

ಕೋಟ: ಇಲ್ಲಿನ ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿ ಕನ್ಯಾಣ ಭಾಗದಲ್ಲಿ ಕೆಲವು ಮನೆಗಳ ಅಂಗಳಕ್ಕೆ ಮಳೆ ನೀರು ನುಗ್ಗಿದೆ.
ಈ ಭಾಗದಲ್ಲಿ ಮನೆಯಂಗಳಕ್ಕೆ ನೀರು ನುಗ್ಗಿರುವುದು ಇದೇ ಮೊದಲು ಎನ್ನುತ್ತಾರೆ ಸ್ಥಳೀಯರು. ತೋಡಿನಲ್ಲಿ ತುಂಬಿಕೊಂಡಿರುವ ಹೂಳೆತ್ತದಿರುವುದೇ ಈ ರೀತಿಯ ಸನ್ನಿವೇಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಗ್ರಾಮ ಪಂಚಾಯಿತಿ ಶೀಘ್ರವೇ ಹೂಳು ತೆರವು ಮಾಡಿ ನೀರಿನ ಸರಾಗ ಹರಿವಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.