ದರೆ, ಈಗ ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದರು. 370ನೇ ವಿಧಿಯನ್ನು ಮರುಸ್ಥಾಪಿಸುವ ಭರವಸೆ ನೀಡಿರುವ ನ್ಯಾಷನಲ್ ಕಾನ್ಫರೆನ್ಸ್ ಕಾಂಗ್ರೆಸ್ ಮೈತ್ರಿಯನ್ನು ತರಾಟೆಗೆ ತೆಗೆದುಕೊಂಡು ಅವರು ಬಿಜೆಪಿ ಇರುವವರೆಗೂ ಇದು ಸಾಧ್ಯವಿಲ್ಲ. ಈ ಕ್ರಮವು ಪ್ರದೇಶದಾದ್ಯಂತ ಭದ್ರತೆ ಮತ್ತು ಏಕತೆಯನ್ನು ಬಲಪಡಿಸಿದೆ ಎಂದು ತಿಳಿಸಿದರು. (ಏಜೆನ್ಸೀಸ್)
ದೆಹಲಿ ಸಿಎಂ ಎಂದಿಗೂ ಪ್ರಧಾನಿ ಮೋದಿ ಮುಂದೆ ತಲೆ ಬಾಗುವುದಿಲ್ಲ; ಸುನೀತಾ ಕೇಜ್ರಿವಾಲ್